ಚನ್ನಪಟ್ಟಣ: ತಾಲೂಕಿನ ಚಕ್ಕೆರೆಯ ಗಂಗೇದೊಡ್ಡಿಯ ಚಂದ್ರು ಎಂಬುವವರ ಸೀಮೆಹಸು ಮಂಗಳವಾರ ಚಿರತೆ ದಾಳಿಗೆ ಬಲಿಯಾಗಿದೆ.
ಕಾಡಾನೆಗಳ ಹಾವಳಿಯಿಂದ ಕಾಡಂಚಿನ ರೈತರು ಸಾಕಷ್ಟು ಬಳಲುತ್ತಿರುವ ಮಧ್ಯೆ ತಾಲೂಕಿನಲ್ಲಿ ಚಿರತೆ ಉಪಟಳ ಮತ್ತೆ ಹೆಚ್ಚಾಗಿದ್ದು, ಗ್ರಾಮಗಳಿಗೆ ಲಗ್ಗೆಇಟ್ಟು, ಸಾಕು ಪ್ರಾಣಿಗಳನ್ನು ಬಲಿ ಪಡೆಯುತ್ತಿವೆ. ಮಾಳಗಾಳು ಗ್ರಾಮದಲ್ಲಿ ಚಿರತೆ ದಾಳಿಗೆ ಸೀಮೆಹಸುವಿನ ಕರು ಸಾವಿಗೀಡಾಗಿದ್ದ ಪ್ರಕರಣ ಮಾಸುವ ಮುನ್ನವೇ ಗಂಗೇದೊಡ್ಡಿಯಲ್ಲೀಗ ಹಸು
ಬಲಿಯಾಗಿದೆ. ಅರಣ್ಯ ಇಲಾಖೆ ಕೂಡಲೇ ಚಿರತೆ ಸೆರೆ ಹಿಡಿಯಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
"
ಚಕ್ಕೆರೆ ಬಳಿಯ ಗಂಗೇದೊಡ್ಡಿ ಸೇರಿದಂತೆ ಈ ಭಾಗದಲ್ಲಿ ಚಿರತೆಯೊಂದು ಓಡಾಟ ನಡೆಸುತ್ತಿದೆ. ಅದನ್ನು ಸೆರೆಹಿಡಿಯಲು ಗ್ರಾಮದ ಬಳಿ ಬೋನು ಅಳವಡಿಸಲಾಗಿದೆ.