ಗಂಗೋತ್ಸವ ಪ್ರಯುಕ್ತ ಚನ್ನಪಟ್ಟಣ ತಾಲೂಕು ಮತ್ತೀಕೆರೆ ಬಳಿಯ ಖಾಸಗಿ ಹೋಟೆಲ್ನಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಶಾಸಕ ಸಿ.ಪಿ.ಯೋಗೇಶ್ವರ್, ನಗರ ಯೋಜನಾ ಪ್ರಾಧಿಕಾರದ ಅಧ್ಯ ಎಸ್.ಆರ್.ಪ್ರಮೋದ್, ಹಾಪ್ಕಾಮ್ಸ್ ಅಧ್ಯ ಶಿವಮಾದು, ಕಾಂಗ್ರೆಸ್ ನಗರ ಟಕದ ಸುನೀಲ್, ಯುವ ಕಾಂಗ್ರೆಸ್ ಜಿಲ್ಲಾಧ್ಯ ಚಂದ್ರಸಾಗರ್ ಇತರರಿದ್ದರು.
Published on:
Copied
Follow Us
ಚನ್ನಪಟ್ಟಣ: ತಾಲೂಕಿನ ಮಂಕುಂದ ಗ್ರಾಮವನ್ನು ಉಪರಾಜಧಾನಿ ಮಾಡಿಕೊಂಡು ಈ ನೆಲದಲ್ಲಿ ಗಂಗರು ಆಳ್ವಿಕೆ ಮಾಡಿದ್ದು, ಗಂಗರ ಇತಿಹಾಸವನ್ನು ಎಲ್ಲೆಡೆ ಸಾರುವ ನಿಟ್ಟಿನಲ್ಲಿ ಅದ್ದೂರಿಯಾಗಿ ಗಂಗೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲು ಸಕಲ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಶಾಸಕ ಸಿ.ಪಿ.ಯೋಗೇಶ್ವರ್ ತಿಳಿಸಿದರು.
ತಾಲೂಕಿನ ಮತ್ತೀಕೆರೆ ಬಳಿಯ ಖಾಸಗಿ ಹೋಟೆಲ್ನಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಉತ್ಸವಗಳನ್ನು ಆಯೋಜಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಕನಕಪುರದಲ್ಲಿ ನಡೆಯುವ ಕನಕೋತ್ಸವ ರೀತಿಯಲ್ಲೇ ಚನ್ನಪಟ್ಟಣದಲ್ಲಿ ಗಂಗೋತ್ಸವ ನಡೆಯಲಿದೆ. ಪ್ರತಿಯೊಬ್ಬರಿಗೂ ಅವಕಾಶ ನೀಡುವ ನಿಟ್ಟಿನಲ್ಲಿ ಎಲ್ಲ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು. ತಾಲೂಕಿನ ಜನ ಉತ್ಸವದಲ್ಲಿ ಸ್ವಯಂಪ್ರೇರಿತರಾಗಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ತಿಂಗಳ ಕಾಲ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಕ್ರೀಡೆ, ರಸಪ್ರಶ್ನೆ, ಪ್ರತಿಭಾ ಪುರಸ್ಕಾರ ಸೇರಿ ಜಾನಪದ ಕಾರ್ಯಕ್ರಮಗಳು ಹೋಬಳಿಮಟ್ಟ, ಜಿಲ್ಲಾ ಪಂಚಾಯಿತಿ ನಂತರ ತಾಲೂಕು ಮಟ್ಟದಲ್ಲಿ ನಡೆಯಲಿವೆ. ವಿಜೇತರು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಲಿದ್ದಾರೆ ಎಂದರು. ಶನಿವಾರ ಕ್ರಿಕೆಟ್ ಆರಂಭವಾಗಲಿದ್ದು, ಹಂತ ಹಂತವಾಗಿ ಎಲ್ಲ ಸಾಂಸತಿಕ, ಸಾಮಾಜಿಕ, ಕ್ರೀಡಾ ಚಟುವಟಿಕೆಗಳು ನಡೆಯಲಿವೆ ಎಂದರು. ಕೆಪಿಸಿಸಿ ಕಾರ್ಯದರ್ಶಿ ಹಾಗೂ ಕಾರ್ಯಕ್ರಮದ ಸಂಚಾಲಕ ದುಂತೂರು ವಿಶ್ವನಾಥ್ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಮಾಹಿತಿ ನೀಡಿದರು.
ಅಭಿವೃದ್ಧಿಗೆ ವೇಗ ತಾಲೂಕಿನ ಅಭಿವೃದ್ಧಿಗೆ ವೇಗ ನೀಡಲಾಗಿದೆ. ಖಾಸಗಿ ಬಸ್ ನಿಲ್ದಾಣ ಕಾಮಗಾರಿಯ ವಿವಾದ ಅಂತ್ಯಕ್ಕೆ ಬಂದಿದ್ದು, ನೂತನ ಪ್ರವಾಸಿ ಮಂದಿರ, ಲೋಕೋಪಯೋಗಿ ಕಟ್ಟಡ ಸೇರಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಶ್ರೀದಲ್ಲೇ ಚಾಲನೆ ನೀಡಲಾಗುವುದು ಎಂದು ಸಿಪಿವೈ ಮಾಹಿತಿ ನೀಡಿದರು.
ರಾಜಕೀಯ ಉದ್ದೇಶವಿಲ್ಲ
ಗಂಗೋತ್ಸವದ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ. ನಮ್ಮ ತಾಲೂಕಿನ ಜನರಿಗೆ ಅನೂಕೂಲವಾಗಲಿ, ಅವರಿಗೆ ಸೂಕ್ತ ವೇದಿಕೆ, ಪ್ರೋತ್ಸಾಹ ಸಿಗಲಿ ಹಾಗೂ ಯುವ ಸಮುದಾಯಕ್ಕೆ ನಮ್ಮ ನೆಲದ ಇತಿಹಾಸದ ಅರಿವಿರಲಿ ಎಂಬ ಉದ್ದೇಶ ಅಷ್ಟೇ ಎಂದ ಯೋಗೇಶ್ವರ್, ಕಾರ್ಯಕ್ರಮವು ನಮ್ಮ ಹೆಮ್ಮೆ.
ಗಂಗರ ನೆಪಿನಲ್ಲಿ ಕರ್ನಾಟಕ ಸೇರಿದಂತೆ ಅವರು ಆಳ್ವಿಕೆ ನಡೆಸಿದ್ದ ತಮಿಳುನಾಡು, ಆಂಧ್ರದ ಕೆಲ ಭಾಗಗಳನ್ನು ಸೇರಿಸಿಕೊಂಡು ಗಂಗೋತ್ಸವ ಆಯೋಜಿಸುತ್ತಿದೆ ಎಂದರು.