ಅಪಾಯ ಆಹ್ವಾನಿಸುವ ತೆರೆದ ಕೊಳವೆ ಬಾವಿ

ಮಾಗಡಿ ಪಟ್ಟಣದ 20ನೇ ವಾರ್ಡ್​ನಲ್ಲಿ ತೆರೆದ ಕೊಳವೆ ಬಾವಿ ತೆರೆದುಕೊಂಡಿರುವುದು.
ಮಾಗಡಿ ಪಟ್ಟಣದ 20ನೇ ವಾರ್ಡ್​ನಲ್ಲಿ ತೆರೆದ ಕೊಳವೆ ಬಾವಿ ತೆರೆದುಕೊಂಡಿರುವುದು.
Published on
ಮಾಗಡಿ: ಜನರ ಜೀವದೊಂದಿಗೆ ಚೆಲ್ಲಾಟವಾಡುವುದರಲ್ಲಿ ಸ್ಥಳಿಯ ಆಡಳಿತಗಳು ಎತ್ತಿದ ಕೈ ಎಂಬುದಕ್ಕೆ
ಪಟ್ಟಣದ 20ನೇ ವಾರ್ಡ್​ನ ಮುಖ್ಯ ರಸ್ತೆ ಬದಿಯಲ್ಲೇ, ಅದರಲ್ಲೂ ಶಾಲೆಯ ಸಮೀಪ ತೆರೆದ ಕೊಳವೆ ಬಾವಿ ಸಾಯಾಗಿದೆ.
ಸಾವಿನ ಬಾಯಿಯಂತೆ ತೆರೆದುಕೊಂಡಿದ್ದು, ಸಾರ್ವಜನಿಕರು ಹಾಗೂ ಚಿಕ್ಕಮಕ್ಕಳ ಪ್ರಾಣಕ್ಕೆ ಕುತ್ತು ತರುವ ಭೀತಿ ಎದುರಾಗಿದೆ.
ಕೆಲ ವರ್ಷಗಳ ಪುರಸಭೆಯಿಂದ ಈ ಕೊಳವೆ ಬಾವಿ (ಬೋರ್​ವೆಲ್​) ಕೊರೆಸಲಾಗಿದೆ. ಆದರೆ, ನಿರೀತ ಪ್ರಮಾಣದಲ್ಲಿ ನೀರು ಸಿಗದ ಕಾರಣ, ಬಾವಿಯನ್ನು ಸುರತವಾಗಿ ಮುಚ್ಚದೆ ಹಾಗೇ ಅರ್ಧಕ್ಕೆ ಬಿಟ್ಟು ಬೇಜವಾಬ್ದಾರಿ ಪ್ರದರ್ಶಿಸಲಾಗಿದೆ. ತೆರೆದ ಕೊಳವೆ ಬಾವಿ ರಸ್ತೆ ಬದಿಯಲ್ಲೇ ಇದ್ದು, ಅಪಾಯಕಾರಿ ಸ್ಥಿತಿಯಲ್ಲಿದೆ.
ಕೊಳವೆ ಬಾವಿ ಪಕ್ಕದಲ್ಲೇ ವಿಶಾಲವಾದ ಖಾಲಿ ಪ್ರದೇಶವಿದ್ದು, ನಿತ್ಯ ನೂರಾರು ಮಂದಿ ಸ್ಥಳಿಯರು, ವಿದ್ಯಾರ್ಥಿಗಳು ಮತ್ತು ಮಕ್ಕಳು ಇಲ್ಲಿ ಆಟವಾಡಲು ಬರುತ್ತಾರೆ. ಆಟದ ಭರಾಟೆಯಲ್ಲಿ ಮಕ್ಕಳು ಆಯಾ ತಪ್ಪಿ ಬಾವಿಗೆ ಬಿದ್ದರೆ ಸಂಭವಿಸಬಹುದಾದ ಅನಾಹುತಕ್ಕೆ ಯಾರು ಹೊಣೆ ಎಂಬ ಪ್ರಶ್ನೆ ಮೂಡಿದೆ. ಈಗಾಗಲೇ ಹಲವು ದುರಂತಗಳ ಕಹಿ ನೆನಪು ಕಣ್ಣಮುಂದಿದ್ದರೂ, ಅಧಿಕಾರಿಗಳು ಮಾತ್ರ ಮೌನಕ್ಕೆ ಶರಣಾಗಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ದಿನನಿತ್ಯ ಇದೇ ರಸ್ತೆಯಲ್ಲಿ ಓಡಾಡುತ್ತಾರೆ. ರಸ್ತೆ ಬದಿಯಲ್ಲೇ ಇಷ್ಟು ದೊಡ್ಡ ಗಂಡಾಂತರವಿದ್ದರೂ, ಕಂಡೂ ಕಾಣದಂತೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡವರಂತೆ ವರ್ತಿಸುತ್ತಿದ್ದಾರೆ ಎಂದು ಸ್ಥಳಿಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರಲ್ಲದೇ ಮುಂದಾಗುವ ಅನಾಹುತ ತಪ್ಪಿಸಲು ಪುರಸಭೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದು ಆಗ್ರಹಿಸಿದ್ದಾರೆ.
ಸಬೂಬು ಹೇಳಬೇಡಿ..
ಈ ಕುರಿತು ಈಗಾಗಲೇ ಸಾರ್ವಜನಿಕರು ಪುರಸಭೆಗೆ ಲಿಖಿತ ಮನವಿ ಸಲ್ಲಿಸಿದ್ದು, ಅಧಿಕಾರಿಗಳು ಸಬೂಬು ಹೇಳದೆ ತಕ್ಷಣ ಸ್ಥಳಕ್ಕೆ ಬಂದು ಸಾವಿನ ಬಾವಿಯನ್ನು ಮುಚ್ಚಬೇಕು ಎಂದು ಆಗ್ರಹಿಸಿದ್ದಾರೆ.
"

ಪಟ್ಟಣದ 20ನೇ ವಾಡ್​ನಲ್ಲಿ ಕೊಳವೆ ಬಾವಿಯನ್ನು ಮುಚ್ಚಲು ಈಗಾಗಲೇ ಸೂಚಿಸಲಾಗಿದೆ. ಜತೆಗೆ ಪಟ್ಟಣದಾದ್ಯಂತ ಇರುವ ಇಂತಹ ಎಲ್ಲ ಕೊಳವೆ ಬಾವಿಗಳನ್ನು ಪತ್ತೆ ಹಚ್ಚಿ ಮುಚ್ಚಿ ಯಾರಿಗೂ ತೊಂದರೆ ಆಗದಂತೆ ಕ್ರಮಕೈಗೊಳ್ಳಲಾಗುವುದು.

— > ಶ್ರೀನಿವಾಸ್​ ಪುರಸಭೆ ಮುಖ್ಯಾಧಿಕಾರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net