ವಿಳಾಸ ಕೇಳುವ ನೆಪದಲ್ಲಿ ನಾಲ್ವರ ಸರಕಳವು

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಕುದೂರು: ಠಾಣಾ ವ್ಯಾಪ್ತಿಯಲ್ಲಿ ಒಂದೇ ದಿನದಲ್ಲಿ ನಾಲ್ಕು ಕಡೆ ಸರಗಳವು ನಡೆದಿರುವುದು ಜನತೆಯನ್ನು ಬೆಚ್ಚೀಬಿಳಿಸಿದೆ.
ಕಳ್ಳಿಪಾಳ್ಯದಲ್ಲಿ ಮಂಗಳವಾರ ಭಕ್ತ ಮುನೇಶ್ವರ ಸ್ವಾಮಿ ರಥೋತ್ಸವದಲ್ಲಿ ಗ್ರಾಮದ ಮೀನಾ ಎಂಬುವವರ 40ಗ್ರಾಂ ಚಿನ್ನದ ಮಾಂಗಲ್ಯವನ್ನು ಕಳ್ಳರು ಕದ್ದೊಯ್ದಿದ್ದಾರೆ. ಕಾರಿನಲ್ಲಿ ಬಂದ ಇಬ್ಬರು ಹೆಂಗಸರು ಮತ್ತು ಒಬ್ಬ ವ್ಯಕ್ತಿ ದೇವಸ್ಥಾನಕ್ಕೆ ಹೋಗುವ ದಾರಿ ಕೇಳುವ ನೆಪದಲ್ಲಿ ಮಹಿಳೆಯ ಕುತ್ತಿಗೆಗೆ ಕೈಹಾಕಿ ಸರ ಕಸಿದುಕೊಂಡು ಪರಾರಿಯಾಗಿದ್ದಾರೆ. ಇನ್ನು ರಥೋತ್ಸದಲ್ಲಿ ಭಾಗವಹಿಸಲು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವಾಜರಹಳ್ಳಿಯ ಶಿವಮ್ಮ ಎಂಬುವವರ 40 ಗ್ರಾಂ ತೂಕದ ಚಿನ್ನದ ಎರಡೆಳೆ ಅವಲಕ್ಕಿ ಸರ ಕಳ್ಳರು ಕಸಿದುಕೊಂಡು ಹೋಗಿದ್ದಾರೆ. ಮಾಗಡಿಗೆ ಹೋಗುವ ದಾರಿ ಕೇಳುವ ನೆಪದಲ್ಲಿ ಮಹಿಳೆಯ ಕುತ್ತಿಗೆಗೆ ಕೈಹಾಕಿ ಸರ ಕದ್ದೊಯ್ದಿದ್ದಾರೆ.
ಇದೇ ರೀತಿ ಮಣ್ಣಿಗನಹಳ್ಳಿಯ ಗಂಗನರಸಮ್ಮ ಎಂಬುವವರ ಸುಮಾರು 32ಗ್ರಾಂನ ಚಿನ್ನದ ಮಾಂಗಲ್ಯಸರ ಕದಿಯಲಾಗಿದೆ. ಅಲ್ಲಿಯೂ ವಿಳಾಸಕೇಳುವ ನೆಪದಲ್ಲಿ ಕೃತ್ಯ ಎಸಗಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ತಿಪ್ಪಸಂದ್ರ ಹೋಬಳಿಯ ದೊಡ್ಡಮುದಿಗೆರೆಯ ಶ್ರೀಲ್ಮ ರಂಗನಾಥಸ್ವಾಮಿ ದೇವರ ರಥೋತ್ಸದಲ್ಲಿ ಭಾಗವಹಿಸಿದ್ದ ಹುಚ್ಚಹನುಮೇಗೌಡನ ಪಾಳ್ಯದ ರಂಗಮ್ಮ ಎಂಬುವವರ ಸುಮಾರು 30 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಕಳ್ಳರು ಲಪಟಾಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net