ಕುದೂರು: ಸೋಲೂರು ಹೋಬಳಿಯ ಬಿಟ್ಟಸಂದ್ರಪಾಳ್ಯ ಗ್ರಾಮದ ವಾಹನ ಚಾಲಕ ಸಯದ್ ಮುಬಾರಕ್ ಪಾಷಾ ಎಂಬುವವರು ಗುರುವಾರ ಎಪಿಕೆ ಫೈಲ್ ಕ್ಲಿಕ್ ಮಾಡಿ ಹಣ ಕಳೆದುಕೊಂಡಿದ್ದಾರೆ.
ವಾಟ್ಸ್ಆ್ಯಪ್ ಗ್ರೂಪ್ನಲ್ಲಿ ಬಂದ ಆರ್ಟಿಒ ಚಲನ್ ಮಾದರಿಯ ೈಲ್ ಕ್ಲಿಕ್ ಮಾಡಿದ ನಂತರ ನೆಲಮಂಗಲ ಶಾಖೆಯ ಕೆನರಾ ಬ್ಯಾಂಕ್ ಉಳಿತಾಯ ಖಾತೆಯಲ್ಲಿ ಹಂತಹಂತವಾಗಿ ಒಟ್ಟು 3.2 ಲಕ್ಷ ರೂ. ಕಳೆದುಕೊಂಡಿದ್ದಾರೆ. ರಾಮನಗರ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.