ಬೀದಿನಾಯಿ ಹಾವಳಿಗೆ 3 ಕುರಿ ಬಲಿ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಕುದೂರು: ಹೋಬಳಿಯ ಕೆಂಪಾಪುರ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ಬೀದಿ ನಾಯಿಗಳ ದಾಳಿಗೆ ಮೂರು ಕುರಿಗಳು ಬಲಿಯಾಗಿವೆ.
ಗ್ರಾಮದ ತನ್ವೀರ್​ ಪಾಷಾ ಅವರು ತಮ್ಮೇನಹಳ್ಳಿ ಕೆರೆ ಬಳಿ ಕುರಿಗಳು ಮೇಯಿಸಲು ಹೋಗಿದ್ದರು. ಈ ವೇಳೆ ಬೀದಿ ನಾಯಿಗಳು ಏಕಾಏಕಿ ದಾಳಿ ನಡೆಸಿವೆ. ಗಂಭೀರ ಗಾಯಗೊಂಡ ಮೂರು ಕುರಿಗಳು ಸಾವಿಗೀಡಾಗಿವೆ ಎನ್ನಲಾಗಿದೆ. ಕಾಗಿಮಡು ಗೇಟ್​ ಬಳಿಯ ಕೋಳಿ ಅಂಗಡಿಗಳು ಮಾಂಸದ ತ್ಯಾಜ್ಯವನ್ನು ರಾತ್ರಿ ಕೆರೆ ಬಳಿ ಸುರಿಯಲಾಗುತ್ತಿದೆ.
ಪರಿಣಾಮ ಈ ಭಾಗದಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಈ ಬಗ್ಗೆ ಈಗಾಗಲೇ ಅದರಂಗಿ ಹಾಗೂ ಹುಲಿಕಲ್​ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ದೂರು ನೀಡಿದ್ದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇನ್ನಾದರೂ ಸಂಬಂಧಿತ ಅಧಿಕಾರಿಗಳು ತ್ಯಾಜ್ಯ ಎಸೆಯುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳಿಯರು ಒತ್ತಾಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net