ಬೀದಿನಾಯಿ ದಾಳಿಗೆ 3 ಮೇಕೆಗಳು ಬಲಿ

ಮಾಗಡಿ ತಾಲೂಕು ಕೆಂಪಸಾಗರ ಗ್ರಾಮದ ಬಳಿ ಬೀದಿನಾಯಿಗಳ ಹಾವಳಿಯಿಂದ ಮೃತಪಟ್ಟ ಮೇಕೆಗಳು.
ಮಾಗಡಿ ತಾಲೂಕು ಕೆಂಪಸಾಗರ ಗ್ರಾಮದ ಬಳಿ ಬೀದಿನಾಯಿಗಳ ಹಾವಳಿಯಿಂದ ಮೃತಪಟ್ಟ ಮೇಕೆಗಳು.
Published on
ಮಾಗಡಿ: ತಾಲೂಕಿನ ಕೆಂಪಸಾಗರದಲ್ಲಿ ಮಂಗಳವಾರ ಬೀದಿ ನಾಯಿಗಳ ಹಿಂಡು ದಾಳಿ ಮಾಡಿದ್ದರಿಂದ 3 ಮೇಕೆಗಳು ಮೃತಪಟ್ಟಿವೆ.
ರೈತ ವೆಂಕಟೇಶ್​ ಅವರು ಮಂಗಳವಾರ ಕೆರೆ ಏರಿಯ ಮೇಲೆ ಮೇಕೆಗಳನ್ನು ಮೇಯಿಸುತ್ತಿದ್ದಾಗ 12ಕ್ಕೂ ಹೆಚ್ಚು ಬೀದಿನಾಯಿಗಳು ದಾಳಿ ನಡೆಸಿ ಮೇಕೆಗಳ ತಲೆ, ಕತ್ತು, ಹೊಟ್ಟೆಯ ಭಾಗಗಳಿಗೆ ತೀವ್ರ ಗಾಯಗೊಳಿಸಿದ್ದು, 3 ಮೇಕೆಗಳು ಸ್ಥಳದಲ್ಲೇ ಮೃತಪಟ್ಟಿವೆ. 2 ಮೇಕೆಗಳು ಪ್ರಾಣಾಪಾಯದಿಂದ ಪಾರಾಗಿವೆ.
ಬೀದಿನಾಯಿಗಳ ಉಪಟಳ ಮೀತಿಮೀರಿದೆ. ಮಕ್ಕಳನ್ನು ಶಾಲೆಗೆ ಕಳಿಸಲು ಹಾಗೂ ಸಾಕು ಪ್ರಾಣಿಗಳನ್ನು ಮೇಯಿಸಲು ಹೊಲ, ಗದ್ದೆಗಳಿಗೆ ಹೋಗಲು ಭಯದ ವಾತಾವರಣ ನಿರ್ಮಾಣವಾಗಿದೆ. ಜೀವನಕ್ಕೆ ಆಧಾರವಾಗಿದ್ದ ಮೇಕೆಗಳು ಸತ್ತಿದ್ದು, ಅಪಾರ ನಷ್ಟವಾಗಿದೆ ಎಂದು ರೈತ ವೆಂಕಟೇಶ್​ ಕಣ್ಣೀರು ಹಾಕಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net