

ಪ್ರಮುಖ ಮುಖ್ಯಾಂಶಗಳು
ರಾಮನಗರ
ಭಾರತ್ ಜೋಡೊ ಯುವ ಸಂಗಳ ಮೂಲಕ ಯುವಜನರಲ್ಲಿ ಕ್ರೀಡೆ, ಸಂಸ್ಕೃತಿ, ವೈಜ್ಞಾನಿಕ ಮನೋಭಾವ ಹಾಗೂ ಸಮುದಾಯಿಕ, ಸಾಮಾಜಿಕ ಸಾಮರಸ್ಯ ಉತ್ತೇಜಿಸಲು ಜಿಲ್ಲೆಯ ಗ್ರಾಪಂ ಹಾಗೂ ನಗರ ವಾರ್ಡ್‌ಗಳಲ್ಲಿ ಒಟ್ಟು 179 ಸಂಘಗಳನ್ನು ರಚಿಸಲು ಅವಕಾಶವಿದ್ದು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಮನವಿ ಮಾಡಿದ್ದಾರೆ.
ಜಿಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ವಾತನಾಡಿದ ಅವರು, ಪ್ರತಿ ಭಾರತ್ ಜೋಡೋ ಯುವ ಸಂಘಕ್ಕೆ ತಲಾ 10 ಲಕ್ಷ ರೂ. ಅನುದಾನ ಒದಗಿಸಲು ರಾಜ್ಯ ಸರ್ಕಾರವು ನಿರ್ಣಯಿಸಿದೆ. ವಿಕಾಸಶೀಲ ಮತ್ತು ಸೌಹಾರ್ದಶೀಲ ಕರ್ನಾಟಕ ನಿರ್ವಾಣಕ್ಕಾಗಿ ಕ್ರೀಡೆ, ಫಿಟ್‌ನೆಸ್ ಮತ್ತು ಕೌಶಲಾಭಿವೃದ್ಧಿ ಮೂಲಕ ಯುವಜನರನ್ನು ಸಬಲೀಕರಣಗೊಳಿಸಿ ತಳಮಟ್ಟದ ಆಡಳಿತದಲ್ಲಿ ಸಕ್ರಿಯ ಪಾಲುದಾರರನ್ನಾಗಿ ವಾಡಲಾಗುವುದು ಎಂದರು.
ಪ್ರತಿ ಗ್ರಾಪಂನಲ್ಲಿ ಒಂದು ಸಂ, ಪ್ರತಿ ಪಪಂ ವ್ಯಾಪ್ತಿಯಲ್ಲಿ ಸರಾಸರಿ 4000 ಜನಸಂಖ್ಯೆಗೆ ಒಂದು ಸಂಘ, ಪುರಸಭೆಯಲ್ಲಿ ಸರಾಸರಿ 6000 ಜನಸಂಖ್ಯೆಗೆ ಒಂದು ಸಂಘ, ನಗರಸಭೆಯಲ್ಲಿ ಸರಾಸರಿ 8000 ಜನ ಸಂಖ್ಯೆಗೆ ಒಂದು ಸಂ ಹಾಗೂ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸರಾಸರಿ 10,000 ಜನಸಂಖ್ಯೆಗೆ ಒಂದು ಸಂಘ ಸ್ಥಾಪಿಸಲು ಸರ್ಕಾರವು ನಿರ್ದೇಶಿಸಿದೆ. ಅಂತೆಯೇ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ 120 ಗ್ರಾಪಂ, ಒಂದು ಪಟ್ಟಣ ಪಂಚಾಯಿತಿ, ಎರಡು ಪುರಸಭೆ ಹಾಗೂ ಮೂರು ನಗರಸಭೆಗಳಿವೆ. ಗ್ರಾಮೀಣ ವ್ಯಾಪ್ತಿಯಲ್ಲಿ ಒಟ್ಟು 120 ಹಾಗೂ ನಗರ ವ್ಯಾಪ್ತಿಯಲ್ಲಿ 59 ಸೇರಿದಂತೆ ಒಟ್ಟಾರೆ ಜಿಲ್ಲೆಯಲ್ಲಿ 179 ಭಾರತ್ ಜೋಡೊ ಯುವ ಸಂಗಳನ್ನು ಸ್ಥಾಪಿಸಲು ಅವಕಾಶವಿದೆ ಎಂದರು.
ಸಂಘಗಳ ಉಸ್ತುವಾರಿ ಹಾಗೂ ಅನುಷ್ಠಾನ ಅಧಿಕಾರಿಗಳ ಸಮಿತಿಯನ್ನು ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ರಚಿಸಲಾಗಿದೆ. ನಗರ ಪ್ರದೇಶದಲ್ಲಿ ಅಪರ ಜಿಲ್ಲಾಧಿಕಾರಿಗಳು ಉಸ್ತುವಾರಿ ಅಧಿಕಾರಿಯಾಗಿದ್ದು, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಅನುಷ್ಠಾನಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರೆ, ಗ್ರಾಮೀಣ ಪ್ರದೇಶದಲ್ಲಿ ಜಿಲ್ಲಾ ಪಂಚಾಯತಿ ಸಿಇಓ ಉಸ್ತುವಾರಿ ಅಧಿಕಾರಿಯಾಗಿದ್ದು, ಉಪಕಾರ್ಯದರ್ಶಿ ಹಾಗೂ ಡಿಆರ್‌ಡಿಯುನ ಯೋಜನಾ ನಿರ್ದೇಶಕರು ಅನುಷ್ಠಾನಾಧಿಕಾರಿಯಾಗಿ ಹಾಗೂ ತಾಲೂಕು ಮಟ್ಟದಲ್ಲಿ ತಾಪಂ ಇಒ ಉಸ್ತುವಾರಿ ಅಧಿಕಾರಿಯಾಗಿದ್ದು, ಪಿಡಿಒಗಳು ಅನುಷ್ಠಾನಾಧಿಕಾರಿಗಳಾಗಿರುತ್ತಾರೆ ಎಂದು ಡಿಸಿ ಮಾಹಿತಿ ನೀಡಿದರು.
ಆಯಾ ವ್ಯಾಪ್ತಿಯ ಪಿಡಿಒಗಳು ಹಾಗೂ ವಾರ್ಡ್‌ಗಳಲ್ಲಿ ಕಂದಾಯ ನಿರೀಕ್ಷರು, ದೈಹಿಕ ಶಿಕ್ಷಕರು, ಪ್ರಾಂಶುಪಾಲರು ಸಂಘಗಳ ಮಾರ್ಗದರ್ಶಕರಾಗಿರುತ್ತಾರೆ. ಆಯಾ ಗ್ರಾಪಂ ಹಾಗೂ ವಾರ್ಡ್ ವ್ಯಾಪ್ತಿಯಲ್ಲಿ ಯುವಕರು ಹಾಗೂ ಯುವತಿಯರನ್ನು ಒಟ್ಟುಗೂಡಿಸಿ ಅವರಲ್ಲಿ ಭಾರತ್ ಜೋಡೋ ಯುವ ಸಂಘಗಳ ಕುರಿತು ಅರಿವು ಮೂಡಿಸಿ ನೋಂದಣಿಗೆ ಪ್ರೇರೇಪಿಸುವುದು ವಾರ್ಗದರ್ಶಕರ ಕಾರ್ಯ. ಸಂಘದ ಸದಸ್ಯತ್ವ ಪ್ರಕ್ರಿಯೆ ಆರಂಭಗೊಂಡಿದ್ದು, ಜಿಲ್ಲೆಯ 16ರಿಂದ 35 ವರ್ಷದೊಳಗಿನವರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಿಕೊಳ್ಳಲು ಶಾಲಾ-ಕಾಲೇಜುಗಳಲ್ಲಿ ಅರಿವು ಮೂಡಿಸುವಂತೆ ತಿಳಿಸಿದರು.
ನೋಂದಣಿ ವಿಧಾನ
ಬಿಜೆವೈಎಸ್ ಪೋರ್ಟಲ್ ಅಥವಾ ಮೊಬೈಲ್ ಆ್ಯಪ್ ಮೂಲಕ ಅಥವಾ ಗ್ರಾಪಂ ಹಾಗೂ ನಗರ ಪ್ರದೇಶಗಳಲ್ಲಿ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್, ನಾಗರೀಕ ಸೇವಾ ಕೇಂದ್ರಗಳ ಸಹಾಯದಿಂದ ಅರ್ಜಿ ಸಲ್ಲಿಸಬಹುದಾಗಿದೆ. ಒಂದು ಭಾರತ್ ಜೋಡೋ ಯುವ ಸಂಘ ಟಕ ರಚನೆಗೆ ಕನಿಷ್ಠ 100 ಸದಸ್ಯರಿರಬೇಕು. ನೋಂದಣಿಗೆ ಆಧಾರ್ ಕಡ್ಡಾಯವಾಗಿದ್ದು, ಪ್ರತಿಯೊಬ್ಬರಿಗೂ 10 ರೂ. ನೋಂದಣಿ ಶುಲ್ಕ ವಿಧಿಸಲಾಗುವುದು. ಪ್ರತಿ ಸಂಘವು ಕರ್ನಾಟಕ ಸೊಸೈಟೀಸ್ ರಿಜಿಸ್ಟ್ರೇಷನ್ ಆಕ್ಟ್ 1960ರಡಿಯಲ್ಲಿ ನೋಂದಾಯಿಸಲಾಗುವುದು. ಅರ್ಜಿದಾರರು ಅದೇ ಗ್ರಾಪಂ ಅಥವಾ ವಾರ್ಡ್‌ನ ಸಾವಾನ್ಯ ನಿವಾಸಿಯಾಗಿದ್ದು, ಒಬ್ಬರು ಒಂದು ಸಂಘದಲ್ಲಿ ವಾತ್ರ ಸದಸ್ಯರಾಗಬಹುದು. ಪ್ರತೀ ಘಟಕವು ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ 15 ಜನ ಸದಸ್ಯರ ಆಂತರಿಕ ಕಾರ್ಯಕಾರಿ ಸಮಿತಿಯನ್ನು ಹೊಂದಿರಬೇಕು. ಒಬ್ಬ ಅಧ್ಯಕ್ಷ, ಉಪಾಧ್ಯಕ್ಷ, ಖಜಾಂಚಿ ಮತ್ತು 12 ಜನ ಕಾರ್ಯಕಾರಿ ಸದಸ್ಯರಿರಬೇಕು. ಅಧ್ಯಕ್ಷರು ಅಥವಾ ಉಪಾಧ್ಯಕ್ಷರುಗಳಲ್ಲಿ ಒಬ್ಬ ಮಹಿಳೆ ಕಡ್ಡಾಯವಾಗಿ ಇರಬೇಕು ಎಂದು ಡಿಸಿ ತಿಳಿಸಿದರು.
ಎಸಿ ಬಿನೋಯ್, ಜಿಪಂ ಸಿಪಿಓ ಚಿಕ್ಕ ಸುಬ್ಬಯ್ಯ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಅನಿತಾ ಮುಂತಾದವರು ಇದ್ದರು.