

ನವದೆಹಲಿ: ಕೃಷಿ ವಿಮಾ ಕಂಪನಿ ಲಿಮಿಟೆಡ್ (ಎಐಸಿ) ಸಮೃದ್ಧಿಗಾಗಿ ಸಂಪೂರ್ಣ ಪ್ರಯತ್ನ ಪ್ರಾಬಿಟಿ ಾರ್ ಪ್ರಾಸ್ಪೆರಿಟಿ) ಘೋಷವಾಕ್ಯದೊಂದಿಗೆ 2026ರ ವಿಜಿಲೆನ್ಸ್ ಜಾಗೃತಿ ಸಪ್ತಾಹ ಆಚರಣೆ ಭಾಗವಾಗಿ ಗುರುವಾರ ವಾಕಥಾನ್ ಆಯೋಜಿಸಿತ್ತು.
ಎಐಸಿ ಕಾರ್ಯಕಾರಿ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ದಿನಿ ಜಾರ್ಜ್ ಮತ್ತು ಮುಖ್ಯ ವಿಜಿಲೆನ್ಸ್ ಅಧಿಕಾರಿ ಉದಯ್ ಲಕ್ಷ್ಮೀದಾಸ್ ದೇವಿ ವಾಕಥಾನ್ಗೆ ಚಾಲನೆ ನೀಡಿದರು. ಈ ವೇಳೆ ಕಂಪನಿಯ 150 ಅಧಿಕಾರಿಗಳು ಹಾಗೂ ಉದ್ಯೋಗಿಗಳು ಭಾಗವಹಿಸಿದ್ದರು.
ಸಂಸ್ಥೆಯಲ್ಲಿ ಸಮಗ್ರತೆ, ಪಾರದರ್ಶಕತೆ, ಹೊಣೆಗಾರಿಕೆ ಮತ್ತು ನೈತಿಕ ನಡವಳಿಕೆಯ ಬಗ್ಗೆ ಅರಿವು ಮೂಡಿಸುವುದು ಮತ್ತು ಕೆಲಸದ ವ್ಯವಸ್ಥೆಯಲ್ಲಿ ಪ್ರಾಮಾಣಿಕತೆ ಮತ್ತು ಶಿಸ್ತಿನ ಮೌಲ್ಯಗಳನ್ನು ಬಲಪಡಿಸುವುದು. ಸಿಬ್ಬಂದಿಯ ಉತ್ಸಾಹಭರಿತ ಭಾಗವಹಿಸುವಿಕೆಗೆ ಪೂರಕ ವಾತಾವರಣ ನಿರ್ಮಾಣ ಈ ಕಾರ್ಯಕ್ರಮದ ಉದ್ದೇಶವಾಗಿತ್ತು.
ಈ ಜಾಗೃತಿ ಸಪ್ತಾಹದ ಅಡಿಯಲ್ಲಿ ಎಐಸಿ ನೌಕರರ ಸಕ್ರಿಯ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ವಾಕಥಾನ್ ಆಯೋಜಿಸಿತ್ತು. ಈ ವೇಳೆ ಬಾಂಡ್ ಬರವಣಿಗೆ ಸ್ಪರ್ಧೆ, ಜಾಗರಣಾ ರಸಪ್ರಶ್ನೆ ಮತ್ತು ಇತರೆ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.