ಗುರಪ್ಪನಪಾಳ್ಯ ವಾರ್ಡ್‌ನಲ್ಲಿ ಐಬಿಎಂ ಕಚೇರಿ ಬಳಿ ಗುರುವಾರ ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ಸೂಜಿ, ಸಿರಿಂಜ್, ಪ್ಲಾಸ್ಟರ್, ಮಾತ್ರೆ ಡಬ್ಬಿ ಹಾಗೂ ಇನ್ನಿತರ ಅಪಾಯಕಾರಿ ವೈದ್ಯಕೀಯ ತ್ಯಾಜ್ಯವನ್ನು ಸುರಿದಿರುವುದು ಪೌರಕಾರ್ಮಿಕರು ಗಮನಿಸಿದ್ದಾರೆ. ತಕ್ಷಣವೇ ಮಾರ್ಷಲ್ಗಳಿಗೆ ಸುದ್ದಿ ಮುಟ್ಟಿಸಿ ಸ್ಥಳಪರಿಶೀಲನೆ ಮಾಡಿದಾಗ ವೈದ್ಯಕೀಯ ತ್ಯಾಜ್ಯದೊಂದಿಗೆ ಪಲ್ಸ್ ಪಾಲಿ ಕ್ಲಿನಿಕ್ ಹೆಸರಿನ ಪ್ರಿಸ್ಕ್ರಿಪ್ಷನ್ ಪತ್ರಗಳು ಕಂಡುಬಂದು ನಿಯಮ ಉಲ್ಲಂಸಿರುವುದು ದೃಢಪಡಿಸಿಕೊಳ್ಳಲಾಯಿತು.