ಬೆಂಗಳೂರು: ವೈದ್ಯ ಮತ್ತು ದಂತ ವೈದ್ಯಕಿಯ ಕೋರ್ಸ್ಗಳ ಪ್ರವೇಶಕ್ಕೆ ಎರಡನೇ ಸುತ್ತಿನ ಸೀಟು ಹಂಚಿಕೆ ತಾತ್ಕಾಲಿಕ ಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಶುಕ್ರವಾರ ಪ್ರಕಟಿಸಿದೆ. ಎಂಸಿಸಿ, ಕೆಇಎಯಿಂದ ಕೌನ್ಸೆಲಿಂಗ್ ಸೀಟು ಹಂಚಿಕೆಯಾಗಿರುವ ಅಭ್ಯರ್ಥಿಗಳು ಒಂದು ವೇಳೆ ಎಂಸಿಸಿ ಸೀಟಿಗೆ ಪ್ರವೇಶ ಪಡೆಯಲು ಇಚ್ಛಿಸಿದರೆ, ಅಂಥವರು ಸೆ.14ರೊಳಗೆ ಚಾಯ್ಸ್ 4 ಆಯ್ಕೆ ಮಾಡಿಕೊಂಡು ಕೆಇಎಯಿಂದ ಹೊರ ಹೋಗಬಹುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ. ಹೊರಹೋಗುವ ಅಭ್ಯರ್ಥಿಗಳಿಂದ ತೆರವಾಗುವ ಸೀಟುಗಳನ್ನು 2ನೇ ಸುತ್ತಿಗೆ ಪರಿಗಣಿಸಿ, ಮತ್ತೊಮ್ಮೆ ಸೀಟು ಹಂಚಿಕೆ ಮಾಡಿ ಅಂತಿಮ ಫಲಿತಾಂಶ ಪ್ರಕಟಿಸಲಾಗುವುದು ಎಂದಿದ್ದಾರೆ. ವೈದ್ಯಕಿಯ ಕೋರ್ಸ್ನ 12,010 ಸೀಟುಗಳ ಪೈಕಿ 11,626 ಸೀಟು ಹಂಚಿಕೆಯಾಗಿವೆ. ಮ್ಯಾನೇಜ್ಮೆಂಟ್ ಕೋಟಾದಡಿ 384 ಸೀಟು ಬಾಕಿ ಉಳಿದಿದ್ದು, ದಂತ ವೈದ್ಯಕಿಯ ಕೋರ್ಸ್ನಲ್ಲಿ ಎಲ್ಲ 2,689 ಸೀಟುಗಳೂ ಹಂಚಿಕೆಯಾಗಿವೆ ಎಂದು ತಿಳಿಸಿದ್ದಾರೆ.