ಜೂ.2ಕ್ಕೆ ಔಷಧ ಸಸ್ಯ ಉತ್ಪನ್ನಗಳ ತಯಾರಿಕೆ ತರಬೇತಿ

training
training
Published on

ಪ್ರಮುಖ ಮುಖ್ಯಾಂಶಗಳು

  • ಬೆಂಗಳೂರು ಕೃಷಿ ವಿವಿ ಕ್ಯಾಂಪಸ್​​​ ಜಿಕೆವಿಕೆಯಲ್ಲಿ ಆಯೋಜನೆ
ಬೆಂಗಳೂರು: ಇತ್ತೀಚಿಗೆ ಜನಸಾಮಾನ್ಯರಲ್ಲಿ ಹೆಚ್ಚುತ್ತಿರುವ ಆರೋಗ್ಯ ಕಾಳಜಿಯಿಂದ ಔಷಧ ಹಾಗೂ ಸುಗಂಧ ಸಸ್ಯಗಳಿಂದ ತಯಾರಿಸಲಾದ ನೈಸರ್ಗಿಕ ಆರೋಗ್ಯವರ್ಧಕ ಉತ್ಪನ್ನಗಳು ಆರೋಗ್ಯದ ಮೇಲೆ ಪ್ರಮುಖ ಪಾತ್ರ ವಹಿಸುತ್ತಿವೆ.
ಈ ಹಿನ್ನೆಲೆಯಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು (ಯುಎಎಸ್-ಬಿ) ತನ್ನ ತೋಟಗಾರಿಕೆ ವಿಭಾಗದಿಂದ ಸಾರ್ವಜನಿಕರಿಗೆ ಅವುಗಳ ಬಳಕೆ ಕುರಿತು ಜಾಗೃತಿ ಮೂಡಿಸುತ್ತಿದ್ದು, ಈಗ ತರಬೇತಿಯನ್ನು ನೀಡಲಾರಂಭಿಸಿದೆ.
ಔಷಧ ಸಸ್ಯ ಉತ್ಪನ್ನಗಳ ತಯಾರಿಕೆಗೆಂದೇ ತರಬೇತಿಯನ್ನು ಜೂ.2ರಂದು ನಿಗದಿ ಮಾಡಲಾಗಿದೆ. ಮೂವತ್ತು ಮಂದಿಗೆ ಮಾತ್ರ ಅವಕಾಶ ಇರುವುದರಿಂದ ಶುಲ್ಕ ಸಹಿತ ಮೇ 22ರೊಳಗೆ ಆಸಕ್ತರು ತಮ್ಮ ಹೆಸರನ್ನು ನೋಂದಾಯಿಸಬೇಕಿದೆ, ತರಬೇತಿಗೆ ಬೇಕಾದ ಪದಾರ್ಥಗಳನ್ನು ವಿವಿಯೇ ಒದಗಿಸಲಿದೆ. ಆಸಕ್ತರು ಯುಎಎಸ್-ಬಿ, ತೋಟಗಾರಿಕೆ ವಿಭಾಗದ ಅಧಿಕಾರಿಗಳನ್ನು ಮೊ: 9980326928 ಸಂಪರ್ಕಿಸಬಹುದಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net