ಮುಖ್ಯರಸ್ತೆಯ ಎರಡೂ ಬದಿಯ ಸರ್ವೀಸ್ ರಸ್ತೆಗಳಲ್ಲೂ ವಾಹನದಟ್ಟಣೆ ಇರುತ್ತದೆ. ಈ ಮಾರ್ಗದಲ್ಲಿ ಖಾಸಗಿ ಕಂಪನಿಗಳು, ಶಾಲಾ&ಕಾಲೇಜುಗಳು, ವಾಣಿಜ್ಯ ಮಳಿಗೆಗಳಿದ್ದು, ಕಾರ್ಮಿಕರನ್ನು ಕರೆತರಲು ಕ್ಯಾಬ್ಗಳು ಬರುತ್ತವೆ. ಜತೆಗೆ ಶಾಲಾ ವಾಹನಗಳು, ಖಾಸಗಿ ವಾಹನಗಳು ಏಕಕಾಲದಲ್ಲಿ ಸಂಚರಿಸುವುದರಿಂದ ದಟ್ಟಣೆಯು ನರಕಯಾತನೆಯಾಗಿದೆ. ಯಾರೊಬ್ಬರೂ ಸರಿಯಾದ ಸಮಯಕ್ಕೆ ನಿಗದಿತ ಸ್ಥಳವನ್ನು ತಲುಪುವ ಗ್ಯಾರಂಟಿ ಇಲ್ಲ.