ಪ್ರಸ್ತುತ ವಿಶ್ವದಲ್ಲಿ ಚೀನಾ ದೇಶವು ಅತಿಹೆಚ್ಚು (ಶೇ.28) ಪ್ರಮಾಣದಲ್ಲಿ ಜೇನು ಉತ್ಪತ್ತಿ ಮಾಡುತ್ತಿದೆ. ನಂತರದಲ್ಲಿ ಟರ್ಕಿ (ಶೇ.6), ಇರಾನ್ (ಶೇ.4.5) ಇದ್ದು, ಭಾರತ ಶೇ.3ರ ಪಾಲು ಹೊಂದುವ ಮೂಲಕ 7ನೇ ಸ್ಥಾನದಲ್ಲಿದೆ. ದೇಶದಲ್ಲಿ ಹೆಚ್ಚಿನ ಸಂಖ್ಯೆಯ ಜೀವ ವೈವಿಧ್ಯ ತಾಣಗಳು ಹಾಗೂ ಕೃಷಿ ಪ್ರದೇಶ ಇರುವುದರಿಂದ ಜೇನು ಸಾಕಣೆಗೆ ಹೇರಳ ಅವಕಾಶವಿದ್ದು, ಇದನ್ನು ಸದ್ಬಳಕೆ ಮಾಡಿಕೊಳ್ಳಲು ಸರ್ಕಾರ ಹೊಸ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಬಹುದಾಗಿದೆ ಎಂದು ರಾಜಸಾಬ್ ಸರ್ಕಾರಕ್ಕೆ ಸಲಹೆ ನೀಡಿದರು.