

ಬೆಂಗಳೂರು: ರಾಜ್ಯದ ಗ್ರಾಮ ಪಂಚಾಯತಿಗಳಿಗೆ ನೇಮಿಸಲಾದ ಆಡಳಿತಾಧಿಕಾರಿಗಳ ಅವಧಿಯನ್ನು ಮುಂದಿನ ಆರು ತಿಂಗಳವರೆಗೆ ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿದೆ.
2020-2025ನೇ ಸಾಲಿನಲ್ಲಿ ರಾಜ್ಯದ ವಿವಿಧ ಗ್ರಾಪಂ ಗಳಿಗೆ ನಡೆದ ಸಾರ್ವತ್ರಿಕ ಚುನಾವಣೆ ಅವಧಿ ಮುಕ್ತಾಯದ ದಿನಾಂಕದಿಂದ ಜಾರಿಗೆ ಬರುವಂತೆ ಆಡಳಿತಾಧಿಕಾರಿಗಳನ್ನು ನೇಮಿಸಲಾಗಿತ್ತು.
ಈಗಾಗಲೇ ಕೆಲ ಗ್ರಾಪಂ ಆಡಳಿತಾಧಿಕಾರಿಗಳ ನೇಮಕದ ಅವಧಿಯು 6 ತಿಂಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಹಾಗೂ ಇನ್ನೂ ಚುನಾವಣೆ ನಡೆಸಲಾಗಿಲ್ಲ.
ಹೀಗಾಗಿ ಆಡಳಿತಾಧಿಕಾರಿಗಳ ಅವಧಿ ಪೂರ್ಣಗೊಂಡ, ಪೂರ್ಣಗೊಳ್ಳಲಿರುವ ಪಂಚಾಯಿತಿಗಳಿಗೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 321 ಮುಂದಿನ ಆರು ತಿಂಗಳ ಕಾಲಾವಧಿಗೆ ಡಳಿತಾಧಿಕಾರಿಗಳ ಅವಧಿ ವಿಸ್ತರಿಸಲಾಗಿದೆ ಎಂದು ಸರ್ಕಾರದ ಪದನಿಮಿತ್ತ ಕಾರ್ಯದರ್ಶಿ ತಿಳಿಸಿದ್ದಾರೆ.