ಯುವತಿ ಹಿಂದೆ ಹೋದ ಟೆಕ್ಕಿ 1.66 ಕೋಟಿ ರೂ. ಕಳ್ಕೊಂಡ

Dating app fraud
Dating app fraud
Published on

ಪ್ರಮುಖ ಮುಖ್ಯಾಂಶಗಳು

  • ಮದುವೆ ಮಾಡಿಕೊಳ್ಳುವುದಾಗಿ ವಂಚನೆ
  • ಸೈಬರ್ ಕ್ರೈಮ್ ಠಾಣೆಯಲ್ಲಿ ಯುವತಿ ವಿರುದ್ಧ FIR

ಬೆಂಗಳೂರು: ಡೇಟಿಂಗ್ಆ್ಯಪ್‌ನಲ್ಲಿ ಪರಿಚಯವಾಗಿದ್ದಯುವತಿ, ಟೆಕ್ಕಿಗೆ1.66 ಕೋಟಿ ರೂ.ವಂಚಿಸಿರುವುದು ತಡವಾಗಿಬೆಳಕಿಗೆ ಬಂದಿದೆ.

ನೀಲಾದ್ರಿನಗರನಿವಾಸಿ ಸೌರವ್ ದುಬೆ (32) ಹಣಕಳೆದುಕೊಂಡ ಖಾಸಗಿ ಕಂಪನಿ ಉದ್ಯೋಗಿ.ಸಾಮಾಜಿಕ ಜಾಲತಾಣ ಮೂಲಕಪರಿಚಯವಾಗಿದ್ದ ಅಪರಿಚಿತ ರಿಯಾಅಗರ್ವಾಲ್ ವಿರುದ್ಧ ನಗರದ ಆಗ್ನೇಯಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣದಾಖಲಾಗಿದೆ.

ಸೌರವ್,‘ಟಂಟನ್ ಡೇಟಿಂಗ್ಆ್ಯಪ್ ಬಳಸುತ್ತಿದ್ದ. ಈವೇಳೆ ರಿಯಾ ಅಗರ್ವಾಲ್ ಎಂಬಾಕೆಯಪರಿಚಯವಾಗುತ್ತದೆ. ಆಗರಿಯಾ ಮತ್ತು ಟೆಕ್ಕಿಯ ನಡುವೆಆತ್ಮಿಯತೆ ದಿನದಿಂದ ದಿನ ಹೆಚ್ಚುತ್ತದೆ.ಕೊನೆಗೆ ಆ ಯುವತಿ ನಿನ್ನನ್ನೇಮದುವೆ ಆಗುತ್ತೇನೆಂದು ಟೆಕ್ಕಿಗೆಬಲವಾಗಿ ನಂಬಿಸಿದ್ದಳು.

ಬಣ್ಣದಮಾತಿಗೆ ಮರಳಾಗಿದ್ದ ಸೌರವ್,ಅವಳ ಪ್ರತಿ ಮಾತಿಗೂ ತಲೆಬಾಗಿ ನಡೆಯುತ್ತಿದ್ದ. ಇದನ್ನೇಅಸವಾಗಿಸಿಕೊಂಡ ಅವಳು,ವ್ಯಾಟ್ಸ್‌ಪ್,ಇನ್‌ಸ್ಟಾಗ್ರಾಂ ಹಾಗೂಟೆಲಿಗ್ರಾಂನಲ್ಲಿ ಸಂಪರ್ಕಸಾಧಿಸಿಕೊಂಡು ಆತ್ಮಿಯತೆಹೆಚ್ಚಿಸಿಕೊಂಡು ಟೆಕ್ಕಿಗೆಬಕ್ರಾ ಮಾಡಿದ್ದು, February 5ರಿಂದ ಮೇ 9ರವರೆಗೆ ಆನ್‌ಲೈನ್ ಮುಖೇನಸಂಪರ್ಕದಲ್ಲಿದ್ದು, ಬರೊಬ್ಬರಿ1,66,37,000 ರೂ.ಗಳಷ್ಟುವಂಚಿಸಿದ್ದಾಳೆ.

ಕಡಿಮೆಅವಧಿಯಲ್ಲಿ ಕೋಟಿ ಗಳಿಸುವ ಆಮಿಷ:

ಬಲವಾಗಿನಂಬಿದ್ದ ಟೆಕ್ಕಿಗೆ,ಟ್ರೇಡಿಂಗ್‌ನಲ್ಲಿ ಹಣಹೂಡಿಕೆ ಮಾಡಿದರೆ ಅತೀ ಕಡಿಮೆಅವಧಿಯಲ್ಲಿ ಕೋಟ್ಯಂತರ ರೂಪಾಯಿಲಾಭ ಗಳಿಸಬಹುದೆಂದು ಆಮಿಷಒಡ್ಡಿದ್ದರಿಂದ ಕೋಟ್ಯಂತರರೂ.ಗಳನ್ನು ಹೂಡಿಕೆಮಾಡಿದ್ದಾನೆ. ಕೊನೆಗೆಲಾಭದ ಮೊತ್ತ ಮತ್ತು ಅಸಲು ಹಣಹಿಂದಿರುಗಿಸುವಂತೆ ಮನವಿ ಮಾಡಿಕೊಂಡಾಗಆಕೆ ತನ್ನ ೆನ್ ಸ್ವೀಚ್ ಆ್ ಮಾಡಿಕೊಂಡುಈತನ ಸಂಪರ್ಕದಿಂದ ದೂರವಾದ ಬಳಿಕತಾನು ಸಂಪೂರ್ಣ ಮೋಸ ಹೋಗಿದ್ದೇನೆಂದುತಿಳಿದು ಆಗ್ನೇಯ ವಿಭಾಗದ ಸೈಬರ್ಕ್ರೈಮ್ ಠಾಣೆಯಲ್ಲಿ ದೂರುದಾಖಲಿಸಿದ್ದಾರೆ. ದೂರಿನಮೇರೆಗೆ ಪೊಲೀಸರು ತನಿಖೆ ನಡೆಸಿದ್ದಾರೆ.

ಮೂರೇತಿಂಗಳಲ್ಲಿ 1.66 ಕೋಟಿಗುಳುಂ

ಟೆಕ್ಕಿಯು,ನನ್ನ ಭಾವಿ ಪತ್ನಿ ಹಣಗಳಿಸುವ ದಾರಿ ಹೇಳಿ ಕೊಡುತ್ತಿದ್ದಾಳೆಎಂದು ಸಂತಸದಿಂದ ಅವಳು ಹೇಳಿದಷ್ಟುಟ್ರೇಡಿಂಗ್‌ನಲ್ಲಿ ಹೂಡಿಕೆಮಾಡುತ್ತಿದ್ದ. ಒಮ್ಮೆ3.5 ಲಕ್ಷ ರೂ.ಗಳುಇನ್ನೊಮ್ಮೆ 10 ಲಕ್ಷರೂ.ಗಳು ಹೀಗೆ ಒಟ್ಟು28 ವಿವಿಧ ವಹಿವಾಟಿನಮೂಲಕ ಕೋಟಿಗಟ್ಟಲೆ ಹೂಡಿಕೆ ಮಾಡಿಎಲ್ಲವನ್ನೂ ಕಳೆದುಕೊಂಡಿದ್ದಾನೆ.ಕೊನೆಗೆ ಕೇವಲ 4,250 ರೂ.ಗಳಿಸಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net