ಮಾದರಿ ಬೃಹತ್​ 4 ಕಾರ್ಪ್​ ನಿರ್ಮಾಣದ ಗುರಿ

ಅರಣ್ಯ ಇಲಾಖೆಯ ನಗರವನ ಯೋಜನೆಯಡಿ ಪಣತೂರು ಸಮೀಪದ 45 ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಿರುವ ವೃಕೋದ್ಯಾನವನ್ನು ಸಚಿವ ರಾಮಲಿಂಗಾರೆಡ್ಡಿ ಬುಧವಾರ ಉದ್ಘಾಟಿಸಿದರು. ಪಿ.ಸಿ.ಮೋಹನ್​, ಮಂಜುಳಾ, ಮೀನಾಕ್ಷಿ ನೇಗಿ ಇದ್ದರು.
ಅರಣ್ಯ ಇಲಾಖೆಯ ನಗರವನ ಯೋಜನೆಯಡಿ ಪಣತೂರು ಸಮೀಪದ 45 ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಿರುವ ವೃಕೋದ್ಯಾನವನ್ನು ಸಚಿವ ರಾಮಲಿಂಗಾರೆಡ್ಡಿ ಬುಧವಾರ ಉದ್ಘಾಟಿಸಿದರು. ಪಿ.ಸಿ.ಮೋಹನ್​, ಮಂಜುಳಾ, ಮೀನಾಕ್ಷಿ ನೇಗಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • 45 ಎಕರೆಯಲ್ಲಿ ವೃಕೋದ್ಯಾನ ಅಭಿವೃದ್ಧಿ
  • ಅರಣ್ಯ ಸಚಿವ ಸಚಿವ ರಾಮಲಿಂಗಾರೆಡ್ಡಿ ಉದ್ಘಾಟನೆ
ಬೆಂಗಳೂರು: ನಗರದ ವಿವಿಧೆಡೆ 4 ಮಾದರಿ ಬೃಹತ್​ ಪಾರ್ಕ್​ಗಳನ್ನು ನಿರ್ಮಾಣ ಮಾಡುವ ಗುರಿ ಇದೆ ಎಂದು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ವೈಟ್​ಫೀಲ್ಡ್​- ಸಮೀಪ ಪಣತೂರು ಅರಣ್ಯ ಇಲಾಖೆಯ ನಗರವನ ಯೋಜನೆಯಡಿ 45 ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಿರುವ ವೃಕ್ಷೋದ್ಯಾನವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು. ಅರಣ್ಯ ಪ್ರದೇಶ ಕೊರತೆಯಿಂದ ಪರಿಣಾಮಗಳು ಎದುರಾಗುತ್ತಿವೆ. ಇದನ್ನು ಅರಿತು ಸಾರ್ವಜನಿಕರು ಹಸರೀಕರಣ ಹೆಚ್ಚಿಸಲು ಸಹಕಾರ ನೀಡಬೇಕು ಎಂದರು.
ಲಾಲ್​ಬಾಗ್​, ಕಬ್ಬನ್​ ಪಾರ್ಕ್​ ಹೊರತುಪಡಿಸಿ ಇನ್ಯಾವುದೇ ಬೃಹತ್​ ಉದ್ಯಾನವನ ಇಲ್ಲದಿರುವುದರಿಂದ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದೆ. ಜನತೆಗೆ ಹಸಿರು ವಾತಾವರಣವನ್ನು ಕಲ್ಪಿಸುವುದು, ಪರಿಸರ ಸಂರಕ್ಷಣೆ, ಆರೋಗ್ಯಕರ ವಾತಾವರಣ ಸೃಷ್ಟಿಸುವುದು ಯೋಜನೆಯ ಮುಖ್ಯ ಉದ್ದೇಶ ಎಂದು ತಿಳಿಸಿದರು.
ಪಣತೂರು ಸಮೀಪದ 145 ಎಕರೆ ಜಾಗ ಅರಣ್ಯ ಇಲಾಖೆಯ ಸುಪರ್ದಿಯಲ್ಲಿದ್ದು, 45 ಎಕರೆಯಲ್ಲಿ ಈಗಾಗಲೇ ನಗರವನ ಯೋಜನೆಯಡಿ ಹಾಗೂ ಕ್ವಾಲ್ಕಾಮ್​ ಇಂಡಿಯಾ ಪೆವೇಟ್​ ಲಿಮಿಟೆಡ್​ನ ಸಿಎಸ್​ಆರ್​ ನಿಧಿ ನೆರವಿನೊಂದಿಗೆ ಹಾಗೂ ಸೇಟೀಸ್​ ಎನ್​ಜಿಒ ಸಹಯೋಗದೊಂದಿಗೆ ವೃಕೋದ್ಯಾನ ಅಭಿವೃದ್ಧಿಪಡಿಸಲಾಗಿದೆ. ಇನ್ನುಳಿದ 100 ಎಕರೆ ಜಾಗವನ್ನು ಸಹ ಸದರಿ ಸಂಸ್ಥೆಯಿಂದಲೇ ಅಭಿವೃದ್ಧಿಪಡಿಸಲು ಮುಂದಾದರೆ ಅರಣ್ಯ ಇಲಾಖೆಯಿಂದ ಅನುದಾನ ಸಹಾಯ ಮಾಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಉದ್ಯಾನವನ್ನು 4.50 ಕೋಟಿ ರೂ. ಅನುದಾನದಲ್ಲಿ ಅಭಿವೃದ್ಧಿಪಡಿಸುವ ಜತೆಗೆ ಹೆಚ್ಚುವರಿಯಾಗಿ ಇನ್ನು 1 ಕೋಟಿ ರೂ. ಹೆಚ್ಚುವರಿ ಅನುದಾನ ನೀಡಿರುವುದನ್ನು ಕಾಪೌಂಡ್​ ನಿರ್ಮಿಸಲು ಉಪಯೋಗಿಸಿಕೊಳ್ಳಲಾಗುವುದು. ಅರಣ್ಯೀಕರಣ ಕಾರ್ಯಗಳಿಗಾಗಿ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ಸಂಸದ ಪಿ.ಸಿ.ಮೋಹನ್​, ಶಾಸಕಿ ಮಂಜುಳಾ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಪಡೆ ಮುಖ್ಯಸ್ಥೆ ಮೀನಾಕ್ಷಿ ನೇಗಿ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಸ್ಮಿತಾ, ಚಕ್ರಪಾಣಿ, ಸಮಾಜ ಸೇವಕಿ ಅನುಪಮ ಮತಿತ್ತರರು ಉಪಸ್ಥಿತರಿದ್ದರು.
ಬಾಕ್ಸ್​...
ವೃಕೋದ್ಯಾನದಲ್ಲಿರುವ ಸವಲತ್ತುಗಳು
ಸಾರ್ವಜನಿಕರ ವಾಯು ವಿಹಾರಕ್ಕಾಗಿ ವಾಕಿಂಗ್​ ಪಾಥ್​, ವೀಕ್ಷಕರು ವಿಶ್ರಾಂತಿ ಪಡೆಯಲು ಪಗೋರ್ಲಾ ಹಾಗೂ ನೀರಿನ ಟ್ಯಾಂಕ್​ಗಳ ಅಳವಡಿಕೆ. ಸಸ್ಯ, ಪ್ರಾಣಿ-&ಪಕ್ಷಿಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲು ಕ್ಯೂಆರ್​ ಕೋಡ್​ ಒಳಗೊಂಡ ನಾಮಫಲಕ, ಜಾಗೃತಿ ಬೋರ್ಡ್​ಗಳ ಸ್ಥಾಪನೆ. ತೆರೆದ ಜಿಮ್​, ಮಕ್ಕಳ ಆಟದ ಉಪಕರಣ, ಶೌಚಗೃಹ, ವಾಹನಗಳ ನಿಲುಗಡೆ ಜಾಗ ಮೀಸಲು. ನೀರಿನ ಸೌಕರ್ಯಕ್ಕಾಗಿ ಹೊಸ ಕೊಳವೆಬಾವಿ ಕೊರೆಸಿ, ಪಂಪ್​ ಮೋಟಾರು ಅಳವಡಿಸಲು ವಿದ್ಯುತ್​ ಸಂಪರ್ಕ ಕಲ್ಪಿಸಲು ಕ್ರಮವಹಿಸುವುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net