ಪ್ರತಿಭಾವಂತ ಆರಕ್ಷಕರಿಗೆ ವೇದಿಕೆ ಅಗತ್ಯ

ಪೊಲೀಸ್​ ಇಲಾಖೆಯಲ್ಲೂ ಪ್ರತಿಭಾವಂತ ಕಲಾವಿದ್ದರಿದ್ದು, ಕಸಾಪ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿ ಪದಾಧಿಕಾರಿಗಳಾದವರಿಗೆ ಸೂಕ್ತ ವೇದಿಕೆ ಕಲ್ಪಿಸಬೇಕಿದೆ ಎಂದು ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಸಿ. ಸೋಮಶೇಖರ್​ ಹೇಳಿದ್ದಾರೆ.
appa prashasthi
ಅಪ್ಪ ಪ್ರಶಸ್ತಿ ಪ್ರದಾನ ಸಮಾರಂಭfolder
Published on

ಬೆಂಗಳೂರು: ಪೊಲೀಸ್​ ಇಲಾಖೆಯಲ್ಲೂ ಪ್ರತಿಭಾವಂತ ಕಲಾವಿದ್ದರಿದ್ದು, ಕಸಾಪ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿ ಪದಾಧಿಕಾರಿಗಳಾದವರಿಗೆ ಸೂಕ್ತ ವೇದಿಕೆ ಕಲ್ಪಿಸಬೇಕಿದೆ ಎಂದು ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಸಿ. ಸೋಮಶೇಖರ್​ ಹೇಳಿದ್ದಾರೆ.

ನಬಿಜೋಶನ್​ ಪ್ರಕಾಶನ ವತಿಯಿಂದ ಕಸಾಪದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪೊಲೀಸ್​ ಕಲಾ ಸಂಗಮ ಹಾಗೂ ಅಪ್ಪ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು. ಗಾಯಕರು, ಕಲಾವಿದರು, ಸಾಹಿತಿಗಳು ವಿವಿಧ ಇಲಾಖೆಗಳಲ್ಲಿದ್ದಾರೆ. ಅವರಿಗೆ ಸೂಕ್ತ ವೇದಿಕೆ ಕಲ್ಪಿಸಿ ಬೆಳವಣಿಗೆಗೆ ಬೆಂಬಲ ನೀಡಬೇಕಿದೆ ಎಂದರು.

ಹಿರಿಯ ಚಿತ್ರನಟ ಅಶೋಕ್​ ಮಾತನಾಡಿ, ಪೊಲೀಸರು ಎಂದರೆ ಸಾಮಾನ್ಯ ಜನರಲ್ಲಿ ಭಯ ಮನೆ ಮಾಡಿರುತ್ತದೆ. ಆದರೆ ಪೊಲೀಸರು ಹಾಗೂ ಕಲಾ ಸಂಗಾಮ ಹೇಗಾಯಿತು ಎಂಬ ಕುತೂಹಲವಾಯಿತು. ಅಂಧಕಾರಕ್ಕೆ ಬೆಳಕು ಹರಿಸುವ ಗಾಯಕರು ಇಲಾಖೆಯಲ್ಲೂ ಇದ್ದಾರಲ್ಲ ಎಂಬ ಸಂತೋಷವಾಯಿತು ಎಂದು ತಿಳಿಸಿದರು.

ಶಾಲಾ ದಿನಗಳಲ್ಲಿ ನಮ್ಮ ಗ್ರಾಮದ ಸಮೀಪಕ್ಕೆ ವರನಟ ಡಾ.ರಾಜ್​ಕುಮಾರ್​ ಮತ್ತಿತರ ಶ್ರೇಷ್ಠ ನಟರೂ ಚಿತ್ರೀಕರಣಕ್ಕಾಗಿ ಆಗಮಿಸುತ್ತಿದ್ದರು. ಆ ಪ್ರಭಾವದಿಂದಾಗಿ ನಾನು ಸಿನಿಮಾ ರಂಗ ಪ್ರವೇಶಿಸಿದೆ. ಜೀವನದಲ್ಲಿ ಏನಾಗಬೇಕು ಎಂಬ ಸ್ಪಷ್ಟತೆಯಿದ್ದಾಗ ಗುರಿ ಸಾಧನೆ ಸುಲಭಸಾಧ್ಯ ಎಂದು ಹೇಳಿದರು.

ದೇಶಕ್ಕೆ ಸ್ವಾತಂತ್ರ$್ಯ ಲಭಿಸಿ ಹಲವು ದಶಕಗಳು ಕಳೆದರೂ ಬಡತನ ನಿವಾರಣೆಯಾಗಿಲ್ಲ. ವಸತಿಹೀನರು ಈಗಲೂ ಯಾಕಿದ್ದಾರೆ ಎಂಬ ಚಿಂತೆ ಕಾಡುತ್ತದೆ. ಇದಕ್ಕೆಲ್ಲ ಪರಿಹಾರ ಕಂಡುಕೊಳ್ಳುವ ಗಂಭೀರ ಪ್ರಯತ್ನಗಳಾಗಬೇಕಿದೆ ಎಂದು ಹೇಳಿದರು.

ಎಲೆಕ್ಟ್ರಾನಿಕ್ಸ್​ ಸಿಟಿ ಡಿಸಿಪಿ ಎಂ. ನಾರಾಯಣ, ರಾಜ್ಯ ಪೌರಸೇವಾ ಸಂಘದ ಅಧ್ಯಕ್ಷೆ ಕೆ.ಡಿ. ಶೈಲಾ, ಮಿಸೆಸ್​ ಇಂಡಿಯಾ ವಿಜೇತೆ ಹೇಮಾ ನಿರಂಜನ, ರಾಜಶೇಖರ ಕೂಚಬಾಳ, ಉಪನ್ಯಾಸಕ ಶರಣಯ್ಯ ಭಂಡಾರಿಮಠ, ಸಾಹಿತಿಗಳಾದ ಸಿದ್ಧಲಿಂಗ ಚೌಧರಿ, ತುಕಾರಾಂ ಬಾಲವ್ವಗೋಳ ಉಪಸ್ಥಿತರಿದ್ದರು.

ಸಿನಿಮಾ ಗೀತ ರಚನೆಕಾರ ಡಾ.ವಿ. ನಾಗೇಂದ್ರ ಪ್ರಸಾದ್​ ಮಾತನಾಡಿ, ಪ್ರತಿಭಾವಂತರಿಲ್ಲದ ಇಲಾಖೆಗಳಿಲ್ಲ. ಅದರಲ್ಲೂ ಪೊಲೀಸ್​ ಇಲಾಖೆಯಲ್ಲಿ ಉತ್ತಮ ಗಾಯಕರಿರುವುದು ಸಂತೋಷದ ಸಂಗತಿ. ಮೌಲಾಲಿ ಆಲಗೂರ ತನ್ನ ತಂದೆಯ ಹೆಸರಿನಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ಅಭಿನಂದನಾರ್ಹ ಎಂದು ತಿಳಿಸಿದರು.

ಕಲಾವಿದರು, ಗಾಯಕರನ್ನು ಹುಟ್ಟಿ ಹಾಕಿ ಸಮಾಜದಲ್ಲಿ ಐಕ್ಯತೆ ಮೂಡಿಸುವ ಉದ್ದೇಶದಿಂದ ನಬಿರೋಶನ್​ ಪ್ರಕಾಶನ ಸ್ಥಾಪನೆ ಮಾಡಲಾಗಿದೆ. ಸಾಧರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ತಮ್ಮ ತಂದೆ ನೆನಪಿನಲ್ಲಿ ಅಪ್ಪ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು, ಇದನ್ನು ಮುಂದುವರಿಸಿಕೊಂಡು ಹೋಗಲಾಗುವುದು. - ಮೌಲಾಲಿ ಕೆ.ಆಲಗೂರ, ಪ್ರಕಾಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net