ಸೈಕ್ಲೋನ್, ಹಿಂಗಾರು ಮೇಲೆ ಸೂಪರ್ ಎಲ್‌ನಿನೋ ಪ್ರಭಾವ

ಬೆಂಗಳೂರು: ನೈಋತ್ಯ ಮಾನ್ಸೂನ್ (ಮುಂಗಾರು) ಮೇಲೆ ನೇರ ಪರಿಣಾಮ ಬೀರುವ ಮೂಲಕ ಈಗಾಗಲೇ ಮಳೆ ಕುಂಠಿತಕ್ಕೆ ಕಾರಣವಾಗಿರುವ ‘ಸೂಪರ್ ಎಲ್‌ನಿನೋ, ಮುಂಬರುವ ಚಂಡಮಾರುತ ಮತ್ತು ಈಶಾನ್ಯ ಮಾನ್ಸೂನ್(ಹಿಂಗಾರು) ಮೇಲೆಯೂ ಪ್ರಭಾವ ಬೀರಲಿದೆ.
ಸೂಪರ್ ಎಲ್‌ನಿನೋ
ಸೂಪರ್ ಎಲ್‌ನಿನೋ
Published on

ಬೆಂಗಳೂರು: (Super El Niño) ನೈಋತ್ಯ ಮಾನ್ಸೂನ್ (ಮುಂಗಾರು) ಮೇಲೆ ನೇರ ಪರಿಣಾಮ ಬೀರುವ ಮೂಲಕ ಈಗಾಗಲೇ ಮಳೆ ಕುಂಠಿತಕ್ಕೆ ಕಾರಣವಾಗಿರುವ ‘ಸೂಪರ್ ಎಲ್‌ನಿನೋ, ಮುಂಬರುವ ಚಂಡಮಾರುತ ಮತ್ತು ಈಶಾನ್ಯ ಮಾನ್ಸೂನ್(ಹಿಂಗಾರು) ಮೇಲೆಯೂ ಪ್ರಭಾವ ಬೀರಲಿದೆ.

ಹಿರಿಯ ಹವಾಮಾನ ತಜ್ಞ ಡಾ.ಶ್ರೀನಿವಾಸರೆಡ್ಡಿ ಮಾತನಾಡಿ, ಪ್ರಸ್ತುತ ಹವಾಮಾನ ಪರಿಸ್ಥಿತಿ ಅವಲೋಕಿಸಿದರೆ ಮುಂಬರುವ ದಿನಗಳಲ್ಲಿ 2-3 ಚಂಡಮಾರುತ ರೂಪುಗೊಳ್ಳುವ ಸಾಧ್ಯತೆ ಇದೆ. ಆದರೆ, ಚಂಡಮಾರುತ ಮೇಲೆ ಸೂಪರ್ ಎಲ್‌ನಿನೋ ಪರಿಣಾಮ ಬೀರಲಿದೆ. ಇದರಿಂದ, ಸೈಕ್ಲೋನ್ ಉಂಟಾಗಿದ್ದರೂ ಭಾರಿ ಪ್ರಮಾಣದಲ್ಲಿ ಮಳೆ ಸುರಿಯುಲ್ಲ. ಸೆ.30ಕ್ಕೆ ನೈಋತ್ಯ ಮಾನ್ಸೂನ್ ಕೊನೆಗೊಳ್ಳಲಿದೆ. ಅ.1ರಿಂದ ಆರಂಭವಾಗಲಿರುವ ಈಶಾನ್ಯ ಮಾನ್ಸೂನ್ ಮೇಲೆ ಎಲ್‌ನಿನೋ ಪ್ರಭಾವ ಬೀರುವ ಹಿನ್ನೆಲೆಯಲ್ಲಿ ಹಿಂಗಾರು ಅವಧಿಯಲ್ಲಿಯೂ ಮಳೆ ಕುಂಠಿತವಾಗಬಹುದು ಎಂದು ಹೇಳಿದರು.

ರಾಜ್ಯದಲ್ಲಿ ಮುಂದಿನ 3 ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಬೆಳಗಾವಿ ಮತ್ತು ರಾಯಚೂರಿನಲ್ಲಿ ಸೆ.24,25ರಂದು ಜೋರು ಮಳೆಯಾಗುವುದರಿಂದ ಇಲಾಖೆ, ಯೆಲ್ಲೋ ಅಲರ್ಟ್ ಕೊಟ್ಟಿದೆ.

ಧಾರವಾಡ, ಗದಗ, ಕೊಪ್ಪಳ, ತುಮಕೂರು, ವಿಜಯನಗರದಲ್ಲಿ ಸೆ.24 ಮತ್ತು ಹಾಸನ, ಕೊಡಗು, ಕಲಬುರಗಿ, ಯಾದಗಿರಿಯಲ್ಲಿ ಸೆ.25ರಂದು ಬಿರುಸಾಗಿ ಮಳೆ ಇರುವುದರಿಂದ ಯೆಲ್ಲೋ ಅಲರ್ಟ್ ನೀಡಲಾಗಿದೆ.

ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಬೆಂ.ದಕ್ಷಿಣ ಕನ್ನಡ, ಮಂಡ್ಯ, ಮೈಸೂರು, ಚಾಮರಾಜನಗರ, ತುಮಕೂರು, ಕೋಲಾರ, ಚಿತ್ರದುರ್ಗ, ದಾವಣಗೆರೆ, ಹಾವೇರಿ, ವಿಜಯಪುರ ಮತ್ತು ಬೀದರ್‌ನಲ್ಲಿ ಮುಂದಿನ 3 ದಿನ ಸಾಧಾರಣ ಮಳೆ ಬೀಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net