ಸ್ಪೀಕರ್ ಖಾದರ್‌ಗೆ ಬೆಂವಿವಿ ಗೌರವ ಡಾಕ್ಟರೇಟ್ ಪ್ರದಾನ

ಸ್ಪೀಕರ್ ಖಾದರ್‌ಗೆ ಬೆಂವಿವಿ ಗೌರವ ಡಾಕ್ಟರೇಟ್
ಸ್ಪೀಕರ್ ಖಾದರ್‌ಗೆ ಬೆಂವಿವಿ ಗೌರವ ಡಾಕ್ಟರೇಟ್
Published on
ಬೆಂಗಳೂರು: ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್ ಫರೀದ್ ಅವರಿಗೆ ಬೆಂಗಳೂರು ವಿಶ್ವವಿದ್ಯಾಲಯ ವತಿಯಿಂದ ಗುರುವಾರ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.
ರಾಜಭವನದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿ ಕುಲಾಧಿಪತಿಗಳಾದ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಪದವಿ ಪ್ರದಾನ ಮಾಡಿದರು.
ಬೆಂ.ವಿವಿ 60ನೇ ಘಟಿಕೋತ್ಸವ ಅಂಗವಾಗಿ ವಿಧಾನ ಪರಿಷತ್‌ನ ಮಾಜಿ ಸದಸ್ಯ ಡಿ.ಮಾದೇಗೌಡ, ಜಿ.ಪಿ. ಅಗ್ರಿ ಜೆನೆಟಿಕ್ಸ್ ಪ್ರೈ.ಲಿ. ವ್ಯವಸ್ಥಾಪಕ ನಿರ್ದೇಶಕ ಡಾ. ಟಿ.ಬಿ. ಪ್ರಸನ್ನ ಹಾಗೂ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರಿಗೆ ಗೌರವ ಡಾಕ್ಟರೇಟ್ ೋಷಿಸಲಾಗಿತ್ತು. ಅ.8ರಂದು ನಡೆದ ಘಟಿಕೋತ್ಸವ ಕಾರ್ಯಕ್ರಮಕ್ಕೆ ಖಾದರ್ ಅವರು ಗೈರು ಹಾಜರಾಗಿದ್ದ ಹಿನ್ನೆಲೆಯಲ್ಲಿ ಗುರುವಾರ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಬೆಂ.ವಿವಿ ಕುಲಪತಿ ಡಾ. ಎಸ್.ಎಂ. ಜಯಕರ್, ಕುಲಸಚಿವೆ ಕೆ.ಟಿ. ಶಾಂತಲಾ, ಮೌಲ್ಯಮಾಪನ ಕುಲಸಚಿವ ಪ್ರೊ..ಸಿ.ಎಸ್. ಕರಿಗಾರ್ ಉಪಸ್ಥಿತರಿದ್ದರು.
"

ಕಾಲೇಜು ದಿನಗಳಲ್ಲಿ ಡಾಕ್ಟರ್ ಆಗಬೇಕೆಂಬ ಕನಸಿತ್ತು. ಆದರೆ, ವಿಜ್ಞಾನ ವಿಷಯದಲ್ಲಿ ಅಂಕಗಳು ಕಡಿಮೆ ಬಂದಿದ್ದರಿಂದ ಇದು ಆಗದ ಕೆಲಸ ಎಂದು ಕಾನೂನು ವಿಷಯಕ್ಕೆ ಸೇರಿದೆ. ಆದರೆ, ಮುಂದೆ ಆರೋಗ್ಯ ಸಚಿವನಾಗಿ ಕಾರ್ಯ ನಿರ್ವಹಿಸುವ ಅವಕಾಶ ಲಭಿಸಿತು. ವೈದ್ಯನಾಗದಿದ್ದರೂ ಬೆಂ.ವಿವಿಯಿಂದ ಡಾಕ್ಟರೇಟ್ ಲಭಿಸಿರುವುದು ಸಾಕಷ್ಟು ಖುಷಿ ತಂದಿದೆ. ಈ ಪ್ರೀತಿ, ಸಹಕಾರ ಸದಾ ನೆನಪಿನಲ್ಲಿರುತ್ತದೆ.

- ಯು.ಟಿ. ಖಾದರ್, ವಿಧಾನಸಭಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net