ಬೌದ್ಧ ಧರ್ಮಗುರು ದಲಾಯಿ ಲಾಮಾ ಅವರಿಂದ ಆಶೀರ್ವಾದ ಪಡೆದ ಸಲೀಂ ಅಹ್ಮದ್

 ದಲಾಯಿ ಲಾಮಾ ಅವರಿಂದ ಸಲೀಂ ಅಹ್ಮದ್‌ಗೆ ಆಶೀರ್ವಾದ
ದಲಾಯಿ ಲಾಮಾ ಅವರಿಂದ ಸಲೀಂ ಅಹ್ಮದ್‌ಗೆ ಆಶೀರ್ವಾದ
Published on
ಬೆಂಗಳೂರು : ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದ ಟಿಬೆಟಿಯನ್ ಕ್ಯಾಂಪ್‌ಗೆ ಆಗಮಿಸಿದ್ದ ಬೌದ್ಧ ಧರ್ಮಗುರು, ಆಧ್ಯಾತ್ಮಿಕ ನಾಯಕರಾದ ನೋಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ದಲಾಯಿ ಲಾಮಾ  ಅವರನ್ನು ವಿಧಾನ ಪರಿಷತ್‌ನ ಸರ್ಕಾರಿ ಮುಖ್ಯ ಸಚೇತಕ ಸಲೀಂ ಅಹ್ಮದ್ ಭೇಟಿ ಮಾಡಿ ಆಶೀರ್ವಾದ ಪಡೆದರು. 
ಈ ವೇಳೆ ಮಾತನಾಡಿದ ಸಲೀಂ ಅಹ್ಮದ್, ವಿಶ್ವ ಶಾಂತಿ ಮತ್ತು ಮಾನವೀಯ ಮೌಲ್ಯಗಳ ಪ್ರತಿಪಾದಿಸುತ್ತಿರುವ ಆಧ್ಮಾತ್ಮಿಕ ಗುರುಗಳು ಹಾಗೂ ಜಗತ್ತಿನ ಅತ್ಯಂತ ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರಾದ ದಲಾಯಿ ಲಾಮಾ ಉತ್ತರ ಕನ್ನಡದ ಟಿಬೆಟಿಯನ್ ಕ್ಯಾಂಪ್‌ಗೆ ಬಂದಿರುವುದು ಎಲ್ಲರಿಗೂ ಸ್ಫೂರ್ತಿ ತಂದಿದೆ.
ವಿವಿಧ ಧರ್ಮಗಳ ನಡುವೆ ಪರಸ್ಪರ ಗೌರವ ಮತ್ತು ಸೌಹಾರ್ದತೆ ಇರಬೇಕು. ಈ ಮೂಲಕ ಮಾತ್ರ ಜಗತ್ತಿನಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದು ಸಹಬಾಳ್ವೆಯ ಸಂದೇಶ ನೀಡುತ್ತಿರುವ ಲಾಮಾ ಅವರ ಭೇಟಿ ಖುಷಿ ತಂದಿರುವುದಾಗಿ ಸಲೀಂ ಅಹ್ಮದ್ ತಿಳಿಸಿದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net