ಪೊಲೀಸರಿಂದ ತಪ್ಪಿಸಿಕೊಳ್ಳಲು ಬಿಲ್ಡಿಂಗ್ ಹಾರಿ ಸೊಂಟ ಮುರಿದುಕೊಂಡ ರೌಡಿ ನಾಗ

rowdy-naga
rowdy-naga
Published on

ಪ್ರಮುಖ ಮುಖ್ಯಾಂಶಗಳು

  • ವಾರಂಟ್ ಹಿನ್ನೆಲೆ ಬಂಧಿಸಲು ಹೋಗಿದ್ದ ಪೊಲೀಸರು
  • ಆರೋಪಿ ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ
  • ರೌಡಿಶೀಟರ್ ಸ್ಪಾಟ್ ನಾಗನ ವಿರುದ್ಧ ಮತ್ತೊಂದು ಪ್ರಕರಣ

ಬೆಂಗಳೂರು : ಬಂಧಿಸಲುಬಂದ ಪೊಲೀಸರನ್ನು ನೋಡಿ ಹೆದರಿದರೌಡಿಶೀಟರ್ ಒಬ್ಬ ನಿರ್ಮಾಣ ಹಂತದಮನೆಯ ತಾರಸಿಯಿಂದ ನೆಲಕ್ಕೆ ಹಾರಿಸೊಂಟ ಮುರಿದುಕೊಂಡ ದುರಂತಸೋಲದೇವನಹಳ್ಳಿ ಠಾಣೆ ವ್ಯಾಪ್ತಿಯಲ್ಲಿನಡೆದಿದೆ.

ಕೊಲೆ ಯತ್ನಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದಸ್ಪಾಟ್ ನಾಗ ಪೊಲೀಸರಿಗೆ ಸಿಗದೇತಲೆಮರೆಸಿಕೊಂಡಿದ್ದ. ಮಂಗಳವಾರಖಚಿತ ಮಾಹಿತಿ ಮೇರೆಗೆ ಪೊಲೀಸರು,ಆರೋಪಿಯ ಮನೆಗೆ ಹೋಗಿದ್ದರು.ಆಗ ಪೊಲೀಸ್ ಸಿಬ್ಬಂದಿಯನ್ನೇತಳ್ಳಿ ತಾನು ನೆಲಕ್ಕೆ ಬಿದ್ದಿದ್ದಾನೆ.

ಸಿವಿಲ್ಬಟ್ಟೆಯಲ್ಲಿ ಹೋಗಿದ್ದ ಪೊಲೀಸರು,ಸ್ಪಾಟ್ ನಾಗನ ಬಳಿ ತಮ್ಮಐಟಿ ಕಾರ್ಡ್‌ಗಳನ್ನು ತೋರಿಸಿ,ಪರಿಚಯಿಸಿಕೊಂಡಿದ್ದಾರೆ.ಆಗ ಬಂಧನ ವಾರಂಟ್ ತೋರಿಸಿದಾಗಪೊಲೀಸ್ ಸಿಬ್ಬಂದಿಗೆ ಬೆದರಿಕೆಹಾಕಿ ದಾಳಿ ಮಾಡಲು ಯತ್ನಿಸಿದ್ದಾನೆ.ಸಿಬ್ಬಂದಿ ಆತನನ್ನುಹಿಡಿಯಲು ಹೋದಾಗ ಅವರನ್ನೂ ತಳ್ಳಿತಾನು ಮಹಡಿ ಮೇಲಿಂದ ಹಾರಿದ್ದಾನೆ.ಓಡಲು ಆಗದೇ ಕುಸಿದುಬಿದ್ದಿದ್ದ ಆರೋಪಿಯನ್ನು ವಶಕ್ಕೆಪಡೆದು ಚಿಕಿತ್ಸೆಗಾಗಿ ಆಸ್ಪತ್ರೆಗೆದಾಖಲಿಸಿದ್ದಾರೆ.

ಸದ್ಯವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು,ಬಿಲ್ಡಿಂಗ್‌ನಿಂದ ಬಿದ್ದಕಾರಣ ಆತನ ಸೊಂಟದ ಮೂಳೆ ಜಾಯಿಂಟ್ಕಂಪ್ರೆಷನ್ ಆಗಿರುವುದು ದೃಢಪಟ್ಟಿದೆ.ಸದ್ಯ ಆಸ್ಪತ್ರೆಯಲ್ಲೇಆತನಿಗೆ ಚಿಕಿತ್ಸೆ ಮುಂದುವರಿದಿದೆ.ಕರ್ತವ್ಯ ನಿರತ ಪೊಲೀಸರಿಗೆಅಡ್ಡಿಪಡಿಸಿ, ಜೀವಬೆದರಿಕೆ ಹಾಕಿದ ಹಾಗೂ ಹಲ್ಲೆಗೆಯತ್ನಿಸಿದ ಆರೋಪದಡಿ ರೌಡಿಶೀಟರ್ಸ್ಪಾಟ್ ನಾಗನ ವಿರುದ್ಧ ಮತ್ತೊಂದುಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net