ರಸ್ತೆ ಅಗಲೀಕರಣ ಕಾರ್ಯಕ್ಕಾಗಿ ಕಾಯ್ದಿರಿಸುವ ಪರಿತ್ಯಾಜನ ಪತ್ರ ಆಗಿರುವ ಸ್ವತ್ತುಗಳನ್ನು ಪಾಲಿಕೆ ವಶಕ್ಕೆ ಪಡೆಯುವಂತೆ ಸಂಬಂಧಪಟ್ಟ ವಿಭಾಗಗಳ ಕಾರ್ಯಪಾಲಕ ಅಭಿಯಂತರು, ಸಹಾಯಕ ನಿರ್ದೇಶಕರು ನಗರ ಯೋಜನೆ, ಸಹಾಯಕ ಕಾರ್ಯಪಾಲಕ ಅಭಿಯಂತರು ಭೂಸ್ವಾಧೀನ ಮತ್ತು ಟಿಡಿಆರ್ ಹಾಗೂ ಸರ್ವೇಯರ್‌ಗಳನ್ನು ಒಳಗೊಂಡ ತಂಡ ರಚಿಸಲಾಗಿದೆ. ಅದರಂತೆ ಬುಧವಾರ ಐಟಿಪಿಎಲ್ ಮುಖ್ಯರಸ್ತೆಯಲ್ಲಿರುವ ಆರ್.ಡಿ.ಸ್ವತ್ತುಗಳನ್ನು (1,707.51 ಚ. ಮೀ.) ವಶಕ್ಕೆ ಪಡೆಯಲಾಯಿತು ಎಂದು ಆಯುಕ್ತರು ಸ್ಪಷ್ಟಪಡಿಸಿದ್ದಾರೆ.