ಸ್ವಾನ್​ ಸಲಹಾ ಸಮಿತಿಯಲ್ಲಿ ಜಲಮಂಡಳಿ ಅಧ್ಯಕ್ಷ | bwssb

ಡಾ.ವಿ.ರಾಮ್ ಪ್ರಸಾತ್ ಮನೋಹರ್
ಡಾ.ವಿ.ರಾಮ್ ಪ್ರಸಾತ್ ಮನೋಹರ್
Published on

ಪ್ರಮುಖ ಮುಖ್ಯಾಂಶಗಳು

  • ಡಾ.ರಾಮ್​ ಪ್ರಸಾತ್​ ಮನೋಹರ್​ ಆಯ್ಕೆ
ಬೆಂಗಳೂರು: ಸ್ಮಾರ್ಟ್​ ವಾಟರ್​ ವಲಯದ ಜಾಗತಿಕ ಸಂಸ್ಥೆಯಾದ "ಸ್ಮಾರ್ಟ್​ ವಾಟರ್​ ನೆಟ್​ವರ್ಕ್ಸ್​ ಫೋರಂ' ತನ್ನ 5ನೇ ಹಿರಿಯ ಯುಟಿಲಿಟಿ ಸಲಹಾ ಸಮಿತಿಯನ್ನು ಪ್ರಕಟಿಸಿದೆ. ಈ ಜಾಗತಿಕ ಸಮಿತಿಗೆ ಭಾರತದ ಏಕೈಕ ಪ್ರತಿನಿಧಿಯಾಗಿ ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ.ರಾಮ್​ ಪ್ರಸಾತ್​ ಮನೋಹರ್​ ಆಯ್ಕೆಯಾಗಿದ್ದಾರೆ. ಉಳಿದಂತೆ ಆಸ್ಟ್ರೆಲಿಯಾ, ಕೆನಡಾ, ಪೋರ್ಚುಗಲ್​, ಬ್ರೆಜಿಲ್​ ಮತ್ತು ಅಮೆರಿಕದ ತಜ್ಞರು ಸಮಿತಿಯಲ್ಲಿದ್ದಾರೆ.
ಆಯ್ಕೆಯಾದ ಸಮಿತಿ ಸದಸ್ಯರು ಜಾಗತಿಕಮಟ್ಟದಲ್ಲಿ ನೀರಿನ ಸವಾಲುಗಳು, ಪ್ರಾದೇಶಿಕ ಟ್ರೆಂಡ್​ಗಳು ಮತ್ತು ಕಾರ್ಯತಂತ್ರದ ಸಂಶೋಧನಾ ಆದ್ಯತೆಗಳನ್ನು ಗುರುತಿಸಲು ಒಟ್ಟಾಗಿ ಕೆಲಸ ಮಾಡಲಿದ್ದಾರೆ. ಉದ್ಯಮಕ್ಕೆ ನೀಡಿದ ವ್ಯಾಪಕ ಕೊಡುಗೆಯ ಆಧಾರದ ಮೇಲೆ ಆಯ್ಕೆಯಾಗಿರುವ ಈ ತಂಡ, "ಸ್ವಾನ್​'ನ ಭವಿಷ್ಯದ ಯೋಜನೆಗಳು ಮತ್ತು ಜಾಗತಿಕ ಉಪಕ್ರಮಗಳನ್ನು ಪರಿಶೀಲಿಸಲಿದೆ.
ಜಲಮಂಡಳಿಯಲ್ಲಿ ಕೃತಕ ಬುದ್ಧಿಮತ್ತೆ ಮತ್ತು ದತ್ತಾಂಶ-ಆಧಾರಿತ ಉಪಕ್ರಮಗಳನ್ನು ಯಶಸ್ವಿಯಾಗಿ ಅಳವಡಿಸಿಕೊಂಡಿದ್ದಕ್ಕಾಗಿ ಡಾ.ರಾಮ್​ ಪ್ರಸಾತ್​ಗೆ ಮನ್ನಣೆ ದೊರೆದಂತಾಗಿದೆ. ಜೂ. 2ರಿಂದ 4ರ ವರೆಗೆ ಅಮೆರಿಕದ ಫ್ಲೋರಿಡಾದ ಟ್ಯಾಂಪಾದಲ್ಲಿ ನಡೆಯಲಿರುವ "ಸ್ವಾನ್​ 16ನೇ ವಾರ್ಷಿಕ ಸಮ್ಮೇಳನ'ದಲ್ಲಿ ತಜ್ಞರು ವಿಚಾರವಿನಿಮಯ ನಡೆಸಲಿದ್ದಾರೆ.
ಜಲಮಂಡಳಿಯ ತಾಂತ್ರಿಕ ತಂಡ ಮತ್ತು ಸಿಬ್ಬಂದಿಯ ಅವಿರತ ಶ್ರಮಕ್ಕೆ ನಾನು ಈ ಮೈಲಿಗಲ್ಲನ್ನು ಅರ್ಪಿಸುತ್ತೇನೆ. ನಾವು ಎದುರಿಸುತ್ತಿರುವ ಸಂಕೀರ್ಣ ನೀರಿನ ಸವಾಲುಗಳಿಗೆ ಪ್ರಾಯೋಗಿಕ ಪರಿಹಾರಗಳನ್ನು ಕಂಡುಕೊಳ್ಳಲು ಜಾಗತಿಕ ತಜ್ಞರೊಂದಿಗೆ ಕಾರ್ಯನಿರ್ವಹಿಸಲು ಎದುರು ನೋಡುತ್ತಿದ್ದೇನೆ ಎಂದು ಡಾ. ರಾಮ್​ ಪ್ರಸಾತ್​ ಮನೋಹರ್​ ಹೇಳಿದ್ದಾರೆ.
ಸಮಿತಿಯ ಸದಸ್ಯರು
* ಡಾ.ರಾಮ್​ ಪ್ರಸಾತ್​ ಮನೋಹರ್​, ಅಧ್ಯಕ್ಷ, ಬೆಂಗಳೂರು ಜಲಮಂಡಳಿ (ಭಾರತ)
* ಜೊನೆಟ್ಟಾ ಇ. ಇಂಗ್ಲಿಷ್​ ಲೂಯಿಸ್ವಿಲ್ಲೆ ಎಂಎಸ್​ಡಿ (ಅಮೆರಿಕ)
* ಡೇವಿಡ್​ ಹ್ಯೂಸ್​-ಓವನ್​ ಸಿಇಒ ಬಸ್ಸೆಲ್ಟನ್​ ವಾಟರ್​ (ಆಸ್ಟ್ರೆಲಿಯಾ)
* ಜೋವಾನಾ ಅರಾಜೊ ಅಗ್ವಾಸ್​ ಇ ಎನರ್ಜಿಯಾ ದೋ ಪೋರ್ಟೊ (ಪೋರ್ಚುಗಲ್​)
* ಅರಾಶ್​ ಫರಾಜಿಯಾನ್​ ಟೊರೊಂಟೊ ವಾಟರ್​ (ಕೆನಡಾ)
* ಡೆನಿಸ್​ ಮಾಯಾ ಸಬೆಸ್ಪ್​ (ಬ್ರೆಜಿಲ್​)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net