ಕರ್ನಾಟಕದ ರೈತರಿಗೆ ಮೋದಿ ಸರ್ಕಾರದಿಂದ ಶಿಕ್ಷೆ

ರಣದೀಪ್ ಸಿಂಗ್ ಸುರ್ಜೇವಾಲಾ
ರಣದೀಪ್ ಸಿಂಗ್ ಸುರ್ಜೇವಾಲಾ
Published on
ಬೆಂಗಳೂರು: ಕರ್ನಾಟಕದ 13 ಜಿಲ್ಲೆಗಳಲ್ಲಿ 22.83 ಲಕ್ಷ ಎಕರೆ ಬಿತ್ತನೆ ಮಾಡಿದ ಧಾನ್ಯಗಳನ್ನು ಕೇಂದ್ರ ಸರ್ಕಾರ ಯಾಕೇ ಖರೀದಿಸುತ್ತಿಲ್ಲ ಎಂದು ಎಐಸಿಸಿ (AICC) ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ (
Randeep Singh Surjewala) ಟೀಕೆ ಮಾಡಿದ್ದಾರೆ.
ಕರ್ನಾಟಕದ ರೈತರನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಏಕೆ ಶಿಕ್ಷಿಸುತ್ತಿದೆ. ಭೂಮಿ ಉಳುಮೆ ಮಾಡುವವರ ಮೇಲೆ ಬಿಜಿಪಿ ಏಕೆ ದ್ವೇಷವನ್ನು ಉಳಿಸಿಕೊಂಡಿದೆ. ಎಂಎಸ್‌ಪಿಯನ್ನು ಯಾಕೆ ರದ್ದುಗೊಳಿಸಿದೆ ಎಂದು ಸುರ್ಜೇವಾಲಾ ಕೇಂದ್ರ ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ.
ರಾಜ್ಯ ಬಿಜೆಪಿ ಮತ್ತು ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ ಮತ್ತು ಎಚ್.ಡಿ. ಕುಮಾರಸ್ವಾಮಿ, ವಿ. ಸೋಮಣ್ಣ, ಶೋಭಾ ಕರಂದ್ಲಾಜೆ ಯಾಕೇ ಮೌನವಾಗಿದ್ದಾರೆ. ಎಚ್ಚರಗೊಂಡು ಕರ್ನಾಟಕದ ರೈತರ ಪರವಾಗಿ ಮಾತನಾಡಲು ಯಾವಾಗ ಧೈರ್ಯ ಮಾಡುತ್ತಾರೆ ಎಂದು ಸುರ್ಜೇವಾಲಾ ಕೇಂದ್ರ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕರ್ನಾಟಕದ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಮತ್ತು ತಾತ್ಕಾಲಿಕ ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಎಲ್ಲಿದ್ದಾರೆ. ಅನ್ನದಾತರ ವಿರುದ್ಧದ ದಬ್ಬಾಳಿಕೆ ಮತ್ತು ತಾರತಮ್ಯವನ್ನು ಸಂಪೂರ್ಣವಾಗಿ ವಿರೋಧಿಸದೇ ಇರುವುದು ಪಾಪ ಎಂದು ಕಾಂಗ್ರೆಸ್ ನಾಯಕ ಲೇವಡಿ ಮಾಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net