ಅರವಿಂದ ಲಿಂಬಾವಳಿ ಮಾರ್ಗದರ್ಶನದಲ್ಲಿ ಜನಸೇವೆ: ಯುವ ಮುಖಂಡ ಎಸ್.ಬಿ.ಪಿ ಪ್ರಭು

ಮಹದೇವಪುರ ಕ್ಷೇತ್ರದ ಯುವ ಮುಖಂಡ ಎಸ್ ಬಿ ಪಿ ಪ್ರಭು ಅವರು ತಮ್ಮ ಹುಟ್ಟು ಹಬ್ಬದ ಪ್ರಯುಕ್ತ ಹಗದೂರಿನಲ್ಲಿ  ಆಟೋಚಾಲಕರಿಗೆ ಅಕ್ಕಿ ಮೂಟೆ, ಪೌರ ಕಾರ್ಮಿಕರಿಗೆ ರೇಷನ್ ಕಿಟ್  ವಿತರಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರ ನಗರ ಮಂಡಲ ಅಧ್ಯಕ್ಷ ಎನ್.ಆರ್.ಶ್ರೀಧರ್ ರೆಡ್ಡಿ, ರಾಜ್ಯ ಪರಿಷತ್ ಸದಸ್ಯ ಎಲ್ ರಾಜೇಶ್, ಶಾರದ ಪ್ರಭು, ರಾಜಾರೆಡ್ಡಿ, ಮಹೇಂದ್ರ ಮೋದಿ, ವರ್ತೂರು ಶ್ರೀಧರ್, ಯೋಗೇಶ್ ಆರಾಧ್ಯ, ಮಧು ಇತರರು  ಇದ್ದರು.

Published on
ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರ ಆದರ್ಶ ಹಾಗೂ ಅವರು ಹಾಕಿ ಕೊಟ್ಟ ಮಾರ್ಗದರ್ಶದಲ್ಲಿ ನಡೆಯುತ್ತಿರುವ ನಾನು ಹುಟ್ಟು ಹಬ್ಬವನ್ನು ಜನ ಸೇವೆಯೊಂದಿಗೆ ಆಚರಿಸಿಕೊಳ್ಳುವುದರ ಮೂಲಕ ಮಾದರಿಯಾಗಿದ್ದೇನೆ ಎಂದು ಯುವ ಮುಖಂಡ ಎಸ್.ಬಿ.ಪಿ.ಪ್ರಭು ತಿಳಿಸಿದ್ದಾರೆ.
ಮಹದೇವಪುರ ಕ್ಷೇತ್ರದ ಹಗದೂರಿನಲ್ಲಿ ಯುವ ಮುಖಂಡ ಎಸ್.ಬಿ.ಪಿ ಪ್ರಭು ಅಭಿಮಾನಿಗಳು ಹಾಗೂ ಸ್ಥಳಿಯ ಮುಖಂಡರುಗಳು ಆಯೋಜಿಸಿದ್ದ ಹುಟ್ಟು ಹಬ್ಬ ಸಂಭ್ರಮಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.
ನನಗೆ ಹಿಂದಿನಿಂದಲೂ ದುಂದು ವೆಚ್ಚ ಮಾಡದೇ ಹಲವಾರು ಜನರಿಗೆ ಅನುಕೂಲವಾಗಲೆಂದು ಪ್ರತಿವರ್ಷ ಅನೇಕ ಸೇವಾ ಚಟುವಟಿಕೆಗಳನ್ನು ಹಮ್ಮಿಕೊಂಡು ಬರುತ್ತಿದ್ದೇನೆ. ಕ್ಷೇತ್ರದಲ್ಲಿ ಸರಳತೆ, ಜನಸ್ನೇಹಿ ಆಡಳಿತ ನಡೆಸುತ್ತಿರುವ ಮಂಜುಳಾ ಅರವಿಂದ ಲಿಂಬಾವಳಿ ಅವರ ಆದರ್ಶಗಳನ್ನು ಪಾಲಿಸಬೇಕಾದದ್ದು ಅವರ ಅಭಿಮಾನಿಯಾದ ನನ್ನ ಕರ್ತವ್ಯವಾಗಿದೆ.ಅವರ ಸೂಚನೆಯಂತೆ ಬಡವರಿಗೆ ನಮ್ಮ ಕೈಲಾದ ಸಹಾಯ ಮಾಡುತ್ತಿದ್ದೇನೆ. ಇದರಿಂದ ನನ್ನ ಮನಸ್ಸಿಗೂ ಸಂತೋಷ ತಂದಿದೆ ಮುಂದೆಯೂ ಇದೇ ಮಾರ್ಗದಲ್ಲಿ ನಡೆಯಿತ್ತೇನೆ ಎಂದರು.
ಮೊದಲಿಗೆ ವೈಟ್ ಫೀಲ್ಡ್ನ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಅಭಿಮಾನಿಗಳು ಹಾಗೂ ಮುಖಂಡರು ಆಯೋಜಿಸಿದ್ದ ವಿವಿಧ ಸಮಾಜಮುಖಿ ಕಾರ್ಯಕ್ರಮದಲ್ಲಿ ಭಾಗವಹಿಸಿ 300 ಕ್ಕೂ ಹೆಚ್ಚು ಆಟೋ ಚಾಲಕರಿಗೆ ಅಕ್ಕಿ ಮೂಟೆ, ಪೌರ ಕಾರ್ಮಿಕರಿಗೆ ರೇಶನ್ ಕಿಟ್ ವಿತರಿಸಿದರು. ಇದೇ ವೇಳೆ ಅಭಿಮಾನಿಗಳಿಗಾಗಿ ಉಚಿತ ಊಟದ ವ್ಯವಸ್ಥ್ತೆ ಮಾಡಲಾಗಿತ್ತು.
ಈ ವೇಳೆ ಕ್ಷೇತ್ರ ನಗರ ಮಂಡಲ ಅಧ್ಯಕ್ಷ ಎನ್.ಆರ್.ಶ್ರೀಧರ್ ರೆಡ್ಡಿ, ರಾಜ್ಯ ಪರಿಷತ್ ಸದಸ್ಯ ಎಲ್ ರಾಜೇಶ್, ಶಾರದ ಪ್ರಭು, ರಾಜಾರೆಡ್ಡಿ, ಮಹೇಂದ್ರ ಮೋದಿ, ವರ್ತೂರು ಶ್ರೀಧರ್, ಯೋಗೇಶ್ ಆರಾಧ್ಯ, ಮಧು ಸೇರಿದಂತೆ ನೂರಾರು ಮುಖಂಡರು ಕಾರ್ಯಕರ್ತರು ಶುಭಾಶಯ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net