ಸಭೆಯಲ್ಲಿ ನಿವಾಸಿಗಳ ಸಂಘಗಳ ಪ್ರತಿನಿಧಿಗಳು ಮಾತನಾಡಿ, ಘನತ್ಯಾಜ್ಯ ಸಮರ್ಪಕ ನಿರ್ವಹಣೆ, ನೈರ್ಮಲ್ಯ, ನಗರ ಪರಿಸರ ಹಾಗೂ ರಸ್ತೆ ಗುಂಡಿ, ಪಾದಚಾರಿ ಮಾರ್ಗಗಳ ಅಭಿವೃದ್ಧಿ ಹಾಗೂ ಒತ್ತುವರಿ ತೆರವು, ಪಾರ್ಕ್‌ಗಳ ನಿರ್ವಹಣೆ, ಬ್ಲ್ಯಾಕ್ ಸ್ಪಾಟ್‌ಗಳಿಂದ ನಗರ ಮುಕ್ತಗೊಳಿಸುವುದು, ಬೀದಿ ದೀಪಗಳ ನಿರ್ವಹಣೆ ಹಾಗೂ ಇನ್ನಿತರ ಮೂಲಸೌಕರ್ಯ ಒದಗಿಸುವ ವಿಚಾರವಾಗಿ ತ್ವರಿತ ಪರಿಹಾರ ಒದಗಿಸಬೇಕು ಎಂದು ಮನವಿ ಮಾಡಿದರು.