ಕಳೆದ ಜೂ.30ರಿಂದ ಬಿಎಲ್‌ಒಗಳು ಮತದಾರರ ಮನೆಗಳಿಗೆ ತೆರಳಿ ನಮೂನೆ ವಿತರಿಸಲು ಆರಂಭಿಸಿದ್ದಾರೆ. ಈ ಪ್ರಕ್ರಿಯೆ ಜುಲೈ ಅಂತ್ಯದವರೆಗೂ ಮುಂದುವರಿಯಲಿದ್ದು, ಭರ್ತಿ ಮಾಡಿದ ಫಾರ್ಮ್‌ಗಳನ್ನು ಸಂಗ್ರಹಿಸುವ ಕಾರ್ಯ ಸೋಮವಾರದಿಂದ (ಜು.5) ಆರಂಭವಾಗಲಿದೆ. ಕೆಲವರು ಈಗಾಗಲೇ ನಮೂನೆಗಳನ್ನು ಹಿಂದಿರುಗಿಸಿದ್ದು, ಬಹಳಷ್ಟು ಮಂದಿ 2002ರ ಅವಧಿಯ ಮತಪಟ್ಟಿಯಲ್ಲಿನ ಅಂಕಿ-ಅಂಶವನ್ನು ತುಂಬಲು ಪರದಾಡುವಂತಾಗಿದೆ. ಈ ಹಿಂದೆಯೆ ಮತಪಟ್ಟಿಯಲ್ಲಿರುವವರು ಸೇರಿದಂತೆ ಮನೆ ಬದಲಾಯಿಸಿರುವವರಿಗೆ ಹಳೆಯ ದಾಖಲೆ ಹೆಕ್ಕಿತೆಗೆಯಲು ಸಾಧ್ಯವಾಗುತ್ತಿಲ್ಲ. ಸ್ವಂತ ಮನೆ ಉಳ್ಳವರು, ವಿಳಾಸ ಬದಲಿಸದವರು ಪರಿಚಿತರಿಂದ ಮಾಹಿತಿ ಸಂಗ್ರಹಿಸಿ ನಮೂನೆಯನ್ನು ಭರ್ತಿ ಮಾಡುತ್ತಿದ್ದಾರೆ. ಉಳಿದವರು ಹಳೆಯ ದಾಖಲೆ ಸಿಗದ ಕಾರಣ ಬಿಎಲ್‌ಒಗಳು ಬಂದಾಗ ಅವರಿಂದಲೇ ಮಾಹಿತಿ ಕೋರಿದರಾಯಿತು ಎನ್ನುತ್ತಿದ್ದಾರೆ.