ಪ್ರಯಾಣಿಕರು ಬಸ್ ನಿಲ್ದಾಣದ ಸ್ವಚ್ಚತೆಗೆ ಮೊದಲ ಆದತ್ಯೆ ನೀಡಬೇಕು: ಸಂಸದೆ ಶೋಭ ಕರಂದ್ಲಾಜೆ.

ಕೆ.ಆರ್.ಪುರ ಕ್ಷೇತ್ರದ ಗೆದ್ದಲಹಳ್ಳಿ ಬಳಿ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ನಿರ್ಮಿಸಲಾಗಿರುವ ನೂತನ ಬಸ್ ನಿಲ್ದಾಣವನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಶಾಸಕ ಬೈರತಿ ಬಸವರಾಜ ಲೋಕಾರ್ಪಣೆಗೊಳಿಸದರು.
ಕೆ.ಆರ್.ಪುರ ಕ್ಷೇತ್ರದ ಗೆದ್ದಲಹಳ್ಳಿ ಬಳಿ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ನಿರ್ಮಿಸಲಾಗಿರುವ ನೂತನ ಬಸ್ ನಿಲ್ದಾಣವನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಶಾಸಕ ಬೈರತಿ ಬಸವರಾಜ ಲೋಕಾರ್ಪಣೆಗೊಳಿಸದರು.
Published on
ಕೆ.ಆರ್. ಪುರ: ಪ್ರಯಾಣಿಕರ ಅನುಕೂಲಕ್ಕಾಗಿ ನಿರ್ಮಿಸಿರುವ ಸುಸಜ್ಜಿತ ಬಸ್ ಶೆಲ್ಟರ್ ಗಳನ್ನು ಸಾರ್ವಜನಿಕರು ಉತ್ತಮ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಕೆಆರ್ ಪುರದ ಸಂಚಾರ ಪೊಲೀಸ್ ಠಾಣೆ ಹತ್ತಿರದ ಟಿ.ಸಿ.ಪಾಳ್ಯ, ಗೆದ್ದಲಹಳ್ಳಿ ಹಾಗೂ ಗುಬ್ಬಿ ಕ್ರಾಸ್ ಬಳಿ ಸಂಸದರ ಪ್ರದೇಶಾಭಿವೃದ್ಧಿ ಯೋಜನೆಯಡಿ ಅಂದಾಜು 50 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ನೂತನ ಬಸ್ ನಿಲ್ದಾಣ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಶಾಸಕ ಬೈರತಿ ಬಸವರಾಜರವರ ಮನವಿ ಮೇರೆಗೆ ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಕೆಆರ್ ಪುರ ಕ್ಷೇತ್ರದ ನಾಲ್ಕು ಸ್ಥಳಗಳಲ್ಲಿ ಕೇಂದ್ರ ಸರ್ಕಾರದ ಅನುದಾನದಲ್ಲಿ ನೂತನ ಬಸ್ ನಿಲ್ದಾಣಗಳು ನಿರ್ಮಿಸಲಾಗಿದೆ. ಪ್ರಯಾಣಿಕರು ತಮ್ಮ ತಮ್ಮ ಕಚೇರಿ, ಊರುಗಳಿಗೆ ಹೋಗುವ ಸಮಯದಲ್ಲಿ ಬಸ್ ಕಾಯುವಾಗ ಮಳೆ, ಗಾಳಿ ಮತ್ತು ಬಿಸಿಲಿನಿಂದ ರಕ್ಷಣೆ ಪಡೆಯಲು ಅನುಕೂಲವಾಗಲಿದ್ದು, ಸಾರ್ವಜನಿಕರು ಬಸ್ ನಿಲ್ದಾಣಗಳಲ್ಲಿ ಸ್ವಚ್ಚತೆ ಕಾಪಾಡಿಕೊಂಡು ಇಲ್ಲಿನ ವಾತಾವರಣ ಹಾಳಾಗದಂತೆ ನೋಡಿಕೊಳ್ಳಬೇಕು ಎಂದರು.
ಶಾಸಕ ಬೈರತಿ ಬಸವರಾಜ ಮಾತನಾಡಿ, ರಾಜ್ಯ ಸರ್ಕಾರದಲ್ಲಿ ಅನುದಾನ ಕೊರತೆ ಇರುವುದರಿಂದ ಕೇಂದ್ರ ಸರ್ಕಾರ ಅನುದಾನದಲ್ಲಿ ಪ್ರಮುಖ ಮುಖ್ಯರಸ್ತೆಗಳಲ್ಲಿ ಬಸ್ ನಿಲ್ದಾಣಗಳು ನಿರ್ಮಾಣ ಮಾಡುವಂತೆ ಮನವಿ ಮಾಡಲಾಗಿತ್ತು.ಮನವಿಗೆ ಸ್ಪಂದಿಸಿದ ಸಚಿವರು ಐವತ್ತು ಲಕ್ಷ ಅನುದಾನವನ್ನು ಬಿಡುಗಡೆ ಮಾಡಿ ನಾಲ್ಕು ಸ್ಥಳಗಳಲ್ಲಿ ಬಸ್ ನಿಲ್ದಾಣಗಳ ನಿರ್ಮಾಣಕ್ಕೆ ಸಹಕರಿಸಿದ್ದಾರೆ ಎಂದು ಹೇಳಿದರು. ಕ್ಷೇತ್ರ ಮಂಡಲ ಅಧ್ಯಕ್ಷ ಮುನೇಗೌಡ, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ನಾಗೇನಹಳ್ಳಿ ಲೋಕೇಶ್, ಮುಖಂಡರಾದ ಹೊರಮಾವು ಪ್ರಕಾಶ್, ಜಯಪ್ರಕಾಶ್, ಅಂತೋಣಿಸ್ವಾಮಿ, ಶ್ರೀಕಾಂತ್ ಚಿದಾನಂದ್, ದೇವಸಂದ್ರ ಕೇಶವ್, ಧನಕುಮಾರ್, ಕಾಂತೇಶ್, ಪುನಿತ್, ಬಚ್ಚೇಗೌಡ, ಪ್ರದೀಪ್ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net