5 ದಿನದಲ್ಲಿ 1,200ಕ್ಕೂ ಅಧಿಕ ಇಂಡಿಗೊ ವಿಮಾನಗಳು ರದ್ದಾಗಿರುವ ಹಿನ್ನೆಲೆಯಲ್ಲಿ ಬೇರೆ ವಿಮಾನಯಾನ ಸಂಸ್ಥೆಗಳು ದೆಹಲಿ, ಮುಂಬೈ, ಬೆಂಗಳೂರು, ಹೈದರಾಬಾದ್ ಟಿಕೆಟ್ ದರವನ್ನು 1 ಲಕ್ಷ ರೂ.ಗೆ ಮುಟ್ಟಿದೆ. ಹಲವು ಪ್ರಯಾಣಿಕರು ದೆಹಲಿ, ಬೆಂಗಳೂರು, ಚೆನ್ನೈ, ಮುಂಬೈ, ಹೈದರಾಬಾದ್ ಸೇರಿ ದೇಶದ ವಿವಿಧ ಭಾಗಗಳಲ್ಲಿ ತೆರಳಲು ವಿಮಾನ ನಿಲ್ದಾಣದಲ್ಲಿ ಕಾಯ್ದು ಕುಳಿತಿದ್ದರು. ಕೆಲವರ್ ಟರ್ಮಿನಲ್‌ನಲ್ಲಿ ಮಲಗಿರುವ, ಊಟ, ತಿಂಡಿ ಸೇವಿಸುತ್ತಿರುವ ದೃಶ್ಯಗಳು ಕಂಡುಬಂದಿವೆ. ಹಲವು ವಿಮಾನಗಳ ರದ್ದು ಹಿನ್ನೆಲೆಯಲ್ಲಿ ಇಂಡಿಗೊ ಸಿಬ್ಬಂದಿ ಜೊತೆ ವಾಗ್ದಾದ ನಡೆಸಿರುವ ವಿಡಿಯೋಗಳು ಬಂದಿವೆ.