ಈ ಕುರಿತು ಮಾತನಾಡಿದ ಸೌತ್ ಯುನೈಟೆಡ್ ಫುಟ್ ಬಾಲ್ ಕ್ಲಬ್ ನ (ಎಸ್.ಯು.ಎಫ್.ಸಿ) ಸಿಇಓ ಮಹಮ್ಮದ್ ರಫೀಕ್ ಅವರು, “ಇಂದಿನ ಸ್ಪರ್ಧಾತ್ಮಕ ಕ್ರೀಡಾ ವ್ಯವಸ್ಥೆಯಲ್ಲಿ ಆಟಗಾರರ ಸುರಕ್ಷತೆ ಮತ್ತು ವೈದ್ಯಕೀಯ ಸಿದ್ಧತೆಯು ಬಹಳ ಪ್ರಮುಖವಾಗಿದೆ. ಈ ನಿಟ್ಟಿನಲ್ಲಿ ಕ್ರೀಡಾ ಗಾಯಗಳು, ಆರ್ಥೊಪೆಡಿಕ್ಸ್ ಮತ್ತು ಆಘಾತ ಚಿಕಿತ್ಸೆಯಲ್ಲಿ ಮುಂಚೂಣಿಯಲ್ಲಿರುವ ಹೊಸ್ಮಟ್ ಆಸ್ಪತ್ರೆ ಜೊತೆಗೆ ಪಾಲುದಾರಿಕೆ ಮಾಡಿಕೊಂಡಿರುವುದು ನಮಗೆ ಮೈದಾನದ ಒಳಗೆ ಮತ್ತು ಹೊರಗೆ ಹೆಚ್ಚಿನ ವೈದ್ಯಕೀಯ ಬಲ ದೊರೆತಂತಾಗಿದೆ. ಆನ್ ಸೈಟ್ ಸ್ಪೋರ್ಟ್ಸ್ ಮೆಡಿಕಲ್ ಸೆಂಟರ್, ವೈದ್ಯಕೀಯ ನಾಯಕತ್ವ, ಸಜ್ಜುಗೊಂಡ ಆಂಬುಲೆನ್ಸ್ ಮತ್ತು ಮುನ್ನೆಚ್ಚರಿಕೆಯ ವೈದ್ಯಕೀಯ ತಪಾಸಣೆಗಳ ಮೂಲಕ ನಾವು ನಮ್ಮ ಕ್ರೀಡಾಪಟುಗಳ ಚಿಕಿತ್ಸಾ ವ್ಯವಸ್ಥೆಯನ್ನು ಜಾಗತಿಕ ಗುಣಮಟ್ಟಕ್ಕೆ ಏರಿಸುತ್ತಿದ್ದೇವೆ. ಮುಖ್ಯವಾಗಿ, ಈ ವೈದ್ಯಕೀಯ ಸೌಲಭ್ಯವು ಕೇವಲ ನಮ್ಮ ವೃತ್ತಿಪರ ತಂಡಕ್ಕೆ ಮಾತ್ರ ಸೀಮಿತವಾಗಿಲ್ಲ. ಇದು ನಮ್ಮ ಫುಟ್ ಬಾಲ್ ಅಕಾಡೆಮಿ, ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ಎಸ್.ಯು.ಎಫ್.ಸಿ ಮೈದಾನದಲ್ಲಿ ನಡೆಯುವ ಎಲ್ಲಾ ಚಟುವಟಿಕೆಗಳಿಗೆ ಬೆಂಬಲ ನೀಡಲಿದೆ. ಅಂಬೆಗಾಲಿಡುವ ಮಕ್ಕಳಿಂದ ಹಿಡಿದು ತಳಮಟ್ಟದ ಆಟಗಾರರು, ಹವ್ಯಾಸಿಗಳು ಹಾಗೂ ವೃತ್ತಿಪರ ಆಟಗಾರರವರೆಗೆ ಎಲ್ಲರಿಗೂ ವೈದ್ಯಕೀಯ ವ್ಯವಸ್ಥೆ ಲಭ್ಯವಿರುತ್ತದೆ. ಇಡೀ ಫುಟ್ ಬಾಲ್ ಸಮುದಾಯಕ್ಕೆ ಇಂತಹ ವ್ಯವಸ್ಥಿತ ವೈದ್ಯಕೀಯ ಬೆಂಬಲವನ್ನು ನೀಡುತ್ತಿರುವ ಕೆಲವೇ ಕೆಲವು ಕ್ಲಬ್ ಗಳಲ್ಲಿ ಎಸ್.ಯು.ಎಫ್.ಸಿ ಕೂಡ ಒಂದಾಗಿದೆ. ತಕ್ಷಣದ ಪ್ರಥಮ ಚಿಕಿತ್ಸೆ, ಗಾಯಗಳ ನಿರ್ವಹಣೆ ಮತ್ತು ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸಲು ನಮ್ಮ ಮೈದಾನದಲ್ಲಿ ಫಿಸಿಯೋಥೆರಪಿಸ್ಟ್ ಮತ್ತು ತರಬೇತಿ ಪಡೆದ ಪುರುಷ ವೈದ್ಯಕೀಯ ಸಿಬ್ಬಂದಿ ಸದಾ ಲಭ್ಯವಿರುತ್ತಾರೆ” ಎಂದು ಹೇಳಿದರು.