ಇನ್ನು, ಅರಣ್ಯ ವಿಭಾಗದಲ್ಲಿ ಎರಡೇ ಪಾಳಿ

forest-department
forest-department
Published on

ಪ್ರಮುಖ ಮುಖ್ಯಾಂಶಗಳು

  • ರಾತ್ರಿ ಹಾಗೂ ಹಗಲು ಪಾಳಿಗಳೊಂದಿಗೆ ಕ್ಷಿಪ್ರ ಸ್ಪಂದನಾ ತಂಡ ವಿಲೀನ
  • ರಾತ್ರಿ ಹಾಗೂ ಹಗಲು ಪಾಳಿಗಳೊಂದಿಗೆ ಕ್ಷಿಪ್ರ ಸ್ಪಂದನಾ ತಂಡ ವಿಲೀನ ತುರ್ತು ನಿರ್ವಹಣೆ ತಂಡಗಳ ಕಾರ್ಯನಿರ್ವಹಣೆ ಪರಿಶೀಲನೆ
ಬೆಂಗಳೂರು: ಅರಣ್ಯ ವಿಭಾಗದ ಮರಗಳ ವ್ಯವಸ್ಥಿತ ನಿರ್ವಹಣಾ ತಂಡ ಹಾಗೂ ತುರ್ತು ನಿರ್ವಹಣೆಗಾಗಿ ಮೂರು ಪಾಳಿಗಳ ಬದಲು ಎರಡು ಪಾಳಿಯಲ್ಲಿ ಕಾರ್ಯನಿರ್ವಹಿಸುವ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗುವುದು ಎಂದು ಪಶ್ಚಿಮ ನಗರ ಪಾಲಿಕೆಯ ಆಯುಕ್ತ ಡಾ. ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.
ಅರಣ್ಯ ವಿಭಾಗದ ತುರ್ತು ನಿರ್ವಹಣೆ ತಂಡಗಳು ಸೇರಿ ಸಿಬ್ಬಂದಿ ಹಾಗೂ ಪರಿಕರಗಳ ಕಾರ್ಯನಿರ್ವಹಣೆ ಪರಿಶೀಲನೆಯನ್ನು ಬುಧವಾರ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಪ್ರಸ್ತುತ ರಾತ್ರಿ ಪಾಳಿ, ಹಗಲು ಪಾಳಿ ಹಾಗೂ ಕ್ಷಿಪ್ರ ಸ್ಪಂದನಾ ತಂಡಗಳು ಕಾರ್ಯಾಚರಿಸುತ್ತಿವೆ. ಈ ತಂಡಗಳನ್ನು ಇನ್ನಷ್ಟು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಲು ರಾಪಿಡ್ ರೆಸ್ಪಾನ್ಸ್ ಟೀಂಅನ್ನು ಇತರ ತಂಡದೊಂದಿಗೆ ವಿಲೀನಗೊಳಿಸಲಾಗುವುದು. ಸಿಬ್ಬಂದಿ, ಪರಿಕರ ಹಾಗೂ ಇತರ ಹೊಣೆಯನ್ನು ಎರಡೂ ತಂಡಕ್ಕೆ ಹಂಚಿಕೆ ಮಾಡಲಾಗುವುದು ಎಂದರು.

ಅರಣ್ಯ ವಿಭಾಗದಲ್ಲಿ ನುರಿತ ಸಿಬ್ಬಂದಿ ನಿಯೋಜನೆ:

ಪ್ರಸ್ತುತ ಪಾಲಿಕೆಯ ಅರಣ್ಯ ಘಟಕದಲ್ಲಿ 5 ಕ್ರೇನ್, 17 ಟೆಂಪೋ ಹಾಗೂ 15 ಸಿಬ್ಬಂದಿ ಒಳಗೊಂಡ ತಂಡಗಳಿವೆ. ಪ್ರತಿ ತಂಡದಲ್ಲಿ 8 ಮಂದಿ (ತಲಾ ಒಬ್ಬ ಚಾಲಕ, ಮೇಲ್ವಿಚಾರಕ, ಇಬ್ಬರು ನುರಿತ ಕಾರ್ಮಿಕರು, ನಾಲ್ವರು ಸಹಾಯಕರು) ಇರುತ್ತಾರೆ. ಜತೆಗೆ ಪ್ರತಿ ತಂಡದ ಬಳಿ ತಲಾ ಎರಡು ಮರ ಕತ್ತರಿಸುವ ಯಂತ್ರ, ಹಗ್ಗ, ಮಚ್ಚು, ದೋಟಿ ಒದಗಿಸಲಾಗಿದೆ. ಉತ್ತಮವಾಗಿ ಕೆಲಸ ಮಾಡಲು ಎಲ್ಲ ಸಿಬ್ಬಂದಿಯ ಬಯೋಮೆಟ್ರಿಕ್ ಹಾಜರಾತಿಗೆ ಕ್ರಮ ವಹಿಸಲಾಗುವುದು ಎಂದು ಆಯುಕ್ತರು ತಿಳಿಸಿದರು.
ಈ ವೇಳೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್ ಕುಮಾರ್ ಹಾಗೂ ಉಪ ವಲಯ ಅರಣ್ಯಾಧಿಕಾರಿಗಳು ಹಾಜರಿದ್ದರು.

ಆಯುಕ್ತರು ನೀಡಿದ ಪ್ರಮುಖ ಸೂಚನೆ:

* ಪಾಲಿಕೆ ವ್ಯಾಪ್ತಿಯಲ್ಲಿ ವ್ಯವಸ್ಥಿತವಾಗಿ ರಸ್ತೆ ಬದಿ ಮರಗಳನ್ನು ನಿರ್ವಹಿಸಬೇಕು.
* ವಾಹನಗಳಲ್ಲಿ ಪಾಲಿಕೆ ಹೆಸರು, ವಿಧಾನಸಭಾ ಕ್ಷೇತ್ರದ ಹೆಸರು, ಸಹಾಯವಾಣಿ ಸಂಖ್ಯೆ ನಮೂದಿಸಬೇಕು..
* ಕ್ರೇನ್‌ಗಳಿಗೆ ಜಿಪಿಎಸ್ ಕಡ್ಡಾಯ. ಕ್ಯಾನೊಪಿ ಮ್ಯಾನೇಜ್ಮೆಂಟ್ ತಂಡದೊಂದಿಗೆ ಕ್ರೇನ್ ಇರಬೇಕು.
* ತಾತ್ಕಾಲಿಕ ಟಿಂಬರ್ ಯಾರ್ಡ್ ಗುರುತಿಸಿ ಅಲ್ಲಿಗೆ ತೆರವುಗೊಳಿಸಿದ ಮರಗಳನ್ನು ವಿಲೇವಾರಿ ಮಾಡಬೇಕು. ಟಿಂಬರ್ ಯಾರ್ಡ್‌ಗಳಲ್ಲಿ ಗಾರ್ಡ್ ನೇಮಿಸಬೇಕು.
* ಸಹಾಯವಾಣಿಗೆ ಬಂದ ಸಾರ್ವಜನಿಕರ ದೂರುಗಳ ಬಗ್ಗೆ ಅಗತ್ಯ ಕ್ರಮ ವಹಿಸಬೇಕು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net