ದೇಶದ ಅಭಿವೃದ್ಧಿಯಲ್ಲಿ ಮೋದಿ ಪಾತ್ರ ಪ್ರಮುಖ

ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ಪ್ರಯುಕ್ತ ಶಾಸಕ ಬೈರತಿ ಬಸವರಾಜ ಅವರು ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ವಿತರಿಸಿದರು. ಪಾಲಿಕೆ ಮಾಜಿ ಸದಸ್ಯರಾದ ಶ್ರೀಕಾಂತ್​, ಪಿ.ಜೆ. ಅಂತೋಣಿಸ್ವಾಮಿ ಇದ್ದರು.
ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ಪ್ರಯುಕ್ತ ಶಾಸಕ ಬೈರತಿ ಬಸವರಾಜ ಅವರು ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ವಿತರಿಸಿದರು. ಪಾಲಿಕೆ ಮಾಜಿ ಸದಸ್ಯರಾದ ಶ್ರೀಕಾಂತ್​, ಪಿ.ಜೆ. ಅಂತೋಣಿಸ್ವಾಮಿ ಇದ್ದರು.
Published on
ಕೆ.ಆರ್​. ಪುರ: ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಪಾತ್ರ ದೊಡ್ಡದಿದೆ. ಅವರ ಹುಟ್ಟುಹಬ್ಬದ ಪ್ರಯುಕ್ತ ತಿಂಗಳ ಪೂರ್ತಿ ದಿನಕ್ಕೊಂದು ಸೇವಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಬೈರತಿ ಬಸವರಾಜ ತಿಳಿಸಿದ್ದಾರೆ.
ನಗರದ ಕಟ್ಟೆ ಶ್ರೀವಿನಾಯಕ ದೇವಾಲಯದಲ್ಲಿ ಮೋದಿ ಹುಟ್ಟುಹಬ್ಬದ ಪ್ರಯುಕ್ತ ಪೂಜೆ ಸಲ್ಲಿಸಿದ ನಂತರ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ವಿತರಿಸಿ ಮಾತನಾಡಿದರು.
ಮೋದಿಯವರು ಸತತ ಮೂರು ಬಾರಿಯೂ ದೇಶದಲ್ಲಿ ಸೂಕ್ತ ರೀತಿಯಲ್ಲಿ ಅಡಳಿತ ನಡೆಸಿ ಜನಮನ್ನಣೆಗೆ ಪಾತ್ರರಾಗಿದ್ದಾರೆ. ಮುಂದಿನ ದೇಶ ಸುಭಿಕ್ಷವಾಗಿರಲಿ ಎಂಬುದು ಅವರ ಆಶಯವಾಗಿದೆ. ಕೋವಿಡ್​ ಸೋಂಕು ಎದುರಾಗಿದ್ದಾಗ ದೇಶವನ್ನು ಮನ್ನಡೆಸುವುದು ಹೇಗೆ ಎಂಬ ಕ್ಲಿಷ್ಟಕರ ಪರಿಸ್ಥಿತಿ ಎದುರಾಗಿತ್ತು. ಆದರೆ ವೈದ್ಯರಿಗೆ, ವಿಜ್ಞಾನಿಗಳಿಗೆ ಮತ್ತು ಸೇವಾ ಕಾರ್ಯರ್ತರಿಗೆ ಧೈರ್ಯ ತುಂಬಿ ಸಾವು&ನೋವು ತಡೆದರು ಎಂದು ಮೆಲುಕು ಹಾಕಿದರು.
ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಲೋಕೇಶ್​, ಸಚ್ಚಿದಾನಂದ ಮೂರ್ತಿ, ಕೆ. ಹೇಮಂತ್​, ಕಲ್ಕೆರೆ ಕೃಷ್ಣಮೂರ್ತಿ, ಸಿದ್ದಲಿಂಗಯ್ಯ, ಮಂಜುನಾಥ್​ ರೆಡ್ಡಿ, ಗಿರೀಶ್​ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net