ಕಾಟನ್‌ಪೇಟೆ ವರಪ್ರದ ಆಂಜನೇಯನಿಗೆ ಮಹಾ ಕುಂಭಾಭಿಷೇಕ.

ಕಾಟನ್‌ಪೇಟೆ ವರಪ್ರದ ಆಂಜನೇಯನಿಗೆ ಮಹಾ ಕುಂಭಾಭಿಷೇಕ.
ಕಾಟನ್‌ಪೇಟೆ ವರಪ್ರದ ಆಂಜನೇಯನಿಗೆ ಮಹಾ ಕುಂಭಾಭಿಷೇಕ.
Published on
ಬೆಂಗಳೂರು: ನಗರದ ಕಾಟನ್ ಪೇಟೆಯಲ್ಲಿರುವ ಪುರಾಣ ಪ್ರಸಿದ್ಧ ಶ್ರೀ ವರಪ್ರದ ಆಂಜನೇಯಸ್ವಾಮಿ ದೇವಾಲಯದಲ್ಲಿ ಗುರುವಾರದಂದು ಮಹಾ ಕುಂಭಾಭಿಷೇಕ ಕಾರ್ಯಕ್ರಮ ನಡೆಯಿತು.
ವಿಶ್ವಕ್ಷೇನಾರಾಧನೆ, ಪುಣ್ಯಾಹವಾಚನ, ಸರ್ವಗ್ನಿ ಕುಂಡೇಶು,ಅಗ್ನಿಧ್ಯಾನಾ ಕುಂಭಾರಾಧನೆ, ಪ್ರಧಾನ ಹೋಮ, ವಿಮಾನ ಅಂಗ ಹೋಮ, ಅಂಗಹೋಮ, ಬಿಂಬವಾಸ್ತು, ಅಲಯವಾಸ್ತು, ನೇತ್ರೋನ್ನಿಲನ, ಪಂಚಗವ್ಯಾಧಿವಾಸ, ಕ್ಷೀರಾಧಿವಾಸ, ಜಲಾಧಿವಾಸ, ನವಕಳಶನ್ನಪನ, ಭಸ್ಮಧಾರಣೆ ಸೇರಿದಂತೆ ಹೋಮಹವನ ಮಾಡಲಾಯಿತು.
ಮೂರೂ ದಿನಗಳ ಕಾಲ ನಡೆಯುವ ಈ ವಿಶೇಷ ಕಾರ್ಯಕ್ರಮದಲ್ಲಿ ಪ್ರತಿನಿತ್ಯ ಪಂಚಶಯನಾಧಿವಾಸ, ದ್ವಾರಾರ್ಚನೆ, ಅಷ್ಟಾವಧಾನ ಸೇವೆ, ಯಾಗಶಾಲೆಯಲ್ಲಿ ಪಂಚ ಅಗ್ನಿ ಕುಂಡೇಶು, ಪ್ರಧಾನ ಹೋಮ, ಹೌತ್ರಪ್ರಶಂಸನ, ಮೂರ್ತಿ ಹೋಮ, ಮಹಾ ಶಾಂತಿ ಹೋಮ, ಸೀತಾ ಲಕ್ಷ್ಮಣ ಸಹಿತ ರಾಮಚಂದ್ರಸ್ವಾಮಿ ಸರ್ವದೇವತ್ಯ ಹೋಮ, ಮಹಾಗಣಪತಿ ಹೋಮ, ವರಪ್ರದ ಆಂಜನೇಯಸ್ವಾಮಿ ಪಾರಮಾತ್ಮಿಕ ಹೋಮ, ಅಂಜನೇಯಸ್ವಾಮಿ ಬೀಜಾಕ್ಷರ ಹೋಮ, ಮೂಲ ಹೋಮ ನಡೆಯಲಿದೆ.
ಈ ದೇವಾಲಯವನ್ನು ವ್ಯಾಸರಾಯರು ಪ್ರತಿಷ್ಠಾಪನೆ ಮಾಡಿದ್ದಾರೆ ಎಂಬ ಇತಿಹಾಸವಿದ್ದು, ಕಷ್ಟವೆಂದು ಬಂದ ಭಕ್ತರ ಕಷ್ಟಗಳನ್ನು ನೀಗಿಸಿ ಇಷ್ಟಾರ್ಥಗಳನ್ನು ನೇರವೇರಿಸುವ ದೈವ ಎಂದು ಭಕ್ತಾದಿಗಳ ನಂಬಿಕೆಯಾಗಿದೆ.
ವರಪ್ರದ ಆಂಜನೇಯ ಸ್ವಾಮಿ ದೇವಾಲಯ ಅಭಿವೃದ್ಧಿ ಸಮಿತಿ ವತಿಯಿಂದ ಶ್ರೀ ವರಪ್ರದ ಆಂಜನೇಯ ಸ್ವಾಮಿ ಜತೆಗೆ ಶ್ರೀ ಮಹಾಗಣಪತಿ,ಶ್ರೀ ಕೋದಂಡರಾಮಸ್ವಾಮಿ, ನವಗ್ರಹ, ನಾಗದೇವತೆ,ವಿಮಾನಗೋಪುರ ಜೀರ್ಣೋದ್ಧಾರ ಮಾಡಿ ಸುಂದರ ದೇವಾಲಯ ನಿರ್ಮಾಣ ಮಾಡಲಾಗಿದ್ದು, ಸಮಿತಿ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನಡೆಯತ್ತಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net