ಬಿಲ್‌ನಲ್ಲಿ 'ಲಿಟಲ್ ಫ್ಯಾಟ್ ಬ್ಲ್ಯಾಕ್ ಶರ್ಟ್' ಎಂದು ಮುದ್ರಣ: ಬಾಡಿ-ಶೇಮಿಂಗ್ ಮಾಡಿದ್ದಕ್ಕೆ ಗ್ರಾಹಕನಿಗೆ ಸಾರಿ ಕೇಳಿದ ಕೆಫೆ..Cafe Bengaluru Body Shaming

Subko cafe Bengaluru body shaming
Subko cafe Bengaluru body shaming
Published on

ಪ್ರಮುಖ ಮುಖ್ಯಾಂಶಗಳು

  • ಹೆಸರಿನ ಬದಲಿಗೆ "ಲಿಟಲ್ ಫ್ಯಾಟ್ ಬ್ಲ್ಯಾಕ್ ಶರ್ಟ್" ಗುರುತಿಸಿದ ಕೋರಮಂಗಲದ ಕೆಫೆ.
  • ಹೆಸರಿನ ಬದಲಿಗೆ ಬಾಡಿ ಶೇಮಿಂಗ್​ ಮಾಡಿದ ಕೆಫೆ ಆಡಳಿತವನ್ನು ತರಾಟೆಗೆ ತಗೊಂಡ ಗ್ರಾಹಕ.
  • ಈ ಕೃತ್ಯವು ಸಂಪೂರ್ಣವಾಗಿ ತಪ್ಪು ಎಂದು ಸಾರ್ವಜನಿಕವಾಗಿ ಸಾರಿ ಕೇಳಿದ ಕೆಫೆ.

Subko cafe Bengaluru body shaming: 

ಕೋರಮಂಗಲದಲ್ಲಿರುವ ಫೇಮಸ್ ಸುಬ್ಕೊದ ಕ್ರಾಫ್ಟರಿ ವಿರುದ್ಧ ಗ್ರಾಹಕರೊಬ್ಬರು ಕಿಡಿಕಾರಿದ್ದಾರೆ.   ಬಿಲ್‌ನಲ್ಲಿ, ಅವರ ಹೆಸರು, ಟೇಬಲ್ ನಂಬರ್ ಅಥವಾ ಆರ್ಡರ್ ವಿವರಗಳನ್ನು ಬರೆಯುವ ಬದಲು "ಲಿಟಲ್ ಫ್ಯಾಟ್ ಬ್ಲ್ಯಾಕ್ ಶರ್ಟ್"  ಎಂದು ಬರೆದಿರುವುದನ್ನು ಕಂಡ ಅವರು ಬಾಡಿ ಶೇಮಿಂಗ್ ಮಾಡಲಾಗ್ತಿದೆ ಎಂದು ಕಿಡಿಕಾರಿದ್ದಾರೆ. 


ಬಿಲ್​ನಲ್ಲಿ  ತನ್ನ ಹೆಸರಿನ ಬದಲಿಗೆ ಅವಮಾನಕರ ಪದಗಳನ್ನು ಬಳಸಿರುವುದನ್ನು ಕಂಡ ವ್ಯಕ್ತಿ ಈ ಬಗ್ಗೆ  r/BangaloreSocial ಎನ್ನುವ ರೆಡ್ಡಿಟ್​ ಖಾತೆಯಲ್ಲಿ ಸಂತ್ರಸ್ತ ವ್ಯಕ್ತಿ ಬರೆದುಕೊಂಡಿದ್ದಾರೆ.  ಇದು ಒಳ್ಳೆಯ ಕೆಫೆ ಹಾಗಂತ ಏನು ಬೇಕಾದ್ರು ಮಾಡ್ಬೋದು ಎನ್ನುವ ಹಕ್ಕು ಅವ್ರಿಗಿಲ್ಲ ಎಂದು ಕೆಲವು ರೆಡ್ಡಿಟ್ ಬಳಕೆದಾರರು ಕಿಡಿಕಾರಿದ್ದಾರೆ

ಗ್ರಾಹಕ ಬರೆದುಕೊಂಡಿರುವುದು ಏನು?

ಸಬ್ಕೊ ಕೆಫೆಗೆ ಹೋಗಿ, ಆಹಾರವನ್ನು ಆರ್ಡರ್ ಮಾಡಿ, ಬಿಲ್ ಪಾವತಿಸಿ, ನಂತರ ರಸೀದಿಯನ್ನು ನೋಡಿದೆ.ಗ್ರಾಹಕರ ವಿವರಗಳ ಅಡಿಯಲ್ಲಿ, ನನ್ನ ಹೆಸರಿನ ಬದಲಿಗೆ ನನ್ನನ್ನು ವರ್ಣಿಸಲು ನನ್ನ ದೇಹವನ್ನು ಬಳಸಿಕೊಂಡರು.
ಪುಟ್ಟ ದಪ್ಪ ದೇಹ, ಕಪ್ಪು ಶರ್ಟ್ ಎಂದು ಉಲ್ಲೇಖಿಸಿದ್ದಾರೆ. ಹೌದು. ನನ್ನನ್ನು ಗುರುತಿಸಲು ಇದುವೇ ಸಾಕಾಗಿತ್ತು ಎನಿಸುತ್ತದೆ. ನನ್ನ ಹೆಸರಲ್ಲ. ಟೇಬಲ್ 12 ರ ಜೆಂಟಲ್ಮನ್" ಎಂದೂ ಇಲ್ಲ. ಕನಿಷ್ಠ ಆರ್ಡರ್ ಸಂಖ್ಯೆಯೂ ಅಲ್ಲ.

ಇದಕ್ಕಿಂತ ಪರಿಸ್ಥಿತಿ ಇನ್ನಷ್ಟು ಹದಗೆಡಲು ಕಾರಣವೆಂದರೆ, ಯಾರೋ ಒಬ್ಬರು ಇದನ್ನು ಪ್ರಜ್ಞಾಪೂರ್ವಕವಾಗಿ ತಮ್ಮ ಸಿಸ್ಟಮ್‌ನಲ್ಲಿ ಟೈಪ್ ಮಾಡಬೇಕಾಗಿ ಬಂದಿದೆ. ಗ್ರಾಹಕರೊಬ್ಬರನ್ನು ನೋಡಿ, ಮೂಲಭೂತ ಗೌರವವೆಂಬುದು ಸೇವೆಯ ಭಾಗವಲ್ಲ ಎಂಬಂತೆ ಅವರನ್ನು "ದಪ್ಪ" ಎಂದು ಹೀಯಾಳಿಸಲಾಗಿದೆ.


ಇದೇ ಸ್ಥಳದಲ್ಲಿ ಒಬ್ಬ ಮಹಿಳೆ ಇದ್ದು, ಅವಳ ಹೆಸರನ್ನು ಬಳಸುವ ಬದಲು ಅವಳ ದೇಹದ ಬಗ್ಗೆ ವಿವರಣೆ ನೀಡಿದ್ದರೆ, ಯಾರೂ ಕೂಡ ಇದನ್ನು ಜೋಕ್ ಎಂದು ಕರೆಯುತ್ತಿರಲಿಲ್ಲ ಎಂದು ನನಗೆ ಅನಿಸುತ್ತದೆ. ಯಾರೋ ಒಬ್ಬ ವ್ಯಕ್ತಿ ಪುರುಷನಾಗಿದ್ದಾನೆ ಮಾತ್ರಕ್ಕೆ ದೇಹವನ್ನು ನಿಂದಿಸುವುದು ತಮಾಷೆಯಾಗುವುದಿಲ್ಲ. ನಿಮ್ಮ ಸಿಬ್ಬಂದಿ ಗ್ರಾಹಕರನ್ನು ಅವಮಾನಿಸದೆ ಗುರುತಿಸಬಹುದು. ಉತ್ತಮ ರೀತಿಯಲ್ಲಿ ನಡೆದುಕೊಳ್ಳಿ ಎಂದು ಬರೆದುಕೊಂಡಿದ್ದಾರೆ
ಮೌನವಾಗಿರುವುದಕ್ಕಿಂತ ಬಹಿರಂಗವಾಗಿ ತಪ್ಪು ಒಪ್ಪಿಕೊಳ್ಳುವುದು ಮುಖ್ಯ ಎಂದು ತಿಳಿಸಿರುವ ಕೆಫೆ, ಆಂತರಿಕ ದೂರುಗಳ ಸಮಿತಿ ಮೂಲಕ ಗ್ರಾಹಕರ ದೂರುಗಳನ್ನು ಆಲಿಸುವುದಾಗಿ ಮತ್ತು ತಮ್ಮ ಸಿಬ್ಬಂದಿಗೆ ತರಬೇತಿ ನೀಡುವುದಾಗಿ ತಿಳಿಸಿದೆ.

ಸಾರಿ ಕೇಳಿದ ಕೆಫೆ

ಘಟನೆ ಕುರಿತು ಸ್ಪಂದಿಸಿರುವ ಕೆಫೆ ಆಡಳಿತ ಮಂಡಳಿಯು ಇನ್‌ಸ್ಟಾಗ್ರಾಮ್ ಮೂಲಕ ಅಧಿಕೃತ ಕ್ಷಮೆಯಾಚನಾ ಪತ್ರವನ್ನು ಬಿಡುಗಡೆ ಮಾಡಿದೆ. "ಕೆಲವು ವಿಷಯಗಳನ್ನು ಮೌನವಾಗಿ ಸರಿಪಡಿಸಬಹುದು, ಆದರೆ ಮೌನವಾಗಿರುವುದೇ ಇಂತಹ ತಪ್ಪಾದ ಸಂಸ್ಕೃತಿಗೆ ದಾರಿ ಮಾಡಿಕೊಡುತ್ತದೆ. ಈ ಅನುಭವ ಎದುರಿಸಿದ ಅತಿಥಿಗೆ ನಾವು ಕ್ಷಮೆಯಾಚಿಸುತ್ತೇವೆ. ನಮ್ಮ ತಂಡದ ಸದಸ್ಯರು ಸಂಪೂರ್ಣವಾಗಿ ತಪ್ಪಿತಸ್ಥರಾಗಿದ್ದಾರೆ" ಎಂದು ತಿಳಿಸಿದೆ.
ಸಮಸ್ಯೆಗಳನ್ನು ಪರಿಹರಿಸಲು ಆಂತರಿಕ ದೂರುಗಳ ಸಮಿತಿ (ICC) ಸಿದ್ಧವಿದೆ ಎಂದು ತಿಳಿಸಿರುವ ಕೆಫೆ, ಜಡ್ಜ್‌ಮೆಂಟ್‌ಗಳಿಂದ ತಪ್ಪಿಸಿಕೊಳ್ಳುವುದಕ್ಕಿಂತ ಸಾರ್ವಜನಿಕವಾಗಿ ಹೊಣೆಗಾರಿಕೆಯನ್ನು ಸ್ವೀಕರಿಸುವುದು ಹೆಚ್ಚು ಮುಖ್ಯ ಎಂದು ಹೇಳುವ ಮೂಲಕ ಬಾಡಿ-ಶೇಮಿಂಗ್ ಅನ್ನು ಸ್ಪಷ್ಟವಾಗಿ ಖಂಡಿಸಿದೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net