ನಾಗರಿಕರ ಅಹವಾಲು ಆಲಿಕೆ ವೇಳೆ ದಕ್ಷಿಣ ಪಾಲಿಕೆಯ ವಿವಿಧೆಡೆಯಿಂದ ಆಗಮಿಸಿದ್ದ ಜನರು ತಮ್ಮ ಸಮಸ್ಯೆಗಳನ್ನು ಆಯುಕ್ತರ ಗಮನಕ್ಕೆ ತಂದರು. ಈ ವೇಳೆ ವೆಗಾ ಸಿಟಿ ಮಾಲ್ ಬಳಿಯ ರಾಜಕಾಲುವೆ ಹೂಳೆತ್ತುವಿಕೆ, ಮಳೆ ಹಾನಿ ಸಮಸ್ಯೆ, ಅಸಮರ್ಪಕ ಕಸ ಸಂಗ್ರಹಣೆ ಮತ್ತು ವಿಲೇವಾರಿ, ಫುಟ್‌ಪಾತ್ ಸಮಸ್ಯೆ, ಎಚ್‌ಎಸ್‌ಆರ್ ಲೇಔಟ್‌ನ ಸರ್ವಿಸ್ ರಸ್ತೆಗಳ ಅತಿಕ್ರಮಣ ತೆರವು ಹಾಗೂ ಸ್ಕೈವಾಕ್ ಕೆಳಗೆ ಕೆಟ್ಟು ನಿಂತಿರುವ ಲಿಫ್ಟ್, ರೂಪೇನ ಅಗ್ರಹಾರದ ಬಸ್ ನಿಲ್ದಾಣದಲ್ಲಿ ಶೌಚಾಲಯ ನಿರ್ಮಾಣ, ಕೋಡಿ ಚಿಕ್ಕನಹಳ್ಳಿಯ ಕಸದ ಸಮಸ್ಯೆ ಹಾಗೂ ಕೋರಮಂಗಲದ ಪಿಜಿ, ಪಬ್, ಬಾರ್ ಸಮಸ್ಯೆಗಳಿಂದ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಪ್ರಸ್ತಾಪಿಸಿದರು.