ನಿದ್ರಾವಸ್ಥೆಯಲ್ಲಿ ಕನ್ನಡ ಸಾಹಿತ್ಯ ವಿಮರ್ಶಾ ಲೋಕ: ಡಾ. ಎಲ್. ಹಮನುಮಂತಯ್ಯ ಬೇಸರ

ಸಾಹಿತ್ಯ ಲೋಕದಲ್ಲಿ ಎಚ್.ಎಸ್. ಶಿವಪ್ರಕಾಶ್’ ಕುರಿತ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ
ಸಾಹಿತ್ಯ ಲೋಕದಲ್ಲಿ ಎಚ್.ಎಸ್. ಶಿವಪ್ರಕಾಶ್’ ಕುರಿತ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ
Published on

ಪ್ರಮುಖ ಮುಖ್ಯಾಂಶಗಳು

  • ಭಾಗವತರು ಸಾಂಸ್ಕೃತಿಕ ಸಂಘಟನೆ ಹಮ್ಮಿಕೊಂಡಿದ್ದ ‘ ಸಾಹಿತ್ಯ ಲೋಕದಲ್ಲಿ ಎಚ್.ಎಸ್. ಶಿವಪ್ರಕಾಶ್’ ಕುರಿತ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ
  • ಕುವೆಂಪು, ಅಡಿಗರ ಕಾವ್ಯಗಳಿಗೆ ಹೆಚ್ಚಿನ ವಿಮರ್ಶೆಗಳು ಬರುತ್ತಿದ್ದವು. ಇಂತಹ ವಿಮರ್ಶೆ ಈಗ ಅನಾಯಾಸ ಸ್ಥಿತಿ
  • ’ಭಾರತೀಪುರ’ ಕಾದಂಬರಿ ಸೇರಿ ಹಲವು ಕೃತಿಗಳಿಗೆ ಆ ಪುಸ್ತಕದಲ್ಲಿರುವ ಪುಟಗಳಿಗಿಂತಲೂ ಹೆಚ್ಚಿನ ವಿಮರ್ಶೆಗಳ ಬರುತ್ತಿದ್ದವು
ಬೆಂಗಳೂರು: ಒಂದು ಕಾಲದಲ್ಲಿ’ಉಚ್ಛ್ರಾಯ ಸ್ಥಿತಿ’ಯಲಿದ್ದ ಕನ್ನಡ ಸಾಹಿತ್ಯ ವಿಮರ್ಶಾ ಲೋಕವು ನಿದ್ರಾಸ್ಥಿತಿಯಲ್ಲಿದ್ದು, ಅದನ್ನು ಎಚ್ಚರಿಸುವ ಕೆಲಸ ಆಗಬೇಕಿದೆ ಎಂದು ಹಿರಿಯ ಸಾಹಿತಿ ಡಾ. ಎಲ್. ಹಮನುಮಂತಯ್ಯ ಹೇಳಿದರು.
ಭಾಗವತರು ಸಾಂಸ್ಕೃತಿಕ ಸಂಘಟನೆ ಭಾನುವಾರ ನಯನಾ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ‘ ಸಾಹಿತ್ಯ ಲೋಕದಲ್ಲಿ ಎಚ್.ಎಸ್. ಶಿವಪ್ರಕಾಶ್’ ಕುರಿತ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಈ ಹಿಂದೆ ಕನ್ನಡ ವಿಮರ್ಶೆ ಹರಿತವಾಗಿತ್ತು. ’ಭಾರತೀಪುರ’ ಕಾದಂಬರಿ ಸೇರಿ ಹಲವು ಕೃತಿಗಳಿಗೆ ಆ ಪುಸ್ತಕದಲ್ಲಿರುವ ಪುಟಗಳಿಗಿಂತಲೂ ಹೆಚ್ಚಿನ ವಿಮರ್ಶೆಗಳ ಬರುತ್ತಿದ್ದವು. ಕುವೆಂಪು, ಅಡಿಗರ ಕಾವ್ಯಗಳಿಗೆ ಹೆಚ್ಚಿನ ವಿಮರ್ಶೆಗಳು ಬರುತ್ತಿದ್ದವು. ಇಂತಹ ವಿಮರ್ಶೆ ಈಗ ಅನಾಯಾಸ ಸ್ಥಿತಿಯಲ್ಲಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಎಚ್.ಎಸ್. ಶಿವಪ್ರಕಾಶ್ ಭಿನ್ನ ರೀತಿಯ ಕಾವ್ಯರಚನೆ ಮಾಡಿದ್ದಾರೆ. ಜಿಎಸ್‌ಎಸ್ ಕೂಡ ಇವರ ಕಾವ್ಯವಾಚನ ಕೇಳಿ ದಿಗ್ಭ್ರಾಂತರಾಗಿದ್ದರು. ಭಕ್ತಪಂಥದ ಕವಿಯಾಗಿ ವಚನ ಸಾಹಿತ್ಯವನ್ನು ಬೇರೆ ಭಾಷೆಗಳಿಗೆ ಪರಿಚಯಿಸುವ ಕೆಲಸ ಮಾಡಿದ್ದಾರೆ. ವಚನ ಸಾಹಿತ್ಯದ ಅನುವಾದ ಕ್ಷೇತ್ರದಲ್ಲಿ ಇವರಷ್ಟು ಉತ್ತಮ ಕೆಲಸ ಮಾಡಿದ ಸಾಹಿತಿ ಬೇರೊಬ್ಬರಿಲ್ಲ ಎಂದು ಬಣ್ಣಿಸಿದರು.

ಕಳ್ಳ ಬೆರಳು ಚರಿತ್ರೆ ತಿರುಚಿದೆ

ಹಿರಿಯ ಸಾಹಿತಿ ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಮಾತನಾಡಿ, ಶಿವಪ್ರಕಾಶ್ ಕ್ರಿಯಾತ್ಮಕ ಕವಿಯಾಗಿದ್ದಾರೆ. ಬಸಣ್ಣನಿಂದ ಬೇರ್ಪಟ್ಟ ಬಿಜ್ಜಳನ ಮನಸ್ಥಿತಿಯಂತಹದ್ದು ಎಂಬುವುದನ್ನು ಕಾವ್ಯದಲ್ಲಿ ಕಟ್ಟಿಕೊಟ್ಟಿದ್ದಾರೆ. ಪಂಪನಿಂದ ಬೇರ್ಪಟ್ಟ ಅರಿಕೇಸರಿ, ಬಸವಣ್ಣನಿಂದ ಬೇರ್ಪಟ್ಟ ಅರಿಕೇಸರಿ ಸ್ನೇಹದ ಬಗ್ಗೆ ಕಳ್ಳ ಬೆರಳುಗಳ ಚರಿತ್ರೆಯನ್ನು ತಿರುಚಿವೆ. ಬಿಜ್ಜಳ ವಿಚಾರದಲ್ಲಿ ಕಳ್ಳ ಬೆರಳಿನಾಟ ಚರಿತ್ರೆಯನ್ನು ತಿರುಚಿದೆ. ಆದರೆ ಶಿವಪ್ರಕಾಶ್ ಅವರು ಬಿಜ್ಜಳನ ವ್ಯಕ್ತಿತ್ವ ಎಂಥದು ಎಂಬುವುದನ್ನು ತನ್ನ ಕಾವ್ಯಗಳಲ್ಲಿ ತೋರಿಸಿದ್ದಾರೆ. ಇವರ ಸಾಹಿತ್ಯ ಮುಖಾಮುಖಿಯಾಗ ಬೇಕಾಗಿದೆ ಎಂದು ತಿಳಿಸಿದರು.
ಭಾಗವತರು ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷ ಕೆ.ರೇವಣ್ಣ ಸೇರಿ ಮತ್ತಿತರರು ಉಪಸ್ಥಿತರಿದ್ದರು.
"

ಎಚ್.ಎಸ್. ಶಿವಪ್ರಕಾಶ್ ಅವರು ಕೆ.ವಿ. ಸುಬ್ಬಣ್ಣ ಮತ್ತು ಪ್ರಸನ್ನ ಅವರ ಮೂಲಕ ಪರಿಚಯವಾದರು. ಹಿಂದಿಯಲ್ಲಿ ವಚನ ಸಾಹಿತ್ಯದ ಕುರಿತು ಧಾರಾವಾಹಿ ನಿರ್ಮಿಸಲು ಸಿದ್ಧತೆ ಆಗಿತ್ತು. ಕನ್ನಡದ ಸ್ಕ್ರಿಪ್ಟ್ ಅನ್ನು ನಾನು ಹಿಂದಿಗೆ ಅನುವಾದಿಸುತ್ತಿದ್ದೆ. ವಚನ ಸಾಹಿತ್ಯವನ್ನು ನನಗೆ ಪರಿಚಯಿಸಿದ ಶ್ರೇಯಸ್ಸು ಶಿವಪ್ರಕಾಶ್ ಅವರಿಗೆ ಸಲ್ಲುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net