ಅಂಗವಿಕಲರಿಗೆ ಉದ್ಯೋಗ ಅವಕಾಶ: ರಾಜ್ಯಪಾಲ ಥಾವರ್ ಚಂದ್ ಗೆಹಲೋತ್/mitti cafe

ಕೆಫೆ ಉದ್ಘಾಟಿಸಿದ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್
ಕೆಫೆ ಉದ್ಘಾಟಿಸಿದ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್
Published on

ಬೆಂಗಳೂರು :ಅಂಗವಿಕಲರಿಗೆ ಉದ್ಯೋಗ ಹಾಗೂ ವೃತ್ತಿಪರ ಕೌಶಲ್ಯ ತರಬೇತಿಯ ಅವಕಾಶಗಳನ್ನು ಇನ್ನಷ್ಟು ಹೆಚ್ಚಿಸುವ ಉದ್ದೇಶದಿಂದ ಮಿಟ್ಟಿ 

ಕೆಫೆ

ಜಾಲವನ್ನು ದೇಶಾದ್ಯಂತ ವಿಸ್ತರಣೆಯಾಗಿದೆ. ಬೆಂಗಳೂರಿನ ಪ್ರತಿಷ್ಠಿತ 1 ಎಂಜಿ ಮಾಲ್ ನಲ್ಲಿ ನೂತನ ಕೆಫೆ ಶಾಖೆಯನ್ನು ಆರಂಭಿಸಿದ್ದು, ಈ ವಿನೂತನ ಕೆಫೆಯನ್ನು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಉದ್ಘಾಟಿಸಿದರು.

ಮಿಟ್ಟಿ ಕೆಫೆ  ಜಾಲ ವಿಸ್ತರಣೆಗೆ 10 ಕೋಟಿ ನೆರವು 
ಯೋಜನೆ ವಿಸ್ತರಣೆಗೆ ಡಿಬಿಎಸ್ ಬ್ಯಾಂಕ್ ಇಂಡಿಯಾ ಬರೋಬ್ಬರಿ 10 ಕೋಟಿ ರೂ. ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದೆ. ಈ ಯೋಜನೆಯಡಿ ದೇಶದ ವಿವಿಧ ಭಾಗಗಳಲ್ಲಿ ಒಟ್ಟು ಒಂಬತ್ತು ನೂತನ ಕೆಫೆಗಳನ್ನು ಸ್ಥಾಪಿಸಲಾಗುವುದು. ಇದರಿಂದಾಗಿ 100ಕ್ಕೂ ಹೆಚ್ಚು ವಿಶೇಷಚೇತನರಿಗೆ ನೇರ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಇದರ ಜೊತೆಗೆ ಸುಮಾರು 470 ಅಭ್ಯರ್ಥಿಗಳಿಗೆ ವೃತ್ತಿಪರ ತರಬೇತಿ ನೀಡಲಾಗುವುದು ಹಾಗೂ ಸುಮಾರು 300 ಅರ್ಹ ವ್ಯಕ್ತಿಗಳು ಹೊಸ ಉದ್ಯೋಗಾವಕಾಶಗಳನ್ನು ಪಡೆದುಕೊಳ್ಳಲು ಅಗತ್ಯವಿರುವ ಸಂಪೂರ್ಣ ಮಾರ್ಗದರ್ಶನ ಮತ್ತು ಬೆಂಬಲ ಸಿಗಲಿದೆ.
ಕೆಫೆ ಉದ್ಘಾಟಿಸಿ ಮಾತನಾಡಿದ ರಾಜ್ಯಪಾಲರು, ಸಮಾಜದಲ್ಲಿ ವಿಶೇಷಚೇತನರು ಸ್ವಾವಲಂಬನೆ, ಘನತೆ ಮತ್ತು ಆರ್ಥಿಕ ಸಬಲೀಕರಣವನ್ನು ಸಾಧಿಸಲು ಪೂರಕವಾದ ಸುವರ್ಣಾವಕಾಶಗಳನ್ನು ನಿರ್ಮಿಸಿಕೊಡುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದರು. ಮಿಟ್ಟಿ ಕೆಫೆ ಮತ್ತು ಅದರ ಎಲ್ಲಾ ಸಹಭಾಗಿ ಸಂಸ್ಥೆಗಳನ್ನು ರಾಜ್ಯಪಾಲರು ಇದೇ ಸಂದರ್ಭದಲ್ಲಿ ಮುಕ್ತಕಂಠದಿಂದ ಶ್ಲಾ ಸಿದರು.
ಡಿಬಿಎಸ್ ಬ್ಯಾಂಕ್ ಇಂಡಿಯಾದ ಗ್ರೂಪ್ ಮಾರ್ಕೆಟಿಂಗ್ ಮತ್ತು ಕಮ್ಯುನಿಕೇಷನ್ಸ್ ವಿಭಾಗದ ಮುಖ್ಯಸ್ಥ ಗೌರವ್ ರಜಪೂತ್ ಮಾತನಾಡಿ, ಮಿಟ್ಟಿ ಕೆಫೆ ಜೊತೆಗಿನ ನಮ್ಮ ಈ ಪಾಲುದಾರಿಕೆಯು ಸಮಾಜದ ಅಗತ್ಯತೆಗಳನ್ನು ಗುರುತಿಸಿ ಶ್ರಮಿಸುವ ಧ್ಯೇಯೋದ್ದೇಶಿತ ಸಂಸ್ಥೆಗಳನ್ನು ಬೆಂಬಲಿಸಲಿದೆ. ವಿಶೇಷಚೇತನರಿಗೆ ಸುಸ್ಥಿರ ಜೀವನೋಪಾಯದ ದಾರಿಗಳನ್ನು ಸುಲಭಗೊಳಿಸುವ ಮೂಲಕ, ಸಮಾಜದಲ್ಲಿ ಅವರ ವ್ಯಾಪಕ ಆರ್ಥಿಕ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸಲಾಗುತ್ತದೆ ಎಂದು ಹೇಳಿದರು. ಮಿಟ್ಟಿ ಕೆಫೆಯ ಸಂಸ್ಥಾಪಕಿ ಮತ್ತು ಸಿಇಒ ಅಲೀನಾ ಆಲಂ ಸೇರಿ ಇನ್ನಿತರರು ಇದ್ದರು.   
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net