ವಾಟ್ಸಾಪ್‌ನಲ್ಲಿ ವಿಡಿಯೋ ಕಾಲ್ ಮಾಡಿ ಅಸಭ್ಯವಾಗಿ ವರ್ತಿಸಿದ ಕಾಮುಕ; ಪೊಲೀಸರಿಗೆ ದೂರು ಕೊಟ್ಟ ಅಕೌಂಟೆಂಟ್..Bengaluru

Bengaluru accountant receives obscene video calls from unknown man
Bengaluru accountant receives obscene video calls from unknown man
Published on

ಪ್ರಮುಖ ಮುಖ್ಯಾಂಶಗಳು

  • ಮಹಿಳಾ ಅಕೌಂಟೆಂಟ್ ಒಬ್ಬರಿಗೆ ವಾಟ್ಸಾಪ್ ಮೂಲಕ ಆನ್‌ಲೈನ್ ಲೈಂಗಿಕ ಕಿರುಕುಳ.
  • ಅಶ್ಲೀಲ ವೀಡಿಯೊ ಕಾಲ್ ಮಾಡಿದ ವಿಕೃತಕಾಮಿ. ತಮಿಳುನಾಡು ಮೂಲದ ಯುವಕ ಬಂಧನ
  • ಜುಲೈ 14 ರಂದು 18 ವರ್ಷದ ಯುವತಿಗೂ ನಕಲಿ ಪಾರ್ಸೆಲ್ ಡೆಲಿವರಿ ನೆಪದಲ್ಲಿ ಇದೇ ರೀತಿಯ ಅಶ್ಲೀಲ ಕಿರುಕುಳ
Bengaluru accountant receives obscene video calls from unknown man: ವಾಟ್ಸಾಪ್​ನಲ್ಲಿ ಬರುವ ಮೆಸೇಜ್​ಗಳನ್ನು ಓಪನ್ ಮಾಡುವ ಮುನ್ನ..ಅಥವಾ ಅಪರಿಚಿತರ ಕಾಲ್​ ಅಟೆಂಡ್​ ಮಾಡುವ ಮುನ್ನ ಎಚ್ಚರಿಕೆವಹಿಸಿ. ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಮಾಧ್ಯಮವು ಒಂದಷ್ಟು ಒಳ್ಳೆ ಕಾರ್ಯಕ್ಕೆ ಕಾರಣವಾದರೆ, ಇನ್ನೂ ಕೆಲವರು ದುರುಪಯೋಗ ಪಡಿಸಿಕೊಂಡು ಇತರರಿಗೆ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆಯಂತೆ, ಬೆಂಗಳೂರಿನ ಮಹಿಳಾ ಅಕೌಂಟೆಂಟ್ ಒಬ್ಬರಿಗೆ ಹಾಯ್ ಮೆಸೇಜ್​ ಮಾಡಿದ ಅಪರಿಚಿತರೊಬ್ಬರು, ನಂತರ ವಿಡಿಯೋ ಕಾಲ್​ ಮಾಡಿ ಖಾಸಗಿ ಅಂಗಾಂಗ ಪ್ರದರ್ಶಿಸಿದ ಘಟನೆ ಬೆಳಕಿಗೆ ಬಂದಿದೆ.

ಹಾಯ್​ ಎಂದು ಮೆಸೇಜ್

ಕನ್ಸಲ್ಟೆನ್ಸಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅಕೌಂಟೆಂಟ್​​ ಶಾಲಿನಿ (ಹೆಸರು ಬದಲಾಯಿಸಲಾಗಿದೆ) ಗೆ ಹಾಯ್​ ಎನ್ನುವ ಸಂದೇಶ ಬಂದಿತ್ತು. ಅದಾದ ನಂತರ ಅಪರಿಚಿತ ವ್ಯಕ್ತಿಯೊಬ್ಬ ಪದೇ ಪದೇ ವೀಡಿಯೊ ಕರೆ ಮಾಡಿ ಅಸಭ್ಯವಾಗಿ ವರ್ತಿಸಿರುವ ಕುರಿತು ದೂರು ದಾಖಲಾಗಿದೆ.
ಜುಲೈ 29 ರಂದು ಶಾಲಿನಿ (ಹೆಸರು ಬದಲಾಯಿಸಲಾಗಿದೆ) ರಾತ್ರಿ ಅಂದಾಜು 1.49 ರ ಸುಮಾರಿಗೆ ಅವರು ಮನೆಯಲ್ಲಿ ನಿದ್ರಿಸುತ್ತಿದ್ದಾಗ, 9363284006 ಮೊಬೈಲ್ ಸಂಖ್ಯೆಯಿಂದ ವಾಟ್ಸಾಪ್‌ನಲ್ಲಿ 'ಹಾಯ್' ಎಂದು ಸಂದೇಶ ಬಂದಿತ್ತು. ಅಪರಿಚಿತ ಸಂಖ್ಯೆಯಿಂದ ಬಂದಿದ್ದರಿಂದ ಅಷ್ಟಾಗಿ ಗಮನ ಕೊಡಲಿಲ್ಲ.

ವಿಡಿಯೋ ಕಾಲ್ ಮಾಡಿ ಅಸಭ್ಯ ವರ್ತನೆ

ನಿರ್ಲಕ್ಷಿಸಿದರೂ ಬಿಡದ ಕಾಮುಕ, ಎರಡು ದಿನಗಳ ಕಾಲ ಅವರು ಕೆಲಸದಲ್ಲಿರುವಾಗ ಅದೇ ಸಂಖ್ಯೆಯಿಂದ ಸತತವಾಗಿ ವೀಡಿಯೊ ಕರೆಗಳು ಬಂದಿವೆ. ಕಾಟ ತಡೆಯಲಾರದೆ ಕರೆ ಸ್ವೀಕರಿಸಿದ ಅವರಿಗೆ ಶಾಕ್​ ಕಾದಿತ್ತು. ಅಪರಿಚಿತ ವ್ಯಕ್ತಿ ತನ್ನ ಖಾಸಗಿ ಅಂಗಗಳನ್ನು ಪ್ರದರ್ಶಿಸಿ, ಕ್ಯಾಮೆರಾ ಮುಂದೆ ಅಶ್ಲೀಲ ಕೃತ್ಯಗಳನ್ನು ಎಸಗಿದ್ದಾನೆ ಎಂದು ಶಾಲಿನಿ ಪೊಲೀಸರಿಗೆ ತಿಳಿಸಿದ್ದಾರೆ.
ಇದೇ ರೀತಿಯ ಮತ್ತೊಂದು ಘಟನೆ ಜುಲೈ 14 ರಂದು ವರದಿಯಾಗಿತ್ತು. 18 ವರ್ಷದ ಯುವತಿಯೊಬ್ಬಳಿಗೆ ಅಪರಿಚಿತ ವ್ಯಕ್ತಿಯೊಬ್ಬ ನಕಲಿ ಪಾರ್ಸೆಲ್ ಡೆಲಿವರಿ ಕಥೆ ಬಳಸಿ ವಾಟ್ಸಾಪ್ ವೀಡಿಯೊ ಕರೆ ಸ್ವೀಕರಿಸುವಂತೆ ನಂಬಿಸಿದ್ದನು. ಬಳಿಕ ಆಕೆಗೆ ಅಶ್ಲೀಲ ಫೋಟೋ ಹಾಗೂ ನಿಂದನಾತ್ಮಕ ಧ್ವನಿ ಸಂದೇಶಗಳನ್ನು ಕಳುಹಿಸಿ ಆನ್‌ಲೈನ್ ಲೈಂಗಿಕ ಕಿರುಕುಳ ನೀಡಿದ್ದನು ಎನ್ನುವ ದೂರು ದಾಖಲಾಗಿದೆ.

ಆರೋಪಿ ಅರೆಸ್ಟ್

ತ್ಯಾಗರಾಜನಗರ ನಿವಾಸಿ 34 ವರ್ಷದ ಮಹಿಳೆ ನೀಡಿದ ದೂರಿನ ಮೇರೆಗೆ ತಮಿಳುನಾಡು ಮೂಲದ ಯುವಕನನ್ನು ಬಂಧಿಸಲಾಗಿದೆ. ಈ ಸಂಬಂಧ ಬಸವನಗುಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತ್ಯಾಗರಾಜನಗರದಲ್ಲಿ ಕುಟುಂಬ ಸಮೇತ ವಾಸವಾಗಿರುವ ಸಂತ್ರಸ್ತೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿರುತ್ತಾರೆ. ಈ ಮಧ್ಯೆ ಜುಲೈ 29ರಂದು ಆರೋಪಿ ಸಂತ್ರಸ್ತೆಗೆ ಸಂದೇಶ ಕಳುಹಿಸಿದ್ದಾನೆ. ಮರು ದಿನ ಮಧ್ಯಾಹ್ನ 1 ಗಂಟೆ ಸುಮಾರಿಗೆ ಏಕಾಏಕಿ ವಿಡಿಯೋ ಕರೆ ಮಾಡಿ ತನ್ನ ಖಾಸಗಿ ಅಂಗವನ್ನು ತೋರಿಸಿ ಅಶ್ಲೀಲವಾಗಿ ಮಾತನಾಡಿದ್ದಾನೆ. ಅದರಿಂದ ಗಾಬರಿಗೊಂಡ ಮಹಿಳೆ ಕೂಡಲೇ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆ ಕಾರ್ಯಾಚರಣೆ ನಡೆಸಿ ಆರೋಪಿಗೆ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net