ಹಾವೇರಿ; ಜಿಲ್ಲಾಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ; ನವಜಾತ ಶಿಶು ಬಲಿ

New Born Baby Death
New Born Baby Death
Published on

ಪ್ರಮುಖ ಮುಖ್ಯಾಂಶಗಳು

  • ಹಾವೇರಿ ಜಿಲ್ಲಾಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ
  • ನವಜಾತ ಶಿಶು ಬಲಿಯಾದ ಧಾರುಣ ಘಟನೆ
  • ಹೆರಿಗೆ ನೋವು ತಾಳಲಾರದೇ ಆಸ್ಪತ್ರೆಗೆ ಬಂದ ರೂಪಾ ಗಿರೀಶ ಕರಬಣ್ಣನವರ
  • ಒಂದು ತಾಸು ನೆಲದ ಮೇಲೆ ಕೂರಿಸಿ ನಿರ್ಲಕ್ಷ್ಯ
ಹಾವೇರಿ: ಇಲ್ಲಿನ ಜಿಲ್ಲಾಸ್ಪತ್ರೆಯ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ನವಜಾತ ಶಿಶು ಬಲಿಯಾದ ಧಾರುಣ ಘಟನೆ ನಡೆದಿದೆ. ‌
ಹೆರಿಗೆ ನೋವು ತಾಳಲಾರದೇ ಆಸ್ಪತ್ರೆಗೆ ಬಂದ ರೂಪಾ ಗಿರೀಶ ಕರಬಣ್ಣನವರ ( 30) ಎಂಬ ಮಹಿಳೆಯನ್ನು ಒಂದು ತಾಸು ನೆಲದ ಮೇಲೆ ಕೂರಿಸಿ ನಿರ್ಲಕ್ಷ್ಯ ತೋರಿದ್ದಾರೆ. ಇದರಿಂದಾಗಿ ಗರ್ಭಿಣಿಗೆ ಆಸ್ಪತ್ರೆಯಲ್ಲಿ ಶೌಚಗೃಹಕ್ಕೆ ಹೋಗುವ ಮಾರ್ಗದಲ್ಲೇ ಹೆರಿಗೆಯಾಗಿದೆ.
ಜಿಲ್ಲಾಸ್ಪತ್ರೆಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಡೆದ ಘಟನೆ. ನವಜಾತ ಶಿಶು ಸಾವಿಗೆ ಆಸ್ಪತ್ರೆ ವೈದ್ಯರು, ನರ್ಸ್ ಗಳೇ ಕಾರಣ ಎಂದು ಪಾಲಕರು ಆರೋಪಿಸಿದ್ದಾರೆ.
ರೂಪಾಳನ್ನು ಬೆಳಗ್ಗೆ 9 ಗಂಟೆಗೆ ಆಸ್ಪತ್ರೆಗೆ ಕರೆ ತರಲಾಗಿತ್ತು. ರಾಣೆಬೆನ್ನೂರು ತಾಲೂಕು ಕಾಕೋಳ ಗ್ರಾಮದ ಮಹಿಳೆ ಹೆರಿಗೆ ನೋವಿನಿಂದ ಒದ್ದಾಡುತ್ತಿದ್ದರು. ಬೆಡ್ ಕೊಡದೇ ನೆಲದ ಮೇಲೆ ಕೂರಿಸಿದ್ದರು. ಶೌಚಗೃಹಕ್ಕೆ ತೆರಳುವಾಗ ರೂಪಾಗೆ ಹೆರಿಗೆ ಆಗಿದೆ. ಈ ವೇಳೆ ಮಗುವಿಗೆ ಪೆಟ್ಟಾಗಿ ಮಗು ಮೃತಪಟ್ಟಿದೆ.
ಸೂಕ್ತ ಚಿಕಿತ್ಸೆ ಕೊಡದೇ ವೈದ್ಯರು, ನರ್ಸ್ ಗಳು ನಿರ್ಲಕ್ಷ್ಯ ವಹಿಸಿದರು. ಮೊಬೈಲ್ ನಲ್ಲಿ ಮಾತಾಡುವುದರಲ್ಲಿ ಬಿಸಿಯಾಗಿದ್ದರು.
ನಮಗಾದ ಪರಿಸ್ಥಿತಿ ಯಾರಿಗೂ ಬರಬಾರದು ಎಂದು ಸಂಬಂಧಿಕರ ಆಕ್ರೋಶ ವ್ಯಕ್ತಪಡಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net