ಮೊದಲ ಪ್ಯಾಕೇಜ್ ಅನುಷ್ಠಾನಕ್ಕೆ 3,348.05 ಕೋಟಿ ರೂ. ವೆಚ್ಚಕ್ಕೆ ಬಿಡ್ ಆಹ್ವಾನಿಸಲಾಗಿತ್ತು. ಬಿಡ್‌ನಲ್ಲಿ 3 ಕಂಪನಿಗಳು ಪಾಲ್ಗೊಂಡಿದ್ದು, ಕಡಿಮೆ ಬಿಡ್ ದಾಖಲಿಸಿದ್ದ ಎಸ್‌ಎನ್‌ಸಿಗೆ ಕಾಮಗಾರಿ ವಹಿಸಲಾಗಿದೆ. ಬಿಡ್ ಮೊತ್ತಕ್ಕಿಂತ ಶೇ.4.9ರಷ್ಟು ಹೆಚ್ಚುವರಿ ಮೊತ್ತ (3,500 ಕೋಟಿ ರೂ.) ನಮೂದಿಸಿದ್ದರೂ, ತಾಂತ್ರಿಕ ಹಾಗೂ ಹಣಕಾಸು ಬಿಡ್ ಪರಾಮರ್ಶೆ ವೇಳೆ ಎಸ್‌ಎನ್‌ಸಿ ಕಾಮಗಾರಿಯನ್ನು ತನ್ನದಾಗಿಸಿಕೊಳ್ಳುವಲ್ಲಿ ಸಫಲವಾಗಿದೆ. ಮೊದಲ ಹಂತದ ಕಾಮಗಾರಿಗೆ ಡಿಪಿಆರ್ ಸಿದ್ಧಗೊಂಡಿದ್ದು, ಅಧಿಕೃತವಾಗಿ ಒಪ್ಪಿಗೆ ಪತ್ರವನ್ನು ಕಂಪನಿಗೆ ನೀಡಲಾಗಿದೆ. ಹತ್ತು ವರ್ಷದ ಕಾರ್ಯಾಚರಣೆ ಹಾಗೂ ನಿರ್ವಹಣೆ ಸೇರಿ ವಿನ್ಯಾಸ, ನಿರ್ಮಾಣ, ನಿರ್ವಹಣೆ, ಹಸ್ತಾಂತರ (ಡಿಬಿಒಟಿ) ಮಾದರಿಯಲ್ಲಿ ಪ್ರಾಜೆಕ್ಟ್‌ಅನ್ನು 3 ವರ್ಷದಲ್ಲಿ ಜಾರಿ ಮಾಡುವಂತೆ ಗಡುವು ನೀಡಲಾಗಿದೆ.