ಗೋಯಿಂಗ್ ಟು ಸ್ಕೂಲ್ ಸಂಸ್ಥೆಯ ಸಿಇಓ ಲಿಸಾ ಹೈಡ್ಲಾಫ್ ಈ ಕುರಿತು ಮಾತನಾಡಿ, "ಮ್ಯಾಚ್ ಡೇ ಯಾವಾಗಲೂ ಅದ್ಭುತ ದಿನ. ನಾವೆಲ್ಲರೂ ಹೊರಗಡೆ, ಆಫ್ ಲೈನ್ ನಲ್ಲಿ ಒಟ್ಟಾಗಿ ಸೇರಲು, ನಮ್ಮ ಮತ್ತು ಯುವಜನರ ಭವಿಷ್ಯಕ್ಕೆ ಅಗತ್ಯವಿರುವ ಕೌಶಲ್ಯಗಳ ಬಗ್ಗೆ ಮಾತನಾಡಲು, ಆಟವಾಡಲು, ಕಲಿಯಲು, ಮನಸಾರೆ ನಗಲು ಮತ್ತು ನಗುಮೊಗದಿಂದ ಇರುವ ಒಂದು ಸೊಗಸಾದ ಅವಕಾಶವಿದು. ಜೀವನ ಕೌಶಲ್ಯ, ಡಿಜಿಟಲ್ ಕೌಶಲ್ಯ, ಫುಟ್‌ಬಾಲ್, ತಂತ್ರಜ್ಞಾನ, ಎಐ, ಹವಾಮಾನ ಬದಲಾವಣೆ, ಶಿಕ್ಷಣ - ಇವೆಲ್ಲವೂ ಒಟ್ಟಾಗಿ ಬಂದಾಗ ನಾವು ಹೇಗೆ ಒಟ್ಟಾಗಿ ಕೆಲಸ ಮಾಡಬಹುದು ಎಂಬುದನ್ನು ಕಂಡುಕೊಳ್ಳಲು ಮ್ಯಾಚ್ ಡೇ ನಮಗೆ ದಾರಿ ಮಾಡಿಕೊಡುತ್ತದೆ. ಹೆಣ್ಣುಮಕ್ಕಳು ಶಾಲಾ ಶಿಕ್ಷಣ ಮುಗಿಸಿ, ನಗರವನ್ನೇ ಬದಲಿಸಬಲ್ಲ ಉದ್ಯಮಿಗಳಾಗುವಂತೆ ಪ್ರೇರೇಪಿಸುವುದು ನಮ್ಮ ಗುರಿಯಾಗಿದೆ. ಕರ್ನಾಟಕ ಸರ್ಕಾರ, ಒರಾಕಲ್, ಬಿಟಿ ಗ್ರೂಪ್, ಬ್ರಿಟಿಷ್ ಏಷ್ಯನ್ ಟ್ರಸ್ಟ್ ಮತ್ತು ಬೆಂಗಳೂರು ಎಫ್‌ಸಿ ಜೊತೆ ಕೈಜೋಡಿಸಿರುವುದು ನಮಗೆ ತುಂಬಾ ಸಂತೋಷ ತಂದಿದೆ. ನಿಮ್ಮ ಅಚಲ ಬೆಂಬಲವಿಲ್ಲದೆ ಇದನ್ನು ಮಾಡಲು ಸಾಧ್ಯವಿರಲಿಲ್ಲ, ಈ ದಿನ ನಮ್ಮೊಂದಿಗೆ ಆಟವಾಡಲು ಬಂದಿದ್ದಕ್ಕಾಗಿ ಧನ್ಯವಾದಗಳು" ಎಂದು ಹೇಳಿದರು.