ಪಂಚ ಪಾಲಿಕೆಗಳಲ್ಲಿ ಒಟ್ಟು 369 ವಾರ್ಡ್‌ಗಳಿವೆ. ಉತ್ತರ - 72, ದಕ್ಷಿಣ - 72, ಪೂರ್ವ -50, ಪಶ್ಚಿಮ - 112 ಹಾಗೂ ಕೇಂದ್ರ ಪಾಲಿಕೆಯಲ್ಲಿ 63 ವಾರ್ಡ್‌ಗಳಿವೆ. ಈ ಐದೂ ಕಾರ್ಪೋರೇಷನ್‌ಗಳಲ್ಲಿ ಇಪ್ಪತ್ತು ಸಾವಿರದೊಳಗೆ ಮತದಾರರನ್ನು ಹೊಂದಿರುವ 85 ವಾರ್ಡ್‌ಗಳಿವೆ. 20-30 ಸಾವಿರದೊಳಗೆ 235 ವಾರ್ಡ್, 30-40 ಸಾವಿರದೊಳಗೆ 39 ವಾರ್ಡ್ ಹಾಗೂ 40 ಸಾವಿರ ಮೇಲ್ಪಟ್ಟ ಮತದಾರರುಳ್ಳ 14 ವಾರ್ಡ್‌ಗಳಿವೆ. ಈ ಪೈಕಿ ಪಶ್ಚಿಮ ಪಾಲಿಕೆ ವ್ಯಾಪ್ತಿಯಲ್ಲಿ 30 ವಾರ್ಡ್‌ಗಳು ಇಪ್ಪತ್ತು ಸಾವಿರದೊಳಗಿನ ಮತದಾರರನ್ನು ಹೊಂದಿದ್ದು, ಪೂರ್ವ ಪಾಲಿಕೆಯಲ್ಲೂ ಇಂತಹ 23 ವಾರ್ಡ್‌ಗಳು ಇವೆ.