ಈತನಿಗೆ ಟೀ, ಕಾಫಿ ಪುಕ್ಸಟ್ಟೆ ಕೊಡ್ಬೇಕಂತೆ...ಕಾಸು ಕೇಳಿದ್ದಕ್ಕೆ ರೌಡಿ ನಾನು ನನ್ನ ಹತ್ರವೇ ದುಡ್ಡು ಕೇಳ್ತೀಯ ಎಂದು ದಾಂಧಲೆ! Goons Threaten

Goons Threaten
ಪೀಣ್ಯದಲ್ಲಿ ಪುಂಡರಿಂದ ಅಟ್ಟಹಾಸ
Published on: 

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪುಂಡ-ಪೋಕರಿಗಳ ಪುಂಡಾಟ ದಿನದಿಂದ ದಿನಕ್ಕೆ ಮಿತಿಮೀರುತ್ತಿದ್ದು, ಸಾರ್ವಜನಿಕರು ಹಾಗೂ ಸಣ್ಣಪುಟ್ಟ ವ್ಯಾಪಾರಿಗಳು ನೆಮ್ಮದಿಯಿಂದ ಜೀವನ ನಡೆಸುವುದೇ ಕಷ್ಟಕರವಾಗಿದೆ. "ನಾನು ಜೈಲಿಗೆ ಹೋಗಿ ಬಂದ ರೌಡಿ, ನನ್ನ ಬಳಿಯೇ ದುಡ್ಡು ಕೇಳ್ತಿಯಾ?" ಎಂದು ಆರ್ಭಟಿಸುತ್ತಾ, ಉಚಿತವಾಗಿ ಟೀ-ಕಾಫಿ ನೀಡುವಂತೆ ಬೆದರಿಸಿ ಬೇಕರಿ ಸಿಬ್ಬಂದಿ ಹಾಗೂ ಮಹಿಳಾ ಮಾಲೀಕರ ಮೇಲೆ ದೌರ್ಜನ್ಯ ಎಸಗಿರುವ ಘಟನೆ ರಾಜಧಾನಿಯ ಪೀಣ್ಯದಲ್ಲಿ ನಡೆದಿದೆ. ರೌಡಿಸಂ ( Goons Threaten ) ಪ್ರದರ್ಶಿಸಿ ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸಿರುವ ಈ ಪುಂಡರ ವಿರುದ್ಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರ ಣ ದಾಖಲಾಗಿದ್ದು, ಪೊಲೀಸರು ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.

ಘಟನೆಯ ವಿವರಕ್ಕೆ ಬರುವುದಾದರೆ, ಪೀಣ್ಯದ ಎಚ್‌ಎಂಟಿ (HMT) ಲೇಔಟ್‌ನಲ್ಲಿರುವ ‘ರಥನ್ ಬೇಕರಿ’ಯಲ್ಲಿ ನಿನ್ನೆ ರಾತ್ರಿ ಈ ಆಘಾತಕಾರಿ ಘಟನೆ ಸಂಭವಿಸಿದೆ. ಬೇಕರಿಗೆ ಆಗಮಿಸಿದ ಮಹೇಶ್ ಹಾಗೂ ರಜತ್ ಎಂಬಿಬ್ಬರು ಪುಂಡರು, ಅಲ್ಲಿ ಟೀ ಮತ್ತು ಕಾಫಿ ಕುಡಿದಿದ್ದಾರೆ. ಬಳಿಕ ಬೇಕರಿ ಸಿಬ್ಬಂದಿ ಬಿಲ್ ಪಾವತಿಸುವಂತೆ ಕೇಳಿದಾಗ, ಒಮ್ಮೆಲೇ ಕೆರಳಿದ ಈ ಪುಂಡರು ಅಸಭ್ಯ ಶಬ್ದಗಳಿಂದ ನಿಂದಿಸಲು ಪ್ರಾರಂಭಿಸಿದ್ದಾರೆ. "ನಾನು ಜೈಲಿಗೆ ಹೋಗಿ ಬಂದವನು ಗೊತ್ತಾ? ದೊಡ್ಡ ರೌಡಿ ನಾನು, ನನ್ನ ಹತ್ತಿರವೇ ದುಡ್ಡು ಕೇಳ್ತಿಯಾ?" ಎಂದು ಅಹಂಕಾರದ ಮಾತುಗಳನ್ನಾಡುತ್ತಾ ಅಂಗಡಿಯಲ್ಲಿದ್ದವರ ಮೇಲೆ ಅಟ್ಯಾಕ್ ಮಾಡಲು ಮುಂದಾಗಿದ್ದಾರೆ.

Also Read
'ಕೈ ಕಾಲು ನಡಗ್ತಿದೆ'..; ನಮ್ಮ ಮೆಟ್ರೋದಲ್ಲಿ ರಹಸ್ಯವಾಗಿ ವಿಡಿಯೋ ರೆಕಾರ್ಡ್ ಮಾಡಿದ ವ್ಯಕ್ತಿ ಬಗ್ಗೆ ಯುವತಿ ಹೇಳಿದ್ದಿಷ್ಟು..Bengaluru
Goons Threaten

ಇಷ್ಟಕ್ಕೇ ಸಮಾಧಾನಗೊಳ್ಳದ ಈ ಪುಂಡರು ಬೇಕರಿ ಆವರಣದಲ್ಲಿದ್ದ ಗಾಜಿನ ಬಾಟಲಿಗಳನ್ನು ಎತ್ತಿ ನೆಲಕ್ಕೆ ಅಪ್ಪಳಿಸಿ ಪುಡಿಪುಡಿ ಮಾಡಿ ಸೃಷ್ಟಿಸಿದ ಆತಂಕ ಸಣ್ಣದಾಗಿರಲಿಲ್ಲ. ಅಷ್ಟೇ ಅಲ್ಲದೆ, "ಇನ್ಮುಂದೆ ನಾನು ಮಾತ್ರವಲ್ಲ, ನಮ್ಮ ಹುಡುಗರು ಬಂದರೂ ಸರಿ, ಯಾರ ಹತ್ತಿರವೂ ದುಡ್ಡು ಕೇಳುವಂತಿಲ್ಲ! ಎಲ್ಲರಿಗೂ ಫ್ರೀಯಾಗಿ ಟೀ, ಕಾಫಿ ಕೊಡಬೇಕು" ಎಂದು ದಬ್ಬಾಳಿಕೆ ನಡೆಸಿದ್ದಾರೆ.

ಈ ವೇಳೆ ಗಲಾಟೆ ತಡೆಯಲು ಬಂದ ಬೇಕರಿಯ ಮಹಿಳಾ ಮಾಲೀಕರಿಗೆ ಅತ್ಯಂತ ಕೆಟ್ಟ ಭಾಷೆಯಲ್ಲಿ ನಿಂದಿಸಿ, "ನೀನೇನು ಸೀಮೆಗೇ ಇಲ್ಲದವಳಾ? ನಿನ್ನನ್ನು ಚುಚ್ಚಿ ಸಾಯಿಸಿಬಿಡ್ತೀನಿ, ನಿನ್ನ ಇಡೀ ಕುಟುಂಬವನ್ನೇ ಮುಗಿಸಿಹಾಕ್ತೀನಿ" ಎಂದು ಬಹಿರಂಗವಾಗಿ ಜೀವ ಬೆದರಿಕೆ ಒಡ್ಡಿದ್ದಾರೆ.

ರಾತ್ರಿ ವೇಳೆ ನಡೆದ ಈ ಗೂಂಡಾಗಿರಿಯಿಂದ ಬೇಕರಿ ಸಿಬ್ಬಂದಿ ಹಾಗೂ ಸ್ಥಳೀಯರು ತೀವ್ರ ಭೀತಿಗೊಳಗಾಗಿದ್ದಾರೆ. ಘಟನೆ ನಡೆದ ತಕ್ಷಣವೇ ಸಂತ್ರಸ್ತ ಮಹಿಳಾ ಮಾಲೀಕರು ಪೀಣ್ಯ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೀಣ್ಯ ಠಾಣೆಯ ಪೊಲೀಸರು, ಮಹಿಳೆಯ ಮೇಲೆ ದೌರ್ಜನ್ಯ, ಜೀವ ಬೆದರಿಕೆ ಹಾಗೂ ಸಾರ್ವಜನಿಕ ಸ್ಥಳದಲ್ಲಿ ಗಲಾಟೆ ಎಸಗಿದ ಆರೋಪದಡಿ ಪುಂಡರಾದ ಮಹೇಶ್ ಮತ್ತು ರಜತ್ ವಿರುದ್ಧ ಎಫ್‌ಐಆರ್ (FIR) ದಾಖಲಿಸಿಕೊಂಡಿದ್ದಾರೆ.

Also Read
ವಿಧಾನ ಪರಿಷತ್​​ ಕ್ಲೀನ್‌ಸ್ವೀಪ್: 130 ಸ್ಥಾನಗಳನ್ನು ಗೆದ್ದು ಎನ್​ಡಿಎ ಅಧಿಕಾರಕ್ಕೆ ಬರಲಿದೆ ಎಂದ ವಿಜಯೇಂದ್ರ!...ಯತ್ನಾಳ್​ ಘರ್​ವಾಪ್ಸಿ ಬಗ್ಗೆ ನಗುತ್ತಲೇ ಹೇಳಿದ್ದೇನು...?
Goons Threaten

ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದು, ಇಂತಹ ರೌಡಿ ಪ್ರವೃತ್ತಿಯ ಪುಂಡರಿಗೆ ತಕ್ಕ ಶಾಸ್ತಿ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net