

ವೈಟ್ಫೀಲ್ಡ್ ಮೆಟ್ರೋ ರೈಲಿನಲ್ಲಿ ರಹಸ್ಯವಾಗಿ ಯುವತಿ ವಿಡಿಯೋ ರೆಕಾರ್ಡ್ ಮಾಡಿದ ವ್ಯಕ್ತಿ.
ಸೋಶಿಯಲ್ ಮೀಡಿಯಾದಲ್ಲಿ ಕಹಿ ಘಟನೆ ಹಂಚಿಕೊಂಡು, ಫ್ಯಾಮಿಲಿಗೆ ಸಮಸ್ಯೆ ಮಾಡಬಹುದು ಎಂದು ಡಿಲೀಟ್ ಮಾಡಿದ ಸೌಪಿಕಾ.
ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟ ಯುವತಿ..ನೆಟ್ಟಿಗರಿಂದ ಯುವತಿ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತ.
ಬೆಂಗಳೂರು: 'ಹೇಗಾಗ್ತಿದೆ ಎಂದರೆ ಭಯದಿಂದ ನನ್ನ ಕೈಗಳೇ ನಡುಗುತ್ತಿವೆ. ಇಂದು ಬೆಂಗಳೂರಿನಲ್ಲಿ ಒಬ್ಬ ವ್ಯಕ್ತಿ ರಹಸ್ಯವಾಗಿ ನನ್ನ ವಿಡಿಯೋ ರೆಕಾರ್ಡ್ ಮಾಡುತ್ತಿರುವುದು ಗಮನಕ್ಕೆ ಬಂತು. ಈ ಬಗ್ಗೆ ಪ್ರಶ್ನಿಸಿದೆ, ಆದರೆ ಆತ ಮೊಬೈಲ್ ಕಿತ್ತುಕೊಂಡೆ. ಆದರೆ ಪಾಸ್ವರ್ಡ್ ಹಾಕಿ ಮೊಬೈಲ್ ತೋರಿಸಲು ನಿರಾಕರಿಸಿದ. ಆತನ ಹಿಂದೆ ಓಡಿದರು ಪರಾರಿಯಾದ. ಈ ಬಗ್ಗೆ ಮೆಟ್ರೋ ಸ್ಟೇಷನ್ನಲ್ಲಿ ದೂರು ನೀಡಿದ್ದೇನೆ. ಪೊಲೀಸ್ ಠಾಣೆಯಲ್ಲೂ ದೂರು ಕೊಡುತ್ತೇನೆ' ಎಂದು ಯುವತಿಯೊಬ್ಬರು ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿದ್ದು, ಸದ್ಯ ವಿಡಿಯೋ ವೈರಲ್ ಆಗಿದೆ.
ಬೆಂಗಳೂರು ಮೆಟ್ರೋ ರೈಲಿನಲ್ಲಿ ಸೌಪಿಕ ಎನ್ನುವ ಯುವತಿಯೊಬ್ಬರು ಪ್ರಯಾಣಿಸುತ್ತಿದ್ದರು. ಈ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಆಕೆಯ ವೀಡಿಯೊವನ್ನು ರಹಸ್ಯವಾಗಿ ಸೆರೆಹಿಡಿಯುತ್ತಿದ್ದನ್ನು ಗಮನಿಸಿದ್ದಾರೆ. ಈ ಬಗ್ಗೆ ವಿಡಿಯೋ ಹಂಚಿಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಫ್ಐಆರ್ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ. ಕಹಿ ಘಟನೆ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಹಂಚಿಕೊಂಡಿದ್ದರು. ಸದ್ಯ ಜೀವಭಯದಿಂದಾಗಿ, ಆತ ಕುಟುಂಬಕ್ಕೆ ಸಮಸ್ಯೆನ್ನುಂಡು ಮಾಡುವ ಆತಂಕದಲ್ಲಿ ಡಿಲೀಟ್ ಮಾಡಿದ್ದಾರೆ.
ಮಂಗಳವಾರ ಮಧ್ಯಾಹ್ನ 4:30ರ ಸುಮಾರಿಗೆ ಬೆಂಗಳೂರಿನ ವೈಟ್ಫೀಲ್ಡ್ ಮೆಟ್ರೋ ರೈಲಿನಲ್ಲಿ ಈ ಘಟನೆ ನಡೆದಿದೆ ಎಂದು ಮಹಿಳೆ ತನ್ನ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ತಿಳಿಸಿದ್ದಾರೆ. ನನಗೆ ನಿಜ ಈಗ ತುಂಬಾನೆ ಕೈಕಾಲು ನಡುಗುತ್ತಿದೆ. ವ್ಯಕ್ತಿಯೊಬ್ಬ ನನ್ನ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ. ನನ್ನ ಬಟ್ಟೆ ಬಗ್ಗೆ ಕಾಮೆಂಟ್ ಮಾಡುವ ಮುನ್ನ ನೋಡಿ ನಾನು ಫಾರ್ಮಲ್ ಬಟ್ಟೆ ಧರಿಸಿದ್ದೇನೆ. ಎಲ್ಲಿಯೂ ನನ್ನ ಚರ್ಮ ಕಾಣುತ್ತಿಲ್ಲ ಎಂದರು. ಹೀಗಿದ್ದರೂ ಆತನು ನನ್ನ ವಿಡಿಯೋ ರೆಕಾರ್ಡ್ ಮಾಡಿದ್ದಾನೆ. ಆತನ ಕುಟುಂಬಸ್ಥರನ್ನು, ಆತನನ್ನು ದಯವಿಟ್ಟು ಹುಡುಕಿಕೊಡಿ ಎಂದು ಮನವಿ ಮಾಡಿದ್ದಾರೆ.
ಮುಂದುವರೆದು ಅವರು ಆ ವ್ಯಕ್ತಿಯ ಮುಖ ಸೆರೆಹಿಡಿದ ವಿಡಿಯೋ ಹಂಚಿಕೊಳ್ಳುತ್ತಾ..ಅವರೊಂದಿಗಿನ ಸಂಭಾಷಣೆಯನ್ನು ರಿಲೀಸ್ ಮಾಡಿದ್ದಾರೆ ನೀವು ನನ್ನನ್ನು ಏಕೆ ರೆಕಾರ್ಡ್ ಮಾಡುತ್ತಿದ್ದೀರಿ?" ಎಂದು ಪದೇ ಪದೇ ಪ್ರಶ್ನಿಸಿದ್ದಾರೆ. ಇಲ್ಲ ನಾನು ರೆಕಾರ್ಡ್ ಮಾಡಿಲ್ಲ ಎನ್ನುತ್ತಾನೆ ಆತ. ಆಗ ಮೊಬೈಲ್ ಅನ್ನು ಸೆಕ್ಯುರಿಟಿಗೆ ನೀಡುತ್ತಾರೆ. ಯಾಕೆ ವಿಡಿಯೋ ರೆಕಾರ್ಡ್ ಮಾಡ್ತೀರಾ ಎಂದಾಗ ಇಲ್ಲ ರೆಕಾರ್ಡ್ ಮಾಡಿಲ್ಲ ಎನ್ನುತ್ತಾರೆ.
ಮೆಟ್ರೋ ಲಿಫ್ಟ್ನಲ್ಲಿ ಮುಂದುವರಿದ ಸಂಭಾಷಣೆಯ ವೇಳೆ, ತಾನು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವುದಾಗಿ ಮಹಿಳೆ ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ಆ ವ್ಯಕ್ತಿ "ನನಗೆ ಕ್ಷಮಿಸಿ" ಎಂದಿದ್ದು, ನೀವು ರೆಕಾರ್ಡ್ ಮಾಡಿದ್ದನ್ನು ಒಪ್ಪಿಕೊಳ್ಳುತ್ತೀರಾ ಎಂದು ಕೇಳಿದಾಗ "ಇಲ್ಲ" ಎಂದು ನುಣುಚಿಕೊಳ್ಳಲು ಯತ್ನಿಸಿದ್ದಾನೆ. ಆದರೆ ಆತನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದು, ತಕ್ಕ ಶಿಕ್ಷೆ ಕೊಡಿಸುವುದಾಗಿ ಮಹಿಳೆ ಎಚ್ಚರಿಕೆ ನೀಡಿದ್ದಾರೆ.
ಕೊನೆಗೆ ಪಾಸ್ವರ್ಡ್ ಓಪನ್ ಮಾಡುವ ಗಳಿಗೆಯಲ್ಲಿ ಮೊಬೈಲ್ ಕಿತ್ತುಕೊಂಡು ಜಾಗದಿಂದ ಪರಾರಿಯಾದದ್ದು ಕಂಡುಬಂದಿದೆ. ಸದ್ಯ ಮೆಟ್ರೋ ನಿಲ್ದಾಣದಲ್ಲಿ ದೂರು ದಾಖಲಿಸಿದ್ದು, 7 ದಿನಗಳಲ್ಲಿ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು ಎಂದೂ ಅವರು ತಿಳಿಸಿದ್ದಾರೆ.
ಕಾಡುಗೋಡಿ ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರು ದಾಖಲಿಸಿದ್ದಾಗಿ ಮಹಿಳೆ ಮತ್ತೊಂದು ವಿಡಿಯೋದಲ್ಲಿ ಮಾಹಿತಿ ನೀಡಿದ್ದಾರೆ. ಕಾಡುಗೋಡಿ ಪೊಲೀಸರು ತಕ್ಷಣವೇ ಸ್ಪಂದಿಸಿ ಎಫ್ಐಆರ್ ದಾಖಲಿಸಿದ್ದು, ತನಿಖೆ ಮುಂದುವರಿಸಿದ್ದಾರೆ. ಅಲ್ಲದೆ, ತನಿಖಾಧಿಕಾರಿಗಳು ವಿಡಿಯೋದಲ್ಲಿರುವ ವ್ಯಕ್ತಿಯನ್ನು ಹೋಲುವ ಕೆಲವರನ್ನು ಗುರುತಿಸಿದ್ದು, ಶೀಘ್ರದಲ್ಲೇ ಹೆಚ್ಚಿನ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ ಎನ್ನುವುದನ್ನು ಯುವತಿ ಉಲ್ಲೇಖಿಸಿದ್ದಾರೆ. ಜೊತೆಗೆ ನಿಮಗೆ ದೌರ್ಜನ್ಯವಾಗುತ್ತಿದ್ದರೆ ಸುಮ್ಮನೆ ಕೂರಬೇಡಿ. ಮೊದಲು ನಿಮ್ಮ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿ ಎಂದು ಸಲಹೆ ಕೊಟ್ಟಿದ್ದಾರೆ.
ಮೆಟ್ರೋ ಅಪ್ಡೇಟ್ ಎಂದು ಮತ್ತೊಂದು ವಿಡಿಯೋವನ್ನು ಸೌಪಿಕಾ ಹಂಚಿಕೊಂಡಿದ್ದು ಇದರಲ್ಲಿ, ಪೊಲೀಸ್ ಕೇಸ್ ಓಡಾಟದ ಭಯದ ಬಗ್ಗೆ ಮಾತನಾಡಿದ್ದಾರೆ. ನನಗೆ ತುಂಬಾ ಭಯವಾಗುತ್ತಿದೆ. ಪೊಲೀಸ್ ಕೇಸ್ ಅಥವಾ ಇಂತಹ ವಿಷಯಗಳಲ್ಲಿ ನನಗೆ ಯಾವುದೇ ಅನುಭವವಿಲ್ಲ. ಆದರೆ ನಾನು ಮಾಡಿದ್ದು ಸರಿ ಎಂದೂ ನನಗೆ ತಿಳಿದಿದೆ. ಸೋಷಿಯಲ್ ಮೀಡಿಯಾ ಮೂಲಕ ಆ ವ್ಯಕ್ತಿಯನ್ನು ಹುಡುಕಬೇಕೆಂಬುದು ನನ್ನ ಉದ್ದೇಶವಾಗಿತ್ತು ಮತ್ತು ನಾವು ಅವನನ್ನು ಹುಡುಕಿದೆವು. ಈಗ, ಆ ವೀಡಿಯೊವನ್ನು ಇನ್ಮುಂದೆ ಹಂಚಿಕೊಳ್ಳುವುದರಲ್ಲಿ ಯಾವುದೇ ಅರ್ಥವಿಲ್ಲ. ಅದನ್ನು ಹಾಗೆಯೇ ಬಿಟ್ಟುಬಿಡಬೇಕಿತ್ತೇ ಎಂದು ಇಡೀ ರಾತ್ರಿ ಯೋಚಿಸುತ್ತಾ ಕಳೆದೆ. ಹಾಗಿದ್ದರೆ ಈ ಭಯ ಮತ್ತು ತಲೆನೋವು ಇರುತ್ತಿರಲಿಲ್ಲ. ಅಳುತ್ತಲೇ ನಿದ್ರೆಗೆ ಜಾರಿದೆ ಎಂದಿದ್ದಾರೆ.
ಆದರೆ, ಈ ಪುರುಷರು ಹೀಗೆ ಮಾಡಲು ಕಾರಣವೇ ಇದು. ಹುಡುಗಿಯರು ಮೌನವಾಗಿರುತ್ತಾರೆ ಎಂದು ಅನುಚಿತವಾಗಿ ವರ್ತಿಸುತ್ತಾರೆ. ಅವನು ಅಥವಾ ಅವನ ಕುಟುಂಬದವರು ಸೇಡು ತೀರಿಸಿಕೊಳ್ಳಲು ಪ್ರಯತ್ನಿಸುವ ಸಾಧ್ಯತೆಯಿದೆ. ಆ ಬಗ್ಗೆ ನನಗೆ ಭಯವಿದೆ ಎಂದು ಹೇಳಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆದ ಕೂಡಲೇ, ಬೆಂಗಳೂರು ನಗರ ಪೊಲೀಸ್ ಇಲಾಖೆಯು ವಿಡಿಯೋದ ಕಾಮೆಂಟ್ ವಿಭಾಗದ ಮೂಲಕ ಮಹಿಳೆಯನ್ನು ಸಂಪರ್ಕಿಸಿ ಘಟನೆಯ ನಿಖರವಾದ ಸ್ಥಳ ಮತ್ತು ಸಂಪರ್ಕ ಸಂಖ್ಯೆಯನ್ನು ಹಂಚಿಕೊಳ್ಳುವಂತೆ ಕೋರಿತ್ತು.