ಪಶ್ಚಿಮ ಪಾಲಿಕೆ ವ್ಯಾಪ್ತಿಯಲ್ಲಿ ಗಣತಿ ನಮೂನೆ ಹಂಚಿಕೆ, ಸಂಗ್ರಹ ಮತ್ತು ಡಿಜಿಟೈಸೇಶನ್ ಕೆಲಸಗಳಿಗೆ ವೇಗ ನೀಡಿ, ಶೇ.100 ಕೆಲಸ ಪೂರ್ಣಗೊಳಿಸಿದ ಬಗ್ಗೆ ಬಿಎಲ್‌ಒಗಳು ಖಚಿತಪಡಿಸಿಕೊಳ್ಳಬೇಕು. ನಮೂನೆಯಲ್ಲಿ ಮೊದಲೇ ಮುದ್ರಣಗೊಂಡಿರುವ ಮತದಾರರ ವಿಳಾಸಕ್ಕೆ ಮತಗಟ್ಟೆ ಅಧಿಕಾರಿಗಳು ಭೇಟಿ ನೀಡಲೇಬೇಕು. ನಮೂನೆ ಹಂಚಿಕೆ ಕೆಲಸಗಳು ಸೋಮವಾರ ಸಾಯಂಕಾಲದ ಒಳಗೆ ಪೂರ್ಣಗೊಳ್ಳಬೇಕು. ಈ ಬಗ್ಗೆ ವಿಫಲಗೊಂಡ ಬಿಎಲ್‌ಒ ಮತ್ತು ಸಂಬಂಧಿತ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ಎಚ್ಚರಿಸಿದರು.