ಜಾಹೀರಾತು ನಿಯಮ ಉಲ್ಲಂಘನೆಗೆ ಕೆಎಸ್ಸಿಎಗೆ ಕೇಂದ್ರ ಪಾಲಿಕೆ ನೋಟಿಸ್ |gba
ಜಿಬಿಎ
Published on:
Copied
Follow Us
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಕ್ರೀಡಾಂಗಣದ ಒಳಗೆ ಮತ್ತು ಹೊರಗೆ ಬೋರ್ಡ್ಗಳು ಮತ್ತು ಜಾಹೀರಾತು ಫಲಕಗಳನ್ನು ಅಳವಡಿಸಿದ ಹಿನ್ನೆಲೆಯಲ್ಲಿ -ಜಾಹೀರಾತು ನಿಯಮ ಉಲ್ಲಂಘನೆ ಆರೋಪದ ಮೇಲೆ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ (ಕೆಎಸ್ಸಿಎ) ವಿರುದ್ಧ ಕೇಂದ್ರ ಪಾಲಿಕೆ ನೋಟೀಸ್ ಜಾರಿಗೊಳಿಸಿದೆ.
ಜಿಬಿಎ ಜಾಹೀರಾತು ವಿಭಾಗದ ಅಧಿಕಾರಿಗಳು 2020ರ ಕಾಯ್ದೆ ಹಾಗೂ ಬೈಲಾ ಪ್ರಕಾರ, ವಿಶೇಷವಾಗಿ ಸೆಕ್ಷನ್ 158 ಅಡಿಯಲ್ಲಿ, ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ಗೆ ಎರಡು ಪುಟಗಳ ನೋಟೀಸ್ ನೀಡಿ, 7 ದಿನಗಳೊಳಗೆ ಸ್ಪಷ್ಟನೆ ನೀಡುವಂತೆ ಸೂಚಿಸಿದ್ದಾರೆ.
ಜಾಹೀರಾತು ಅಳವಡಿಸುವ ಮೊದಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮುಖ್ಯ ಆಯುಕ್ತರ ಲಿಖಿತ ಅನುಮತಿ ಇಲ್ಲದಿರವುದು, ಜಾಹೀರಾತು ಪ್ರದರ್ಶನಕ್ಕೆ ಅಗತ್ಯವಾದ ಶುಲ್ಕವನ್ನು ಪಾವತಿಸದಿರುವುದು ಪ್ರಮುಖ ಅರೋಪವಾಗಿದೆ.
ನಿಯಮಗಳೇನು?: ಸೆಕ್ಷನ್ 158 ಪ್ರಕಾರ, ಯಾವುದೇ ಜಾಹೀರಾತು ಪ್ರದರ್ಶನಕ್ಕೆ ಮುಖ್ಯ ಆಯುಕ್ತರ ಲಿಖಿತ ಅನುಮತಿ ಕಡ್ಡಾಯವಾಗಿದೆ. ಅನುಮತಿ ಇಲ್ಲದೆ ಜಾಹೀರಾತು ಪ್ರದರ್ಶನ ಕಾನೂನುಬಾಹಿರವಾಗಿದೆ. ಉಲ್ಲಂಘನೆ ಮಾಡಿದರೆ 2 ಲಕ್ಷ ರೂ.ವರೆಗೆ ದಂಡ,1 ವರ್ಷದ ವರೆಗೆ ಜೈಲು ಶಿಕ್ಷೆ ನೀಡುವ ಸಾಧ್ಯತೆ ಇದೆ.
ಏಳು ದಿನಗಳೊಳಗೆ ಅನಧಿಕೃತ ಬೋರ್ಡ್ಗಳನ್ನು ತೆರವುಗೊಳಿಸಬೇಕು ಇಲ್ಲದಿದ್ದರೆ ಜಿಬಿಎಯೇ ತೆರವುಗೊಳಿಸಿ, ದಂಡ ವಿಧಿಸಲಾಗುವುದು, ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.