ರೈತ ಸಂತೆಯಲ್ಲಿ ವಿವಿಯ ವಿವಿಧ ವಿಭಾಗಗಳು ಅಭಿವೃದ್ಧಿಪಡಿಸಿರುವ ಕೃಷಿ ಪರಿಕರಗಳು ಹಾಗೂ ರೈತ ಉತ್ಪಾದಕ ಸಂಘಗಳು (ಎಫ್ಪಿಒ) ಸಿದ್ಧಪಡಿಸಿರುವ ವಸ್ತುಗಳು ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗುತ್ತದೆ. ಈ ಬಾರಿ ವಿಶೇಷವಾಗಿ ಬೇಸಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕೃಷಿಕರಿಂದ ಕಲ್ಲಂಗಡಿ, ಕರಬೂಜ, ದ್ರಾಕ್ಷಿ ಹಣ್ಣುಗಳ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಸಾವಯವ ಹಾಗೂ ಸಿರಿಧಾನ್ಯ ಉತ್ಪನ್ನಗಳು, ಅಣಬೆ, ಹಣ್ಣು-ತರಕಾರಿ, ಪಾನೀಯ ಮಿಶ್ರಣ, ಸ್ವಸಹಾಯ ಗುಂಪುಗಳು ತಯಾರಿಸಿರುವ ತರಾವರಿ ಉತ್ಪನ್ನಗಳು ರಿಯಾಯಿತಿ ದರದಲ್ಲಿ ಖರೀದಿಗೆ ಲಭ್ಯವಿರಲಿದೆ ಎಂದು ವಿವಿಯ ಅಧಿಕಾರಿಗಳು ತಿಳಿಸಿದ್ದಾರೆ.