2020ರಲ್ಲಿ ಕೋವಿಡ್ ಕಾರಣದಿಂದ ಚುನಾವಣೆ ನಡೆಸಲು ಸಾಧ್ಯವಾಗದೆ ಚುನಾವಣಾ ಆಯೋಗ ಚುನಾವಣೆ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತ್ತು. ಗ್ರಾಪಂ ಸದಸ್ಯರ ಅವಧಿ ಮುಕ್ತಾಯ ಆಗುತ್ತಿದ್ದಾಗ ಅಂದು ಪ್ರತಿಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಿ.ಕೆ. ಶಿವಕುಮಾರ್ ಜಂಟಿ ಸುದ್ದಿಗೋಷ್ಠಿ ನಡೆಸಿ ಅಂದಿನ ಸಿಎಂ ಯಡಿಯೂರಪ್ಪಗೆ ಆಡಳಿತ ಸಮಿತಿಯ ಅವಧಿಯನ್ನೇ 6 ತಿಂಗಳು ಮುಂದುವರಿಸುವಂತೆ ಒತ್ತಾಯ ಮಾಡಿದ್ದರು ಎಂದು ನೆನಪಿಸಿದ್ದು, ಅವಧಿ ವಿಸ್ತರಣೆ ಮಾಡದೆ ಇದ್ದರೆ ಹೋರಾಟ ನಡೆಸುವುದಾಗಿ ಕಾಡುಶೆಟ್ಟಿಹಳ್ಳಿ ಸತೀಶ್ ತಿಳಿಸಿದ್ದಾರೆ.