ಮೋದಿ ಭೇಟಿ ಯಶಸ್ವಿಗೊಳಿಸಲು ಎಲ್ಲರ ಶ್ರಮ ಅಗತ್ಯ: ಮಾಜಿ ಸಚಿವ ಅರವಿಂದ ಲಿಂಬಾವಳಿ.
ಮಹದೇವಪುರ ಕ್ಷೇತ್ರದ ಬಿಜೆಪಿ ವತಿಯಿಂದ ಮಾರತ್ತಹಳ್ಳಿಯ ಎಸ್.ಬಿ.ಆರ್ ಪ್ಯಾಲೆಸ್ ನಲ್ಲಿ ಶಾಸಕಿ ಮಂಜುಳಾ ಮತ್ತು ಮಾಜಿ ಸಚಿವ ಅರವಿಂದ ಲಿಂಬಾವಳಿ ನೇತೃತ್ವದಲ್ಲಿ ಪೂರ್ವಭಾವಿ ಸಿದ್ಧತಾ ಸಭೆ ನಡೆಸಿದರು.
Published on:
Copied
Follow Us
ಮಹದೇವಪುರ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಬೆಂಗಳೂರು ಭೇಟಿ ನೀಡುತ್ತಿರುವ ಹಿನ್ನಲೆಯಲ್ಲಿ ಮಹದೇವಪುರ ಕ್ಷೇತ್ರದ ಬಿಜೆಪಿ ವತಿಯಿಂದ ಮಾರತ್ತಹಳ್ಳಿಯ ಎಸ್.ಬಿ.ಆರ್ ಪ್ಯಾಲೆಸ್ ನಲ್ಲಿ ಶಾಸಕಿ ಮಂಜುಳಾ ಮತ್ತು ಮಾಜಿ ಸಚಿವ ಅರವಿಂದ ಲಿಂಬಾವಳಿ ನೇತೃತ್ವದಲ್ಲಿ ಪೂರ್ವಭಾವಿ ಸಿದ್ಧತಾ ಸಭೆ ನಡೆಸಿದರು.
ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ಇದೇ ಮೇ 10ರಂದು ನಡೆಯಲಿರುವ ಸಂಸ್ಥೆಯ 45ನೇ ವಾರ್ಷಿಕೋತ್ಸವ ಹಾಗೂ ಶ್ರೀ ರವಿಶಂಕರ್ ಗುರೂಜಿಯವರ 70ನೇ ಜನ್ಮದಿನದ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಭಾಗವಹಿಸಲಿದ್ದು, ಈ ಭೇಟಿ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಕ್ಷೇತ್ರದ ಎಲ್ಲ ವಾರ್ಡ್ ಮಟ್ಟದಿಂದ ಜನರು ಭಾಗವಹಿಸಬೇಕು ಎಂದು ಅರವಿಂದ ಲಿಂಬಾವಳಿ ತಿಳಿಸಿದರು.
ಈ ನಿಟ್ಟಿನಲ್ಲಿ ನಗರ ಮಂಡಲ ಹಾಗೂ ಗ್ರಾಮಾಂತರ ಮಂಡಲಗಳ ಅಧ್ಯಕ್ಷರುಗಳು ಹಾಗೂ ಎ್ಲ ಮುಖಂಡರುಗಳು ಜನರನ್ನು ಸೇರಿಸುವ ಜವಾಬ್ದಾರಿ ತೆಗದುಕೊಳ್ಳಬೇಕು. ಎಲ್ಲರು ತಮಗೆ ನೀಡಿರುವ ಜವಾಬ್ದಾರಿಯನ್ನು ಅನುಸರಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸೋಣ ಎಂದರು ಸೂಚಿಸಿದರು.
ಈ ವೇಳೆ ನಗರ ಮಂಡಲ ಅಧ್ಯಕ್ಷ ಎನ್.ಆರ್. ಶ್ರೀಧರ ರೆಡ್ಡಿ, ಗ್ರಾಮಾಂತರ ಮಂಡಲ ಅಧ್ಯಕ್ಷ ಹೆಚ್ ಎಸ್ ಪಿಳ್ಳಪ್ಪ, ರಾಜ್ಯ ಪರಷತ್ ಸದಸ್ಯ ಎಲ್.ರಾಜೇಶ್, ಮುಖಂಡರಾದ ಲೋಕನಾಥ್ ರೆಡ್ಡಿ, ಯಮಲೂರು ಲೋಕೇಶ್, ಬೈರತಿ ಕುಮಾರ್, ನಾಗೇಶ್ ರೆಡ್ಡಿ, ಕೆ.ವಿ.ನಾಗರಾಜ್, ಮಂಜುನಾಥ್ ಇನ್ನಿತರರಿದ್ದರು.